ಮುಂಬೈ : ಎಚ್.ಡಿ.ಎಫ್.ಸಿ. ಬ್ಯಾಂಕ್ ಇಂದು ಭಾರತೀಯ ರಿಜರ್ವ್ ಬ್ಯಾಂಕ್ ನ ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ (ಸಿಬಿಡಿಸಿ) ಡಿಜಿಟಲ್ ರೂಪಾಯಿಯನ್ನು(e₹) ತನ್ನ ಆನ್ಲೈನ್ ಮರ್ಚೆಂಟ್ ಪೇಮೆಂಟ್ ಪ್ಲಾಟ್ ಫಾರಂ, ಸ್ಮಾರ್ಟ್ ಗೇಟ್ ವೇಗೆ ಸೇರ್ಪಡೆಯನ್ನು ಪ್ರಕಟಿಸಿದೆ. ಈ ಸೇರ್ಪಡೆಯು ವ್ಯಾಪಾರಿಗಳಿಗೆ ಸುರಕ್ಷಿತ, ಶೂನ್ಯ ವೆಚ್ಚದ ಮತ್ತು ಸರ್ಕಾರದ ಬೆಂಬಲಿತ ಡಿಜಿಟಲ್ ಪಾವತಿಯ ಆಯ್ಕೆಯನ್ನು ಎಚ್.ಡಿ.ಎಫ್.ಸಿ. ಬ್ಯಾಂಕ್ ಚೆಕೌಟ್ ಇಕೊಸಿಸ್ಟಂ ಒಳಗಡೆ ನೀಡುತ್ತದೆ.
ಈ ಉನ್ನತೀಕರಣದಿಂದ ಸ್ಮಾರ್ಟ್ ಗೇಟ್ ವೇ ವ್ಯಾಪಾರಿಗಳು ಈಗ ಪಾವತಿಗಳನ್ನು ಶೂನ್ಯ ವೆಚ್ಚದಲ್ಲಿ ಡಿಜಿಟಲ್ ರೂಪಾಯಿಯ ಮೂಲಕ ಸ್ವೀಕರಿಸಬಹುದು, ಇದರೊಂದಿಗೆ ಯುಪಿಐ, ಕಾರ್ಡ್ ಗಳು ಮತ್ತು ನೆಟ್ ಬ್ಯಾಂಕಿಂಗ್ ಇರುತ್ತದೆ. ಗ್ರಾಹಕರು ತಡೆರಹಿತ ಡಿಜಿಟಲ್ ಪಾವತಿಯ ಅನುಭವವನ್ನು ತಕ್ಷಣ ಮತ್ತು ಸುರಕ್ಷಿತವಾಗಿ ಪಡೆಯಬಹುದು. ಡಿಸೆಂಬರ್ 2025ರಂತೆ ಎಚ್.ಡಿ.ಎಫ್.ಸಿ. ಬ್ಯಾಂಕ್ 8.45 ಲಕ್ಷ ನೋಂದಾಯಿತ ಸಿಬಿಡಿಸಿ ವ್ಯಾಲೆಟ್ ಗಳಿಗೆ ಸೇವೆ ಒದಗಿಸಿದ ಪ್ರಾಯೋಗಿಕ ಬ್ಯಾಂಕುಗಳಲ್ಲಿ ಒಂದಾಗಿದ್ದು ಅದರಲ್ಲಿ 13,000-15,000 ಹೊಸ ವ್ಯಾಲೆಟ್ ಗಳನ್ನು ಪ್ರತಿ ತಿಂಗಳೂ ಸೇರ್ಪಡೆ ಮಾಡಲಾಗುತ್ತಿತ್ತು.
ಶೂನ್ಯ ವೆಚ್ಚದ ಪಡೆಯುವಿಕೆಯಿಂದ ಸಿಬಿಡಿಸಿ ವ್ಯಾಪಾರಿಗಳಿಗೆ ಭವಿಷ್ಯ ಸನ್ನದ್ಧ, ಮಧ್ಯವರ್ತಿ ಇಲ್ಲದ ಪಾವತಿಯ ವಿಧಾನವನ್ನು ನೀಡುತ್ತಿದ್ದು ಅದು ಸೆಟ್ಲ್ ಮೆಂಟ್ ನಿಶ್ಚಿತತೆ ಸುಧಾರಿಸುತ್ತದೆ ಮತ್ತು ಕಾರ್ಯಾಚರಣೆಯ ವೆಚ್ಚ ಕಡಿಮೆ ಮಾಡುತ್ತದೆ. ಗ್ರಾಹಕರಿಗೆ ಡಿಜಿಟಲ್ ರೂಪಾಯಿಯು ಅನುಕೂಲಕರ ಯುಪಿಐ ನೀಡುತ್ತಿದ್ದು ಅದಕ್ಕೆ ಆರ್.ಬಿ.ಐ. ಬೆಂಬಲಿತ ಡಿಜಿಟಲ್ ಕರೆನ್ಸಿಯು ಪ್ರತಿ ವಹಿವಾಟನ್ನೂ ವೇಗ, ಸುರಕ್ಷಿತ ಮತ್ತು ಉಚಿತವಾಗಿಸುತ್ತದೆ.
ವ್ಯಾಪಾರಿಗಳಿಗೆ ಸಿಬಿಡಿಸಿಯನ್ನು ಸ್ಮಾರ್ಟ್ ಗೇಟ್ ವೇಗೆ ಸೇರ್ಪಡೆ ಮಾಡುವ ಮೂಲಕ ಎಚ್.ಡಿ.ಎಫ್.ಸಿ. ಬ್ಯಾಂಕ್ ಗ್ರಾಹಕರಿಗೆ ಪಾವತಿಗಳನ್ನು ಮಾಡಲು ಮತ್ತೊಂದು ವಿಧಾನ ನೀಡುತ್ತಿದೆ ಮತ್ತು ಅನುಕೂಲಗಳನ್ನು ಸಾರ್ವಭೌಮದ ಬೆಂಬಲಿತ ಡಿಜಿಟಲ್ ಕರೆನ್ಸಿಯ ಅನುಕೂಲಗಳನ್ನು ವಿಸ್ತಾರ ವ್ಯಾಪಾರಗಳಿಗೆ ವಿಸ್ತರಿಸುತ್ತದೆ. ಈ ಉಪಕ್ರಮವು ಡಿಜಿಟಲ್ ಪ್ರಥಮ ನಾಯಕನಾಗಿ ಎಚ್.ಡಿ.ಎಫ್.ಸಿ. ನಾಯಕತ್ವವನ್ನು ಮರು ದೃಢೀಕರಿಸಿದೆ ಮತ್ತು ಆವಿಷ್ಕಾರಕ್ಕೆ ತನ್ನ ಮುಂದುವರಿದ ಬದ್ಧತೆಯನ್ನು ಹಾಗೂ ನಗದು ಕಡಿಮೆಯ-ಎಲ್ಲರನ್ನೂ ಒಳಗೊಳ್ಳುವ ಅರ್ಥವ್ಯವಸ್ಥೆಯನ್ನು ಭಾರತದ ಪರಿವರ್ತನೆಯನ್ನು ಬೆಂಬಲಿಸಿದೆ.

