ಸಾಲಬಾಧೆ: ಕೊರಂಗ್ರಪಾಡಿಯಲ್ಲಿ 72 ವರ್ಷದ ವೃದ್ಧ ಆತ್ಮಹತ್ಯೆ

0
31

ಉಡುಪಿ: ಕೊರಂಗ್ರಪಾಡಿ ಚರ್ಚ್‌ನ ಹಿಂಭಾಗದಲ್ಲಿರುವ ಮನೆಯೊಂದರಲ್ಲಿ 72 ವರ್ಷದ ವೃದ್ಧರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳವಾರ ನಡೆದಿದೆ.

ಮೃತರನ್ನು ಪಡುಬೈಲೂರಿನ ಸೋಲೋಮನ್ ಫ್ರೆಡಿಕ್ಸ್ (72) ಎಂದು ಗುರುತಿಸಲಾಗಿದೆ. ಸಾಲಬಾಧೆಯಿಂದಾಗಿ ಅವರು ಈ ಕೃತ್ಯಕ್ಕೆ ಮುಂದಾಗಿರಬಹುದು ಎಂದು ತಿಳಿದುಬಂದಿದೆ. ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ನಗರ ಪೊಲೀಸ್ ಠಾಣೆಯ ಎಸ್‌ಐ ಭರತೇಶ್ ಹಾಗೂ ಮುಖ್ಯ ಆರಕ್ಷಕರಾದ ಮಲ್ಲಿಕಾರ್ಜುನ ಮತ್ತು ಬಶೀರ್ ಸ್ಥಳಕ್ಕೆ ಭೇಟಿ ನೀಡಿ ಕಾನೂನು ಪ್ರಕ್ರಿಯೆ ನಡೆಸಿದರು.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಲು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಪೊಲೀಸರಿಗೆ ನೆರವಾದರು.