ಮೂಡುಬಿದಿರೆ : ನಂಬಿಕೆ ಅರ್ಹ ಗ್ರಾಹಕರು ಸೊಸೈಟಿಯಲ್ಲಿ ತಮ್ಮ ವ್ಯವಹಾರ ಮಾಡಿದ್ದಲ್ಲಿ, ಸೊಸೈಟಿಯು ತನ್ನಿಂದ ತಾನೇ ಅಭಿವೃದ್ಧಿಯಾಗುತ್ತದೆ. ಸೊಸೈಟಿಯ ಸಿಬ್ಬಂದಿಗಳು ಕೂಡ ಆತ್ಮೀಯ ರೀತಿಯಲ್ಲಿ ಸೇವೆ ನೀಡಿದ್ದಲ್ಲಿ ಬಹಳಷ್ಟು ಗ್ರಾಹಕರನ್ನು ಆಕರ್ಷಿಸಲು ಸಾಧ್ಯವಿದೆ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಯು ಇನ್ನಷ್ಟು ಅಭಿವೃದ್ಧಿಯಾಗಲಿ ಎಂದು ಸಂಘ ಬೆಟ್ಟು ಗ್ರಾಮ ಪಂಚಾಯತ್ ಕಾರ್ಯದರ್ಶಿಯಾದ ರೋಹಿಣಿ ಶೆಟ್ಟಿ ರವರು ನುಡಿದರು..
ಅವರು ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಯ ಮೂಡುಬಿದಿರೆ ಶಾಖೆಯಲ್ಲಿ ನಡೆದ ಗ್ರಾಹಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮುಖ್ಯ ಅತಿಥಿಯಾಗಿ ಜನತಾ ಕೋ ಆಪರೇಟಿವ್ ಸೊಸೈಟಿ ಮೂಡುಬಿದಿರೆಯ ಮ್ಯಾನೇಜಿಂಗ್ ಡೈರೆಕ್ಟರ್ ಕ್ರಿಸ್ಟೋಫರ್ ಮ್ಯಾಕ್ಸಿಮ್ ಡಿಸೋಜ ರವರು ಸಾಂದರ್ಭಿಕವಾಗಿ ನುಡಿದರು.
ಮೂಡಬಿದ್ರೆ ಶಾಖಾ ಪ್ರಬಂಧಕರಾದ ಅಭಿಷ್ಟಾ ಜೈನ್ ರವರ ಸ್ವಾಗತಿಸಿ, ವಿನಿತಾ ವಿಲ್ಮಾ ಡಿಸೋಜ ರವರು ವಂದಿಸಿದರು.

