ಮನೆಗಳ ಟೆರೇಸ್ ರಕ್ಷಣೆಗೆ ಸೂಕ್ತ ಉತ್ಪನ್ನ ಡ್ಯಾಂಪ್ ಪ್ರೂಫ್ : ಅಮಿತ್ ಸಿಂಗಲ್

0
123

ವಾಟರ್‌ ಫ್ರೂಫಿಂಗ್‌ ನ ಮಹತ್ವ ಸಾರುವ ‘ಸೂಪರ್‌ ಸ್ಟಾರ್’ ಅಭಿಯಾನ ಆರಂಭಿಸಿದ ಏಷ್ಯನ್ ಪೇಂಟ್ಸ್

ಮಂಗಳೂರು : “ದಕ್ಷಿಣ ಭಾರತದ ಪ್ರತೀ ಮನೆಗಳ ಟೆರೇಸ್‌ ಗಳು ಕೂಡ ಸಂಭ್ರಮದ ತಾಣಗಳಾಗಿರುತ್ತವೆ. ಅಂಥಾ ಟೆರೇಸ್ ಗಳಿಗೆ ಸೋರಿಕೆ ಅಥವಾ ಶಾಖದಿಂದ ತೊಂದರೆ ಆಗದಂತೆ ಇರಲು ಏಷ್ಯನ್ ಪೇಂಟ್ಸ್ ನ ‘ಡ್ಯಾಂಪ್ ಪ್ರೂಫ್’ ಉತ್ಪನ್ನ ನೆರವಾಗಲಿದೆ. ಈ ಕುರಿತು ವಿಶೇಷ ಅಭಿಯಾನ ಬಿಡುಗಡೆಯಾಗಿದೆ” ಎಂದು ಏಷ್ಯನ್ ಪೇಂಟ್ಸ್ ಲಿಮಿಟೆಡ್‌ ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಅಮಿತ್ ಸಿಂಗಲ್ ಹೇಳಿದ್ದಾರೆ.

ಏಷ್ಯನ್ ಪೇಂಟ್ಸ್ ನ ‘ಡ್ಯಾಂಪ್ ಪ್ರೂಫ್’ ಉತ್ಪನ್ನದ ಕುರಿತ ವಿನೂತನ ಸೂಪರ್ ಸ್ಟಾರ್ ಅಭಿಯಾನವನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

ದಕ್ಷಿಣ ಭಾರತದ ಮನೆಗಳ ಟೆರೇಸ್‌ ಗಳು ದೈನಂದಿನ ಚಟುವಟಿಕೆ ಮತ್ತು ಸಂಭ್ರಮಾಚರಣೆಯ ತಾಣಗಳು. ಆದರೆ ಮಳೆಗಾಲದಲ್ಲಿನ ನೀರಿನ ಸೋರಿಕೆ ಮತ್ತು ಬೇಸಿಗೆಯ ಸುಡುವ ತಾಪಮಾನ ಈ ಸಂಭ್ರಮಕ್ಕೆ ಅಡ್ಡಿಪಡಿಸುವುದು ಸಾಮಾನ್ಯವಾಗಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲು ಏಷ್ಯನ್ ಪೇಂಟ್ಸ್ ಡ್ಯಾಂಪ್ ಪ್ರೂಫ್ ಉತ್ಪನ್ನ ತಂದಿದೆ. ಜೊತೆಗೆ ವಿಶೇಷ ಅಭಿಯಾನ ಕೂಡ ಅನಾವರಣ ಮಾಡಲಾಗಿದೆ.

ಈ ಅಭಿಯಾನ ಚಿತ್ರದಲ್ಲಿ ‘ರೌಡಿ ಬೇಬಿ’ ಹಾಡಿನ ಧಾಟಿಯನ್ನು ಬಳಸಿಕೊಳ್ಳಲಾಗಿದ್ದು, ವಾಟರ್‌ ಫ್ರೂಫಿಂಗ್‌ ನಂತಹ ತಾಂತ್ರಿಕ ವಿಷಯವನ್ನು ಜನರಿಗೆ ಸುಲಭವಾಗಿ ಮತ್ತು ಆಕರ್ಷಕವಾಗಿ ತಲುಪಿಸುವ ಪ್ರಯತ್ನ ಮಾಡಲಾಗಿದೆ. ದಕ್ಷಿಣದ ಸಿನಿಮಾಗಳಲ್ಲಿ ನಟರು ಹೇಗೆ ಶಕ್ತಿಯುತವಾಗಿ ಮಿಂಚುತ್ತಾರೋ, ಹಾಗೆಯೇ ‘ಡ್ಯಾಂಪ್ ಪ್ರೂಫ್’ ಉತ್ಪನ್ನವನ್ನು ಈ ಜಾಹೀರಾತಿನಲ್ಲಿ ‘ವಾಟರ್‌ ಫ್ರೂಫಿಂಗ್ ನ ಸೂಪರ್‌ ಸ್ಟಾರ್’ ಎಂದು ಬಿಂಬಿಸಲಾಗಿದೆ.

ಮನೆ ಮಾಲೀಕರ ಪ್ರಮುಖ ಎರಡು ಸಮಸ್ಯೆಗಳಿಗೆ ಈ ‘ಡ್ಯಾಂಪ್ ಪ್ರೂಫ್’ ರಾಮಬಾಣವಾಗಿ ಕೆಲಸ ಮಾಡಲಿದೆ. ಎಷ್ಟೇ ಸೋರಿಕೆಯಾಗುತ್ತಿದ್ದರೂ ಅದರ ವಿರುದ್ಧ ಇದು ಬಲವಾದ ರಕ್ಷಣೆ ನೀಡುತ್ತದೆ. ಜೊತೆಗೆ ಇದರ ಸುಧಾರಿತ ಹೀಟ್-ರಿಫ್ಲೆಕ್ಟಿವ್ ಕೋಟಿಂಗ್ ತಂತ್ರಜ್ಞಾನವು ಮನೆಯ ಮೇಲ್ಮೈ ತಾಪಮಾನವನ್ನು ಸುಮಾರು 10 ಡಿಗ್ರಿ ಸೆಲ್ಸಿಯಸ್‌ ವರೆಗೆ ಕಡಿಮೆ ಮಾಡುತ್ತದೆ. ಇದರಿಂದ ತೀವ್ರ ಬೇಸಿಗೆಯಲ್ಲೂ ಮನೆ ತಂಪಾಗಿರುತ್ತದೆ.

ದಕ್ಷಿಣ ಭಾರತದ ಹವಾಮಾನ ವೈಪರೀತ್ಯಗಳನ್ನು ಎದುರಿಸಲು ಈ ‘ಸೂಪರ್‌ ಸ್ಟಾರ್’ ಈಗ ಮಾರುಕಟ್ಟೆಯಲ್ಲಿ ಸನ್ನದ್ಧವಾಗಿದೆ.

LEAVE A REPLY

Please enter your comment!
Please enter your name here