Saturday, June 14, 2025
Homeಮಂಗಳೂರುಕಣಚೂರು ವೈದ್ಯಕೀಯ ಶಿಕ್ಷಣ ಮಹಾವಿದ್ಯಾಲಯದಲ್ಲಿ ಪದವಿ ಪ್ರಧಾನ

ಕಣಚೂರು ವೈದ್ಯಕೀಯ ಶಿಕ್ಷಣ ಮಹಾವಿದ್ಯಾಲಯದಲ್ಲಿ ಪದವಿ ಪ್ರಧಾನ

ವೈದ್ಯರು ಪ್ರಾಮಾಣಿಕತೆ, ಶ್ರದ್ಧೆ, ಶ್ರಮ, ಕರ್ತವ್ಯ ನಿಷ್ಟೆಯಿಂದ ಸೇವೆ ಸಲ್ಲಿಬೇಕು – ಡಾ. ಭಗವಾನ್ ಬಿ

ಮಂಗಳೂರು ಮೇ ೨೪: “ಶೈಕ್ಷಣಿಕ ಪದವಿ ಪಡೆಯುವುದು ಒಂದು ಸ್ಮರಣೀಯ ಸಂದರ್ಭ. ಅದು ನಮ್ಮ ಜೀವನದ ಪ್ರಯಾಣದ ಒಂದು ಭಾಗ. ನಮ್ಮ ಯಶಸ್ಸನ್ನು ಸಂಭ್ರಮಿಸಬೇಕು ಜೊತೆಗೆ ನಮ್ಮ ವೃತ್ತಿ ಜೀವನ ಪಯಣ ಮುಂದುವರಿಸಬೇಕು” ಎಂದು ಬೆಂಗಳೂರು ಮೂಲದ ರಾಜೀವ್ ಗಾಂಧಿ ಆರೋಗ್ಯ ವಿಜ್ಷಾನ ವಿಶ್ವವಿದ್ಯಾಲಯದ ಉಪಕುಲಪತಿಯವರಾದ ಡಾ. ಭಗವಾನ್ ಬಿ.ಸಿ ಸಲಹೆ ನೀಡಿದ್ದಾರೆ. ಅವರು ಕಣಚೂರು ವೈದ್ಯಕೀಯ ಶಿಕ್ಷಣ ಮಹಾವಿದ್ಯಾಲಯದ ತಾ: ೨೪.೦೫.೨೦೨೫ರಂದು ಕಾಲೇಜಿನ ಸಂಭಾAಗಣದಲ್ಲಿ ಜರಗಿದ ಪದವಿ ಪ್ರಧಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ೧೨೯ ಪದವೀದರರಿಗೆ ಮತ್ತು ೨೬ ಸ್ನಾತಕ್ಕೋತ್ತರ ಪದವೀದರರಿಗೆ ಪದವಿ ಪ್ರಧಾನ ಮಾಡಿ ಘಟಕೋತ್ಸವ ಭಾಷಣ ಮಾಡಿದರು. ನೂತನ ಪದವಿದರರು ತೆಗೆದುಕೊಂಡ ಪ್ರತೀಜ್ಞೆಗೆ ಬದ್ಧವಾಗಿ, ಪ್ರಾಮಾಣಿಕತೆಯಿಂದ, ಶ್ರದ್ಧೆ, ಶ್ರಮ, ಕರ್ತವ್ಯ ನಿಷ್ಟೆಯಿಂದ ವೃತ್ತಿ ಜೀವನ ನಿರ್ವಹಿಸಿದರೆ ಯಶಸ್ಸು ಸಾಧಿಸಬಹುದೆಂದು ಸಲಹೆ ನೀಡಿದರು.

ಕಣಚೂರು ಇಸ್ಲಾಮಿಕ್ ಶಿಕ್ಷಣ ಟ್ರಸ್ಟ್ ಅಧ್ಯಕ್ಷರಾದ ಡಾ. ಹಾಜಿ ಯು.ಕೆ. ಮೊನು ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರಾಜ್ಯ ಆರೋಗ್ಯ ರಕ್ಷಣಾ ಮಂಡಳಿಯ ಅಧ್ಯಕ್ಷ ಡಾ. ಇಫ್ತಿಕಾರ್ ಫರೀದ್ ಅವರು ಪಾಲ್ಗೊಂಡು ಸಂದೋರ್ಬಿಜಿತವಾಗಿ ಮಾತನಾಡಿದರು.

