Thursday, May 1, 2025
HomeUncategorizedವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಯುರೇಕಾ -2025 : ಐದನೇ ದಿನದ ಶಿಬಿರ - ಪ್ರಕೃತಿಯ ರಹಸ್ಯಗಳ...

ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಯುರೇಕಾ -2025 : ಐದನೇ ದಿನದ ಶಿಬಿರ – ಪ್ರಕೃತಿಯ ರಹಸ್ಯಗಳ ಅನಾವರಣ  ಖಗೋಳ ವಿಸ್ಮಯಗಳು

ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗಾಗಿ ನಡೆಯುತ್ತಿರುವ ಯುರೇಕಾ – 2025ರ ಐದನೇ ದಿನದ ಶಿಬಿರದ ಪ್ರಥಮ ಅವಧಿಯನ್ನು ಇಂದ್ರಪ್ರಸ್ಥ ವಿದ್ಯಾಲಯದ ಪ್ರಾಂಶುಪಾಲರಾದ ಎಚ್.ಕೆ ಪ್ರಕಾಶ್‌ ಅವರು ಪ್ರಕೃತಿಯ ರಹಸ್ಯಗಳ ಅನಾವರಣ ವಿಷಯದ ಕುರಿತು ನಡೆಸಿಕೊಟ್ಟರು.ಪ್ರಕೃತಿಯಲ್ಲಿರುವ ಹಲವಾರು ಜೀವವೈವಿಧ್ಯಗಳ ಬಗ್ಗೆ ಕುತೂಹಲಕಾರಿ ಅಂಶಗಳನ್ನು ತಿಳಿಸಿಕೊಡುವುದರ ಮೂಲಕ ಪ್ರಕೃತಿಯ ಅಗಾಧ ವೈಶಿಷ್ಟ್ಯಗಳನ್ನು ಮೀರಿಸಬಲ್ಲ ಶಕ್ತಿ ಇನ್ನೊಂದಿಲ್ಲ ಎಂಬುದನ್ನು ಮನವರಿಕೆ ಮಾಡಿಕೊಟ್ಟರು.

ಬಳಿಕ ಎರಡನೇ ಅವಧಿಯಲ್ಲಿ ಮಣಿಪಾಲ್‌ ಸೆಂಟರ್‌ ಫಾರ್‌ ನ್ಯಾಚುರಲ್‌ ಸೈನ್ಸ್‌ ನ ಸಂಶೋಧನಾ ವಿದ್ಯಾರ್ಥಿ ಅತುಲ್‌ ಭಟ್‌ ಇವರು ಖಗೋಳಶಾಸ್ತ್ರದ ಕೌತುಕ ವಿಚಾರಗಳನ್ನು ತಿಳಿಸಿಕೊಡುತ್ತಾ, ಬ್ರಹ್ಮಾಂಡದ ವಿಸ್ತಾರ, ಸೌರಮಂಡಲದಲ್ಲಿರುವ ಆಕಾಶಕಾಯಗಳು, ಗ್ರಹಗಳ ಮಧ್ಯೆ ಇರುವ ಅಂತರಗಳು ಮುಂತಾದ ವಿಷಯಗಳ ಕುರಿತು ಮಾತನಾಡಿದರು. ಅಪರಾಹ್ನದ ಬಳಿಕ ವಿದ್ಯಾರ್ಥಿಗಳಿಗಾಗಿ ಮನೋರಂಜನಾತ್ಮಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಯಿತು. ಬಳಿಕ ವಿವೇಕಾನಂದ ಪದವಿಪೂರ್ವ ಕಾಲೇಜಿನ ಭೌತಶಾಸ್ತ್ರ ವಿಭಾಗದ ಉಪನ್ಯಾಸಕರಾದ ಬಿ. ಹರೀಶ ಶಾಸ್ತ್ರಿ ರಸಪ್ರಶ್ನೆ ಕಾರ್ಯಕ್ರಮವನ್ನು ನಡೆಸಿಕೊಟ್ಟರು.  

RELATED ARTICLES
- Advertisment -
Google search engine

Most Popular