ಸಂತೆಕಟ್ಟೆಯಲ್ಲಿ ಅಪಾಯಕಾರಿ ತಡೆಬೇಲಿ : ತಕ್ಷಣ ತೆರವಿಗೆ ಸ್ಥಳೀಯರ ಒತ್ತಾಯ..!

0
210

ಬ್ರಹ್ಮಾವರ : ಉಡುಪಿ ಸಮೀಪದ ಸಂತೆಕಟ್ಟೆಯ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಕೊನೆಗೂ ಅಂತಿಮ ಹಂತ ತಲುಪಿದ್ದು ಮಳೆಗಾಲದ ಮುನ್ನ ಸಂಚಾರಕ್ಕೆ ಮುಕ್ತವಾಗುವ ಹಂತದಲ್ಲಿದೆ. ಸಂತೆಕಟ್ಟೆ ಬೃಂದಾವನ ಹೋಟೆಲ್ ಎದುರುಗಡೆ ಸರ್ವಿಸ್ ರಸ್ತೆಗೆ ತಾಗಿ ಕೊಂಡೇ ತಡೆಬೇಲಿ ಹಾಕಿದ್ದು, ಅಪಾಯ ಕೈಬೀಸಿ ಕರೆಯುತ್ತಿದೆ. ಅದನ್ನು ಶೀಘ್ರದಲ್ಲಿ ಸರಿಪಡಿಸದಿದ್ದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ. ರಾತ್ರಿ ಹೊತ್ತು ಮತ್ತು ಮಳೆಗಾಲದಲ್ಲಿ ಸಂಚರಿಸುವಾಗ ಸಮಸ್ಯೆ ತಲೆದೋರುವುದು ಖಂಡಿತ. ಅದರ ಜತೆಗೆ ನವಮಿ ಬೇಕರಿಯಿಂದ ಆಶೀರ್ವಾದದ ತನಕ ಇಕ್ಕೆಲಗಳಲ್ಲಿ ದೊಳಿನಮಯವಾಗುತ್ತಿದೆ. ದ್ವಿಚಕ್ರ ವಾಹನ ಸವಾರರಿಗೆ ಮತ್ತು ಪಾದಚಾರಿಗಳಿಗೆ ದೊಡ್ಡ ಸಮಸ್ಯೆ ಯಾಗಿದೆ.

ಹೆದ್ದಾರಿಯ ಅವ್ಯವಸ್ಥೆ ಮತ್ತು ಕೆಲವು ಸಮಸ್ಯೆಗಳ ಬಗ್ಗೆ ಹಲವಾರು ಬಾರಿ ತುಳುನಾಡು ರಕ್ಷಣಾ ವೇದಿಕೆಯ ಕಾರ್ಯಕರ್ತರು ಗಮನ ಸೆಳೆದಿದ್ದು ಗಮನಾರ್ಹ ಸಂಗತಿ. ಈ ಸಮಸ್ಯೆ ಕೂಡ ಗಂಭೀರವಾಗಿದ್ದು, ತಡಬೇಲಿ ವಾಹನ ಸವಾರರಿಗೆ ಅಪಘಾತಕ್ಕೆ ಕೈ ಬೀಸಿ ಕರೆಯುವಂತಿದೆ. ಸಂಚರಿಸುವವರಿಗೆ ದೂಳಿನ ಅಭಿಷೇಕವಾಗುತ್ತಿದೆ. ಈ ಬಗ್ಗೆ ಜನಪ್ರತಿನಿಧಿಗಳು ಗಮನಹರಿ ಸಬೇಕಾಗಿದೆ. – ಫ್ರಾಂಕಿ ಡಿಸೋಜ ಕೊಳಲಗಿರಿ ಜಿಲ್ಲಾಧ್ಯಕ್ಷರು, ತುಳುನಾಡು ರಕ್ಷಣಾ ವೇದಿಕೆ ಉಡುಪಿ ಜಿಲ್ಲೆ.

ಈ ಬಗ್ಗೆ ಹೆದ್ದಾರಿ ಪ್ರಾಧಿಕಾರದವರು ಮತ್ತು ಸಂಭಂಧಪಟ್ಟವರು ಸಮಸ್ಯೆ ಯನ್ನು ಗಂಭೀರವಾಗಿ ಪರಿಗಣಿಸಿ ಬೇಕಾಗಿದೆ. ಹೆದ್ದಾರಿಯ ಎರಡೂ ಕಡೆಗಳಲ್ಲಿ ಸರ್ವಿಸ್ ರಸ್ತೆಯನ್ನು ಡಾಮರೀಕರಣ ಮಾಡಿ ಸಂಚಾರಕ್ಕೆ ಯೋಗ್ಯಾಗುವಂತೆ ಮಾಡಬೇಕೆಂಬುದು ಸ್ಥಳೀಯರ ಆಗ್ರಹ.

LEAVE A REPLY

Please enter your comment!
Please enter your name here