ಬೆಂಗಳೂರು: ಕರ್ನಾಟಕದ ಮಾನ್ಯ ಉಪಮುಖ್ಯಮಂತ್ರಿ ಶ್ರೀ. ಡಿ.ಕೆ. ಶಿವಕುಮಾರ್ ಅವರು ಇಂದು ಬೆಂಗಳೂರಿನ ಲ್ಯಾಂಗ್‌ಫೋರ್ಡ್ ಟೌನ್ ನ ಓ ಶೌಘ್ನೆಸ್ಸಿ ರಸ್ತೆಯಲ್ಲಿರುವ ಗ್ಲೋಬಲ್ ಟೆಕ್ ಪಾರ್ಕ್ ಕಟ್ಟಡದಲ್ಲಿ ಹೆಚ್‌ಡಿಎಫ್‌ಸಿ ಬ್ಯಾಂಕ್ ನ ನೂತನ ಅತ್ಯಾಧುನಿಕ ಶಾಖೆಯನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಹೆಚ್‌ಡಿಎಫ್‌ಸಿ ಬ್ಯಾಂಕ್‌ನ ಕರ್ನಾಟಕ ಮತ್ತು ಕೇರಳದ ಶಾಖಾ ಬ್ಯಾಂಕಿಂಗ್ ಮುಖ್ಯಸ್ಥ ಶ್ರೀ. ಅಹ್ಮದ್ ಝಕಾರಿಯಾ ಉಪಸ್ಥಿತರಿದ್ದರು. ಇದೇ ಸಮಯದಲ್ಲಿ ಉಪಮುಖ್ಯಮಂತ್ರಿಯವರು ಕರ್ನಾಟಕದಲ್ಲಿ ಹೆಚ್‌ಡಿಎಫ್‌ಸಿ ಬ್ಯಾಂಕ್‌ನ ವಾರ್ಷಿಕ ಫೆಸ್ಟಿವ್ ಟ್ರೀಟ್ಸ್ ಅಭಿಯಾನ 2025 ಕಾರ್ಯಕ್ರಮದ ಉದ್ಘಾಟನೆಯನ್ನೂ ನೆರವೇರಿಸಿದರು.
ಈ ಅಭಿಯಾನದಲ್ಲಿ ಕಾರ್ಡ್‌ಗಳು, ಸಾಲಗಳು, ಪೇಯ್ಸ್ಆಪ್ ಮತ್ತು ಈಸಿಇಎಂಐ ಮೂಲಕ 10,000ಕ್ಕೂ ಹೆಚ್ಚು ಆಫರ್ ಗಳನ್ನು ಒದಗಿಸಲಾಗುತ್ತಿದೆ, ಗ್ರಾಹಕರಿಗೆ ಹೆಚ್ಚು ಕೈಗೆಟುಕುವ ದರದಲ್ಲಿ ಮತ್ತು ಲಾಭದಾಯಕವಾಗಿ ಹಬ್ಬದ ಶಾಪಿಂಗ್ ನಡೆಸಲು ಅನುವು ಮಾಡಿಕೊಡುತ್ತದೆ. ಫೆಸ್ಟಿವ್ ಟ್ರೀಟ್ಸ್ ಆಫರ್ ಗಳು ಉಡುಗೆ, ಎಲೆಕ್ಟ್ರಾನಿಕ್ಸ್, ರೆಸ್ಟೋರೆಂಟ್, ಪ್ರಯಾಣ, ಆಭರಣ ಸೇರಿದಂತೆ ವಿವಿಧ ಉತ್ಪನ್ನಗಳಿಗೆ ಲಭ್ಯವಿವೆ.
ಹೆಚ್‌ಡಿಎಫ್‌ಸಿ ಬ್ಯಾಂಕ್ ಕರ್ನಾಟಕದಲ್ಲಿನ ತನ್ನ 528 ಶಾಖೆಗಳು, 1156 ಎಟಿಎಂಗಳು, ಡಿಜಿಟಲ್ ಚಾನಲ್ ಗಳು ಮತ್ತು 1 ಲಕ್ಷಕ್ಕೂ ಹೆಚ್ಚು ವ್ಯಾಪಾರಿ ಮತ್ತು ಡೀಲರ್ ಗಳ ವಿಶಾಲ ಜಾಲವನ್ನು ಈ ಅಭಿಯಾನಕ್ಕಾಗಿ ಬಳಸಿಕೊಳ್ಳಲಿದೆ. ಈ ಸಮಾಪಂಭದಲ್ಲಿ ನಗರಾಭಿವೃದ್ಧಿ ಮತ್ತು ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶ್ರೀ. ತುಷಾರ್ ಗಿರಿನಾಥ್ ಐಎಎಸ್ ಅವರು ಲಾಕರ್ ರೂಮ್ ಅನ್ನು ಉದ್ಘಾಟಿಸಿದರು.

