ಗುರುವಾಯನಕೆರೆ ಬಸ್ ನಿಲ್ದಾಣದ ಬಳಿ ವೃದ್ಧನ ಶವ ಪತ್ತೆ

0
26

ಬೆಳ್ತಂಗಡಿ : ಗುರುವಾಯನಕೆರೆ ಬಸ್ ನಿಲ್ದಾಣದ ಸಮೀಪದ ಭೂಷಣ್ ಬಾರ್ ಎದುರುಗಡೆ ವೃದ್ಧರೊಬ್ಬರ ಶವ ಪತ್ತೆಯಾದ ಘಟನೆ ಆ.18ರಂದು ಬೆಳಿಗ್ಗೆ ನಡೆದಿದೆ.

ಮೃತರನ್ನು ಶಿವಮೊಗ್ಗ ಮೂಲದ ಮರಿಯಪ್ಪ ಎಂದು ಪೊಲೀಸ್ ತನಿಖೆಯಿಂದ ಗುರುತಿಸಲಾಗಿದೆ. ಬೆಳಿಗ್ಗೆ ವೃದ್ಧರ ಶವ ಕಂಡುಬಂದ ಹಿನ್ನೆಲೆಯಲ್ಲಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ, ಮೃತದೇಹವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಅಗತ್ಯ ಮಾಹಿತಿಗಳನ್ನು ಕಲೆಹಾಕಲಾಗುತ್ತಿದ್ದು, ವೃದ್ಧರ ಸಾವಿಗೆ ಕಾರಣವೇನು ಎಂಬುದು ತನಿಖೆಯಿಂದ ತಿಳಿದುಬರಬೇಕಿದೆ.

ವೃದ್ಧರು ಗುರುವಾಯನಕೆರೆ ಬಸ್ ನಿಲ್ದಾಣದ ಪರಿಸರದಲ್ಲಿ ಹೇಗೆ ಬಂದಿದ್ದರು, ಸಾವಿಗೂ ಮುನ್ನ ಅವರ ಚಲನವಲನ ಹೇಗಿತ್ತು ಎಂಬ ಬಗ್ಗೆಯೂ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ. ಮೃತರ ಕುಟುಂಬಸ್ಥರಿಗೆ ಮಾಹಿತಿ ನೀಡುವ ಪ್ರಕ್ರಿಯೆಯನ್ನೂ ಪೊಲೀಸರು ಕೈಗೊಂಡಿದ್ದಾರೆ ಎನ್ನಲಾಗಿದೆ.

ಘಟನೆ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದ್ದು, ಮರಣೋತ್ತರ ಪರೀಕ್ಷೆಯ ವರದಿ ಹಾಗೂ ಪೊಲೀಸ್ ತನಿಖೆಯ ಬಳಿಕ ಸಾವಿನ ನಿಖರ ಕಾರಣ ಸ್ಪಷ್ಟವಾಗುವ ನಿರೀಕ್ಷೆಯಿದೆ.