ಗ್ರಾಹಕರ ಸಂತೃಪ್ತಿಯೇ ಸಹಕಾರಿ ಸಂಘಗಳ ಬೆಳವಣಿಗೆಗೆ ಮೂಲ : ಸಿ. ರೋಹನ್‌ ಮೊಂತೆರೋ

0
5

ಮಂಗಳೂರು: ಗ್ರಾಹಕರಿಗೆ ಅಗತ್ಯವಿರುವ ಸವಲತ್ತುಗಳನ್ನು ಸಮಯಕ್ಕೆ ಸರಿಯಾಗಿ ಒದಗಿಸಿ ಅವರ ವಿಶ್ವಾಸವನ್ನು ಗಳಿಸುವುದೇ ಸಹಕಾರಿ ಸಂಘಗಳ ಬೆಳವಣಿಗೆಗೆ ಪ್ರಮುಖ ಕಾರಣವಾಗಿದೆ ಎಂದು ರೋಹನ್‌ ಕರ‍್ಪೋರೇಷನ್‌ನ ಮ್ಯಾನೇಜಿಂಗ್‌ ಡೈರೆಕ್ಟರ್‌ ಹಾಗೂ ಉದ್ಯಮಿ ಸಿ. ರೋಹನ್‌ ಮೊಂತೆರೋ ಹೇಳಿದರು.
ಬಲ್ಮಠದಲ್ಲಿ ಮ್ಯಾಕೋ ಸೊಸೈಟಿಯ ಎರಡನೇ ಶಾಖೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಹಕಾರಿ ಸಂಸ್ಥೆಗಳು ಸಾಮಾನ್ಯ ಜನರಿಗೆ ಸ್ವಂತ ಉದ್ಯಮ ಆರಂಭಿಸಲು ಹಾಗೂ ರ‍್ಥಿಕವಾಗಿ ಸ್ವಾವಲಂಬಿಗಳಾಗಲು ನೆರವಾಗುತ್ತಿವೆ. ಸಹಕಾರಿ ಕ್ಷೇತ್ರದ ಮೂಲಕ ಸಾಲ ಹಾಗೂ ವಿವಿಧ ಹಣಕಾಸು ಸೌಲಭ್ಯಗಳನ್ನು ಪಡೆದು ಉದ್ಯಮಗಳಲ್ಲಿ ಯಶಸ್ಸು ಸಾಧಿಸಿರುವ ಅನೇಕ ಉದಾಹರಣೆಗಳಿವೆ. ತಾವು ಕೂಡ ಮ್ಯಾಕೋ ಸೊಸೈಟಿಯ ಗ್ರಾಹಕರಾಗಿದ್ದು, ಸಂಸ್ಥೆಯ ಸಹಕಾರದಿಂದ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಹಾಗೂ ಬೆಳೆಯಲು ಸಾಧ್ಯವಾಗಿದೆ ಎಂದು ರೋಹನ್‌ ಮೊಂತೆರೋ ಹೇಳಿದರು.
ಕರ‍್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಧಾನ ಪರಿಷತ್‌ ಸದಸ್ಯ ಐವನ್‌ ಡಿʼಸೋಜಾ ಮಾತನಾಡಿ, ಸುಮಾರು ಇಪ್ಪತ್ತು ರ‍್ಷಗಳ ಹಿಂದೆ ಆರಂಭಗೊಂಡ ಮ್ಯಾಕೋ ಸೊಸೈಟಿ ಹಲವು ಮಂದಿಗೆ ರ‍್ಥಿಕ ನೆರವು ನೀಡುತ್ತಾ ಬಂದಿದೆ. ಸಂಸ್ಥೆಯ ಶ್ರಮ ಹಾಗೂ ಗ್ರಾಹಕರ ವಿಶ್ವಾಸದ ಫಲವಾಗಿ ಇದೀಗ ಎರಡನೇ ಶಾಖೆಯನ್ನು ಆರಂಭಿಸಿರುವುದು ಸಂತಸದ ವಿಚಾರವಾಗಿದೆ ಎಂದರು. ಮುಖ್ಯ ಅತಿಥಿಯಾಗಿ ಮರ‍್ಷಲ್ ಮೊಂತೇರೋ ಉಪಸ್ಥಿತರಿದ್ದರು. ಸೈಂಟ್‌ ರೀಟಾ ರ‍್ಚ್‌, ಕಾಶಿಯಾದ ರ‍್ಮಗುರು ರೆ| ಫಾದರ್‌ ರೀತೇಶ್‌ ರೋಡ್ರಿಗಸ್‌ ಆಶರ‍್ವಚನ ನೀಡಿ ಶುಭ ಹಾರೈಸಿದರು. ನಿಶಿತಾ ರ‍್ಗ್‌ ಮ್ಯಾಕೋ ಸಂಸ್ಥೆಯ ಪರವಾಗಿ ಶುಭಕೋರಿದರು.

ಸಮಾರಂಭದಲ್ಲಿ ಠೇವಣಿ, ಆರ್‌.ಡಿ., ಇ-ಸ್ಟಾಂಪಿಂಗ್‌ ಹಾಗೂ ಇನ್ಶುರೆನ್ಸ್‌ ಸೇರಿದಂತೆ ವಿವಿಧ ಸೌಲಭ್ಯಗಳ ಕುರಿತು ಗ್ರಾಹಕರಿಗೆ ಮಾಹಿತಿ ನೀಡಲಾಯಿತು.
ಸಿರಿಲ್‌ ಡಿʼಸೋಜಾ ಸ್ವಾಗತಿಸಿದರು. ನಿಶಿತಾ ಶೆಟ್ಟಿ ವಂದಿಸಿದರು. ವಸಂತ ಶೆಟ್ಟಿ ಕರ‍್ಯಕ್ರಮ ನಿರ‍್ವಹಿಸಿದರು.

ಈ ಸಂದರ‍್ಭದಲ್ಲಿ ವಿವಿಯನ್ ಪಿಂಟೋ, ಜೇಮ್ಸ್ ಪ್ರವೀಣ್, ಹಬೀಬುಲ್ಲಾ ಕಣ್ಣೂರು, ಸೆರಿಲ್ ಡಿಸೋಜಾ, ಕರ‍್ಮಿಕ ಪರಿಷತ್ ನ ಅಪ್ಪು ಸ್ವಾಮಿ,ದರ್ಮಪ್ಪ, ದಯಾನಂದ್, ಆಟೋರಿಕ್ಷಾ ಚಾಲಕರ-ಮಾಲಕರ ಸಂಘದ ಅನಿಲ್ ಗಿರಾಲ್ಡ್ ಲೋಬೋ, ವುಲ್ಫ್ರೆಡ್, ಹಾಗೂ ಗಣೇಶ್ ಉಪಸ್ಥಿತರಿದ್ದರು.