ಮುಂಬಯಿ : ಥಾಣೆ ರೀಜನ್‌ನಲ್ಲಿ ನೋಂದಾಯಿತ ಶ್ರೀ ಶಬರಿ ಅಯ್ಯಪ್ಪ ಭಜನಾ ಮಂಡಳಿ (ರಿ.) ವತಿಯಿಂದ ವಾರ್ಷಿಕ ಕಾರ್ಯಕ್ರಮ-2026 ಹಾಗೂ ಸಾಂಸ್ಕೃತಿಕ ಮತ್ತು ನಿಧಿ ಸಂಗ್ರಹ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಆಗಸ್ಟ್ 30ರಂದು ರಾತ್ರಿ 8.30ಕ್ಕೆ ನಡೆಯಲಿರುವ ಕಾರ್ಯಕ್ರಮದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಕಲಾ ಪ್ರದರ್ಶನ ಹಾಗೂ ಹಾಸ್ಯ ಕಾರ್ಯಕ್ರಮಗಳು ಪ್ರೇಕ್ಷಕರನ್ನು ರಂಜಿಸಲಿವೆ.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಂಜೆ 4ರಿಂದ 8-30ತನಕ ಬಣ್ಣದಲ್ಲಿ ಬಗೆ ಬಣ್ಣ (ಹಾಡು,ಹಾಸ್ಯ,ಹರಟೆ,ನೃತ್ಯ) ವಿಶೇಷ ಆಕರ್ಷಣೆಯಾಗಿ Zee ಕನ್ನಡ ಕಾಮಿಡಿ ಕಿಲಾಡಿಗಳು ಖ್ಯಾತಿಯ ನಾಗರಾಜ್ ತೆಕ್ಕಟ್ಟೆ ಸಾರಥ್ಯದಲ್ಲಿ ಕಲಾಶಕ್ತಿ ಕಲಾತಂಡ ಕನ್ನುಕೆರೆ ತೆಕ್ಕಟ್ಟೆ ಕುಂದಾಪುರ ಇವರ ಹಾಸ್ಯ ಕಾರ್ಯಕ್ರಮ “ನಗೆ ಹಲವು ಬಗೆ” ಕಾಮಿಡಿ ಕಿಲಾಡಿಗಳು,ಕಲರ್ಸ್ ಕನ್ನಡ ಗಿಚ್ಚಿ ಗಿಲಿ ಗಿಲಿ ಯರ ಜುಗಲ್ ಬಂದಿ ಹಾಸ್ಯ ನಡೆಯಲಿದೆ.
ಈ ಶುಭ ಸಮಾರಂಭಕ್ಕೆ ಮುಂಬಯಿ ತುಳು ಕನ್ನಡಿಗರ ಒಕ್ಕೂಟ, ಉಲ್ಲಾಸನಗರ ಹಾಗೂ ಸೀತಾರಾಮ ಶೆಟ್ಟಿ,ಆರೂರು ( ಆರೂರು ಯಕ್ಷಭಿಮಾನಿ ಬಳಗ, ಮುಂಬಯಿ ಹಾಗೂ ಯಕ್ಷ ಕಲಾ ಪ್ರಿಯರ ಬಳಗ ,ಡೊಂಬಿವಲಿ ಶುಭ ಹಾರೈಸಿದ್ದಾರೆ.

