ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಪದಕಗಳನ್ನು ಪಡೆದ ದಾವಣಗೆರೆಯ ಸಾಧಕರು

0
18

ದಾವಣಗೆರೆ : ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಕಿನ್ನಿಗೋಳಿಯಲ್ಲಿ ಕರ್ನಾಟಕ ಪವರ್ ಲಿಫ್ಟಿಂಗ್ ಅಸೋಸಿಯೇಷನ್ ಆಶ್ರಯದಲ್ಲಿ ಇತ್ತೀಚಿಗೆ ಯುವಕ-ಯುವತಿಯರಿಗೆ ರಾಜ್ಯ ಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆ ಹಮ್ಮಿಕೊಂಡಿದ್ದು ದಾವಣಗೆರೆಯ ಪವರ್ ಲಿಫ್ಟರ್‌ಗಳು ಸ್ಪರ್ಧೆಯಲ್ಲಿ ಭಾಗವಹಿಸಿ ಪದಕಗಳನ್ನು ಪಡೆದಿರುತ್ತಾರೆ.

ಹಲವು ಪದಕಗಳನ್ನು ಪಡೆದ ಸಾಧಕರು ಕುಮಾರ ಸುಜೀಲ್ ಅಹಮ್ಮದ್ ೨ ಚಿನ್ನದ ಪದಕ, ಕುಮಾರಿ ದೀಪಾ ರಂಗಸ್ವಾಮಿ ೧ ಚಿನ್ನದ ಪದಕ, ಕುಮಾರಿ ಸಾನಿಯಾ ಎಸ್.ಪಿ. ೧ ಬೆಳ್ಳಿ ಪದಕ, ಕುಮಾರ ರೋಹಿತ್ ವಿ. ೧ ಬೆಳ್ಳಿ ಪದಕ, ಕುಮಾರ ಗಣೇಶ್ ಹೆಚ್.ಜೆ. ೧ ಬೆಳ್ಳಿ ಪದಕ, ಕುಮಾರ ವಿಷ್ಣು ಎಂ. ೧ ಕಂಚಿನ ಪದಕ, ಕುಮಾರ ಮಂಜುನಾಥ್ ೧ ಕಂಚಿನ ಪದಕ, ಕುಮಾರ ಕೃಷ್ಣ ೧ ಕಂಚಿನ ಪದಕ ಪಡಿದಿರುತ್ತಾರೆ.

ದಾವಣಗೆರೆ ವ್ಯಾಯಾಮ ಶಾಲೆಯ ತರಬೇತುದಾರರಾದ ಎನ್.ಹನುಮಂತ್, ದಾದರ‍್ಸ್ ಟೀಮ್ಸ್ ತರಬೇತಿಗಾರರಾದ ರಜ್ವಿಖಾನ್, ಜಿ.ಟಿ.ಜಿ. ಕಾರ್ಯದರ್ಶಿ ಹೆಚ್.ದಾದಾಪೀರ್, ಸಂಸ್ಥಾಪಕರು ಜಿ.ಐ.ಜಿ. ಖಜಾಂಚಿ ಎನ್.ಸುರೇಶ್‌ಕುಮಾರ್, ಎಂ.ಎಸ್.ಷಣ್ಮುಖ ಮುಂತಾದವರು ಉಪಸ್ಥಿತರಿದ್ದು ಯುವಕ, ಯುವತಿಯರಿಗೆ ಪ್ರೋತ್ಸಾಹ ನೀಡಿದರು. ಸಾಧನೆ ಮಾಡಿ ಪದಕಗಳನ್ನು ಪಡೆದ ಎಲ್ಲರಿಗೂ ಜಿ.ಐ.ಜಿ. ಪದಾಧಿಕಾರಿಗಳು, ಬೀರೇಶ್ವರ ವ್ಯಾಯಾಮ ಶಾಲೆಯ ಪದಾಧಿಕಾರಿಗಳು, ಕಾರ್ಪೋರೇಷನ್ ವ್ಯಾಯಾಮ ಸಂಸ್ಥೆಯ ಸರ್ವ ಸದಸ್ಯರು ಅಭಿಮಾನದಿಂದ ಅಭಿನಂದಿಸಿ ಶುಭ ಕೋರಿದ್ದಾರೆ.

LEAVE A REPLY

Please enter your comment!
Please enter your name here