
ಕಾಸರಗೋಡು ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ದೀಪಾವಳಿಯ ಪ್ರಯುಕ್ತ ದೇವರಿಗೆ ವಿಶೇಷ ಪೂಜೆ ಹಾಗೂ ಬಲೀಂದ್ರ ಪೂಜೆ ಕ್ಷೇತ್ರ ಅರ್ಚಕರಾದ ಸೂರ್ಯ ನಾರಾಯಣ ನಾವಡ ಇವರ ಕಾರ್ಮಿಕತ್ವದಲ್ಲಿ ಜರಗಿತು.
ಈ ಸಂದರ್ಭದಲ್ಲಿ ಕ್ಷೇತ್ರದ ಪ್ರಮುಖರಾದ ಡಾl ಕೆ.ಎನ್. ವೆಂಕಟ್ರಮಣ ಹೊಳ್ಳ, ಕಾಸರಗೋಡು ನಗರ ಸಭಾ ಸದಸ್ಯ ಕೆ.ಎನ್.ರಾಮಕೃಷ್ಣ ಹೊಳ್ಳ, ವಿ.ಎಚ್.ಪಿ. ಕಣ್ಣೂರು ವಿಭಾಗ ಜಂಟಿ ಕಾರ್ಯದರ್ಶಿ ಸಂಕಪ್ಪ ಭಂಡಾರಿ, ಗುರುಪ್ರಸಾದ್ ಕೋಟೆಕಣಿ, ವಿ.ಎಚ್.ಪಿ. ಕಣ್ಣೂರು ವಿಭಾಗ ಜಂಟಿ ಕಾರ್ಯದರ್ಶಿ ಸಂಕಪ್ಪ ಭಂಡಾರಿ, ಶ್ರೀನಿವಾಸ ಹೊಳ್ಳ, ರವಿ ಕೇಸರಿ, ತುಕಾರಾಮ ಆಚಾರ್ಯ ಕೆರೆಮನೆ, ನವೀನ್ ಕೊರಕೋಡು ಉಪಸ್ಥಿತರಿದ್ದರು.
ನಗರದ ಧಾರ್ಮಿಕ, ಸಾಂಸ್ಕೃತಿಕ, ಸಾಮಾಹಿಕ ಕ್ಷೇತ್ರದಲ್ಲಿ ಗುರುತಿಸಲ್ಪಟ್ಟ 1982 ರಲ್ಲಿ ಪ್ರಾರಂಭವಾದ ಎಸ್.ವಿ.ಟಿ. ಫ್ರೆಂಡ್ಸ್ ಸರ್ಕಲ್ ಇತ್ತೀಚೆಗೆ ಇನ್ ಷ್ಟಾ ಗ್ರಾಂ ಪೇಜ್ ಲಾಂಛನ ಕೂಡಾ ಬಿಡುಗಡೆಗೊಂಡಿತು, ಇದರ ವತಿಯಿಂದ ಆಕರ್ಷಕ ಸುಡುಮದ್ದು ಪ್ರದರ್ಶನ ನಡೆಯಿತು. ಎಸ್.ವಿ.ಟಿ. ಯ ಕಾರ್ಯಕರ್ತರಾದ ಕಿಶೋರ್ ಕುಮಾರ್, ತಿರುಮಲೇಶ್ ಹೊಳ್ಳ, ಶೇಷಾದ್ರಿ ಹೊಳ್ಳ, ಶ್ರೀನಿವಾಸ್ ರಾವ್, ಸಂತೋಷ್ ಕುಮಾರ್ ಭಂಡಾರಿ, ವಸಂತ ಕೆರೆಮನೆ, ನಾಮದೇವ ಪೈ, ಶಂಕರನಾರಾಯಣ ಹೊಳ್ಳ, ಕೇತನ್, ಮನ್ವಿತ್ ಹಾಗೂ ಮಾತೆಯರು, ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು.