ಕಾಲೇಜಿನ ಪ್ರಾಂಶುಪಾಲರಾದ ಡಾ. ಶಹನವಾಜ್ ಮನಿಪಾಡಿಯವರು ನೂತನ ಪದವಿದದರಿಗೆ ಪ್ರತಿಜ್ಞಾ ವಿಧಿವಿಧಾನವನ್ನು ನೆರವೇರಿಸಿ ಯುಶಸ್ಸು ಹಾರೈಸಿದರು.

ಈ ಸಂದರ್ಭದಲ್ಲಿ ಸ್ನಾತಕ್ಕೋತ್ತರ ಮೂಳೆ ಶಾಸ್ತç ವಿಭಾಗದಲ್ಲಿ ಪ್ರಥಮ ರ‍್ಯಾಂಕ್ ಪಡೆದ ಡಾ. ಚೇತನ್ ಕುಮಾರ್‌ರವರ ಗಮನಾರ್ಹ ಸಾಧನೆಯನ್ನು ಪರಿಗಣಿಸಿ ಗೌರವಿಸಲಾಯಿತು. ರಾಜೀವ್ ಗಾಂಧಿ ವಿಶ್ವವಿದ್ಯಾಲಯ ಆಯೋಜಿಸಿದ ಅಂತಿಮ ಎಮ್.ಬಿ.ಬಿ.ಎಸ್. ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಮತ್ತು ರ‍್ಯಾಂಕ್ ಪಡೆದ
ಡಾ. ಅಯಿಮಾನ್ ಫೈಜಾ ಫಾತಿಮಾ ಅವರಿಗೆ ಕಣಚೂರು ಮೊನು ಸ್ವರ್ಣ ಪದಕ ನೀಡಿ ಸನ್ಮಾನಿಸಲಾಯಿತು.
ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಅಬ್ದುಲ್ ರಹಿಮಾನ್ ಸ್ವಾಗತಿಸಿದರು.

ವೇದಿಕೆಯಲ್ಲಿ ನಿರ್ದೇಶಕಿ ಶ್ರೀಮತಿ ಝೊಹಾರ ಮೋನು, ಕಣಚೂರು ಆರೋಗ್ಯ ವಿಜ್ಞಾನ ಸಲಹಾ ಸಮಿತಿಯ ಅಧ್ಯಕ್ಷರಾದ ಡಾ. ಮೊಹಮ್ಮದ್ ಇಸ್ಮಾಯಿಲ್, ಸದಸ್ಯ ಡಾ. ವೆಂಕಟ್‌ರಾAiÀi ಪ್ರಭು, ವೈದ್ಯಕೀಯ ಅಧೀಕ್ಷಕ ಡಾ. ಹರೀಶ್ ಶೆಟ್ಟಿ, ಉಪ ವೈದ್ಯಕೀಯ ಅಧೀಕ್ಷಕ ಡಾ. ಅಂಜನ್ ಕುಮಾರ್, ಆಡಳಿತ ಅಧಿಕಾರಿ ಡಾ. ರೋಹನ್ ಮೋನಿಸ್ ಉಪಸ್ಥಿತರಿದ್ದರು. ಶ್ರೀಮತಿ ನಿಶ್ಚಿತಾ ಸಾಲಿನ್ಸ್ ಮತ್ತು ಶ್ರೀಮತಿ ಪ್ರೀವಲ್ ಶ್ರೇಯಾ ಕ್ರಾಸ್ತ ನಿರೂಪಿಸಿದ ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಡಾ. ಶಹನವಾಜ್ ಮನಿಪಾಡಿ ವಂದಿಸಿದರು.

RELATED ARTICLES
- Advertisment -
Google search engine

Most Popular