ರೋಟರಿ – ರೋಟರಾಕ್ಟ್ ಸಂಯುಕ್ತ ಆಶ್ರಯದಲ್ಲಿ ಸಿಪಿಆರ್ ಮಾಹಿತಿ ಕಾರ್ಯಕ್ರಮ

0
38

ರೋಟರಿ ಕ್ಲಬ್ ಕಾರ್ಕಳ, ರೋಟರಾಕ್ಟ್ ಕ್ಲಬ್ ಕಾರ್ಕಳ ಹಾಗೂ ವರ್ಧಮಾನ ಎಜುಕೇಶನ್ ಇನ್ಸ್ಟಿಟ್ಯೂಷನ್ ಸಾಣೂರ್ ಮತ್ತು ಮುನಿಯಾಲ್ ಆಯುರ್ವೇದಿಕ್ ಮೆಡಿಕಲ್ ಕಾಲೇಜ್ ಮಣಿಪಾಲ್ ಇದರ ಜಂಟಿ ಆಶ್ರಯದಲ್ಲಿ ನಡೆದಂತಹ ಸಿ ಪಿ ಆರ್ ಮಾಹಿತಿ ಕಾರ್ಯಗಾರ ಮತ್ತು ಪ್ರಥಮ ಚಿಕಿತ್ಸೆಯ ಬಗ್ಗೆ ಮಾಹಿತಿ ಕಾರ್ಯಕ್ರಮ ನಡೆಸಲಾಯಿತು.

ವರ್ಧಮಾನ್ ಸಂಸ್ಥೆಯ ಮುಖ್ಯಸ್ಥರಾದ ಶಶಿಕಲಾ ಹೆಗ್ಡೆ ಹಾಗೂ ರೋಟರಾಕ್ಟ್ ಕ್ಲಬ್ ಕಾರ್ಕಳ ಇದರ ಅಧ್ಯಕ್ಷರಾದ Rtr ಸಂದೇಶ್, ರೋಟರಾಕ್ಟ್ ಕ್ಲಬ್ ಮುನಿಯಾಲ್ ಇದರ ಅಧ್ಯಕ್ಷರಾದ Rtr ಶಿವಾನಿ ಹಾಗೂ ಕಾರ್ಯಕ್ರಮದ ಮುಖ್ಯ ಆಹ್ವಾನಿತರಾದ ಹರ್ಷಿತ ಎಂ ರಾವ್ ಉಪಸ್ಥಿತರಿದ್ದು ಮಾತನಾಡಿದರು.

ಅಸಿಸ್ಟೆಂಟ್ ಲೆಕ್ಚರ್ ಇನ್ ಡಿಪಾರ್ಟ್ಮೆಂಟ್ ಆಫ್ ಶೈಲ ತಂತ್ರ ಇವರು ಸಿಪಿಆರ್ ಹಾಗೂ ಪ್ರಥಮ ಚಿಕಿತ್ಸೆ ಬಗ್ಗೆ ಮತ್ತು ಸಿ ಪಿ ಆರ್ ತಂತ್ರಜ್ಞಾನದ ಮೂಲಕ ಎಲ್ಲಾ ಮಕ್ಕಳಿಗೆ ಪಿಪಿಟಿ ಹಾಗೂ ಪಿಪಿಟಿ ಮಾದರಿಯನ್ನು ನೀಡಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಕಾರ್ಕಳ ರೋಟರಿ ಕ್ಲಬ್ಬಿನ ಪಾಸ್ಟ್ ಪ್ರೆಸಿಡೆಂಟ್ ಡಿಸ್ಟ್ರಿಕ್ಟ್ ವೈಸ್ ಛೇರ್ಮನ್ ಪಬ್ಲಿಕ್ ಇಮೇಜ್ Rtn ರೇಖಾ ಸೌಜನ್ಯ ಉಪಾಧ್ಯಾಯ ಇವರು ಮಕ್ಕಳನ್ನು ಉದ್ದೇಶಿಸಿ ಮಕ್ಕಳ ಕಾಳಜಿ ಮತ್ತು ದೈನಂದಿನ ಚಟುವಟಿಕೆಗಳ ಬಗ್ಗೆ ಮಾಹಿತಿಯನ್ನು ತಿಳಿಸಿದರು.

ಶಶಿಕಲಾ ಹೆಗ್ಡೆ ಇವರು ಸಿಪಿಆರ್ ಕಲಿಕೆಯ ಬಗ್ಗೆ ಮಕ್ಕಳಿಗೆ ಮಾಹಿತಿಯನ್ನು ನೀಡಿದರು. Rtr ಕರ್ತವ್ಯ ಜೈನ್ ಇವರು ಕಾರ್ಯಕ್ರಮವನ್ನು ನಿರೂಪಿಸಿ ಸೆಕ್ರೆಟರಿ Rtr ಅನ್ವಯ್ ಇವರು ವಂದಿಸಿದರು.

LEAVE A REPLY

Please enter your comment!
Please enter your name here