ಮೂಡುಬಿದಿರೆ : ಬೆಳುವಾಯಿ ಗ್ರಾಮದ ಕೆಸರುಗದ್ದೆಯ ನಡಿಗುಡ್ಡೆ ನಿವಾಸಿ ಸುರೇಶ್ ಆಚಾರ್ಯ ಅವರು ಕಳೆದ ಎರಡು ವರ್ಷಗಳಿಂದ ಭುಜದ ಭಾಗದಲ್ಲಿ ಕಾಣಿಸಿಕೊಂಡಿರುವ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದು, ಮಂಗಳೂರಿನ ಫಾದರ್ ಮುಲ್ಲರ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದುವರೆಗೆ ಚಿಕಿತ್ಸೆಗೆ ಸುಮಾರು 11 ಲಕ್ಷ ರೂಪಾಯಿಗೂ ಅಧಿಕ ವೆಚ್ಚ ಭರಿಸಲಾಗಿದ್ದು, ಮುಂದಿನ ಚಿಕಿತ್ಸೆ ಹಾಗೂ ಶಸ್ತ್ರಚಿಕಿತ್ಸೆಗಾಗಿ ಇನ್ನೂ ಸುಮಾರು 7 ಲಕ್ಷ ರೂಪಾಯಿ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಸುರೇಶ್ ಆಚಾರ್ಯ ಅವರ ಕುಟುಂಬ ಆರ್ಥಿಕ ಸಂಕಷ್ಟದಲ್ಲಿದ್ದು, ಅವರ ಪುತ್ರ ಅಂಗವಿಕಲನಾಗಿದ್ದು, ಪುತ್ರಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಕುಟುಂಬದ ನಿರ್ವಹಣೆ ಹಾಗೂ ಆಸ್ಪತ್ರೆಯ ವೆಚ್ಚವನ್ನು ಅವರ ಪತ್ನಿ ಬೇಕರಿಯಲ್ಲಿ ಕೆಲಸ ಮಾಡಿ ನಿಭಾಯಿಸುತ್ತಿದ್ದು, ಹೆಚ್ಚುತ್ತಿರುವ ವೈದ್ಯಕೀಯ ಖರ್ಚಿನಿಂದ ಕುಟುಂಬ ತೀವ್ರ ಸಂಕಷ್ಟಕ್ಕೆ ಸಿಲುಕಿದೆ.
ಹೀಗಾಗಿ ದಾನಿಗಳು, ಸಮಾಜಬಾಂಧವರು ಹಾಗೂ ಸಹೃದಯರು ತಮ್ಮ ಕೈಲಾದಷ್ಟು ಧನಸಹಾಯ ಮಾಡಿ ಜೀವ ಉಳಿಸುವ ಕಾರ್ಯಕ್ಕೆ ಕೈಜೋಡಿಸಬೇಕೆಂದು ಕುಟುಂಬ ಸದಸ್ಯರು ಮನವಿ ಮಾಡಿದ್ದಾರೆ.
ಧನಸಹಾಯಕ್ಕಾಗಿ ಬ್ಯಾಂಕ್ ವಿವರಗಳು:
ಹೆಸರು: Akash Acharya
ಖಾತೆಯ ಸಂಖ್ಯೆ : 110222279976
ಮೊಬೈಲ್: 8904072719
IFSC Code: CNRB0005268

