ಮೂಲ್ಕಿ ಕೊಲ್ನಾಡು ರಿಕ್ಷಾ ಚಾಲಕರಾದ ಮಹಮ್ಮದ್ ಶರೀಫ್ ಇವರ ಕೊಲೆ ಪ್ರಕರಣ ತನಿಖೆ ನಡೆಸುವಂತೆ ಅಪರಾಧಿಯನ್ನು ಪತ್ತೆಹಚ್ಚುವಂತೆ ಮಂಗಳೂರು ಪೋಲಿಸ್ ಕಮೀಷನರ್ ಹಾಗೂ ಕೇರಳದ ಪೋಲಿಸರಿಗೆ ಮಂಗಳೂರು ಮಹಾನಗರ ರಿಕ್ಷಾ ಚಾಲಕರ ಸಂಘದ ಅಧ್ಯಕ್ಷರು, ವಿಧಾನ ಪರಿಷತ್ ಶಾಸಕರಾದ ಶ್ರೀ ಐವನ್ ಡಿʼಸೋಜಾ ಅಗ್ರಹ.
ಕಳೆದ ಬುಧವಾರದಿಂದ ಕಾಣೆಯಾಗಿದ್ದ ಮೂಲ್ಕಿ ಕೊಳ್ನಾಡು ಪ್ರದೇಶದ ರಿಕ್ಷಾ ಚಾಲಕ ಮಹಮ್ಮದ್ ಶರೀಫ್ ಇವರ ಮೃತದೇಹ ಮಂಜೇಶ್ವರದ ಕುಂಜತ್ತೂರು ಪದವು ಎಂಬ ನಿರ್ಜನ ಪ್ರದೇಶದಲ್ಲಿ ಪತ್ತೆಯಾಗಿದ್ದು, ಮೃತದೇಹದ ಕುತ್ತಿಗೆ ಮತ್ತು ಇತರ ಭಾಗಗಳಿಗೆ ಚೂರಿಯಿಂದ ಇರಿತಗೊಂಡಿದ್ದು ತದನಂತರ ಬಾವಿಗೆ ಎಸೆದಿರುವುದು ಕಂಡುಬಂದಿದೆ. ಈ ಕೃತ್ಯವು ಕೊಲೆ ಪ್ರಕರಣವಾಗಿರುತ್ತದೆ. ಮಂಗಳೂರಿನಿಂದ ಬಾಡಿಗೆಗೆ ಎಂದು ಕೇರಳದ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಈ ಕೃತ್ಯವನ್ನು ಎಸಗಿ ಬಾವಿಗೆ ಎಸೆಯಲಾಗಿದೆ. ಇದೊಂದು ಕೊಲೆ ಪ್ರಕರಣವಾಗಿದ್ದು ಈ ಪ್ರಕರಣವನ್ನು ಏರಡೂ ರಾಜ್ಯಗಳ ವಿಶೇಷ ಪೋಲಿಸ್ ತಂಡಗಳನ್ನು ರಚಿಸಿ ತನಿಖೆ ನಡೆಸಬೇಕೆಂದು ಮಂಗಳೂರು ಮಹಾನಗರ ರಿಕ್ಷಾ ಚಾಲಕರ ಅಧ್ಯಕ್ಷರು, ವಿಧಾನ ಪರಿಷತ್ ಶಾಸಕರಾದ ಶ್ರೀ ಐವನ್ ಡಿʼಸೋಜಾ ಕರ್ನಾಟಕ ಹಾಗೂ ಕೇರಳ ಪೋಲಿಸ್ ಕಮಿಷನರ್‌ನ್ನು ಮನವಿ ಮಾಡಿದ್ದಾರೆ.
ಈ ಪ್ರಕರಣವು ಅತ್ಯಂತ ಗಂಭೀರ ಪ್ರಕರಣವಾಗಿದ್ದು ರಿಕ್ಷಾ ಚಾಲಕರು ರಾತ್ರಿ ವೇಳೆ ಚಾಲನೆ ಮಾಡುವುದು ಅಘಾತಕಾರಿ ಬೆಳವಣಿಗೆಯಾಗಿದೆ. ಮುಲ್ಕಿಯ ಕೊಲ್ನಾಡಿನಿಂದ ಮಂಗಳೂರಿನ ನಗರಕ್ಕೆ ಬಂದು ಸಂಜೆ ವೇಳೆ ರಿಕ್ಷಾ ಚಾಲಾಯಿಸಿ ದುಡಿಯುತ್ತಿದ್ದ ಮಹಮ್ಮದ್ ಶರೀಫ್ ಇವರು ಅತ್ಯಂತ ದಕ್ಷ ಹಾಗೂ ಪ್ರಾಮಾಣಿಕ ರಿಕ್ಷಾ ಚಾಲಕರಾಗಿದ್ದು ಏಲ್ಲಾರೊಂದಿಗೆ ಬೆರೆಯುವ ಸ್ನೇಹ ಜೀವಿಯಾಗಿರುತ್ತಾರೆ. ಅವರ ನಿಧನಕ್ಕೆ ತ್ರೀವ್ರ ಸಂತಾಪ ವ್ಯಕ್ತ ಪಡಿಸುತ್ತಾ ಹಾಗೂ ಈ ಕೊಲೆ ಪ್ರಕರಣವನ್ನು ತೀವ್ರವಾಗಿ ಖಂಡಿಸಬೇಕೆಂದು ಹಾಗೂ ಕೂಡಲೇ ಅಪರಾಧಿಯನ್ನು ಪತ್ತೆ ಮಾಡಬೇಕೆಂದು ಎರಡೂ ಸರಕಾರವನ್ನು ಒತ್ತಾಯಿಸಿದರು ಎಂದು ವಿಧಾನ ಪರಿಷತ್ ಶಾಸಕರಾದ ಐವನ್ ಡಿʼಸೋಜಾರವರು ತಿಳಿಸಿದ್ದಾರೆ.