JCI ಪರ್ಕಳ ವತಿಯಿಂದ ಪರ್ಕಳ ಪ್ರೌಢ ಶಾಲೆಯಲ್ಲಿ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮ

0
74

ಪರ್ಕಳ : ದಿನಾಂಕ 17 ಜನವರಿ 2026 ರಂದು ಪರ್ಕಳ ಪ್ರೌಢ ಶಾಲೆ, ಪರ್ಕಳದಲ್ಲಿ JCI ಪರ್ಕಳದ ವತಿಯಿಂದ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಜಿಲ್ಲಾ ಉಪನಿರ್ದೇಶಕರ ಕಚೇರಿಯ ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ಚಂದ್ರಶೇಖರ್ ಶೆಟ್ಟಿ ಹಾಗೂ ಕರಿಯರ್ ಗೈಡೆನ್ಸ್ ಸಂಪನ್ಮೂಲ ಕೇಂದ್ರ, ಬ್ರಹ್ಮಾವರದ ದೀಕ್ಷಿತ್ ಭಾಗವಹಿಸಿ, ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ರಸ್ತೆ ಸುರಕ್ಷತೆಯ ನಿಯಮಗಳು, ಅಪಘಾತ ತಡೆ ಕ್ರಮಗಳು ಹಾಗೂ ಜಾಗೃತಿಯ ಮಹತ್ವದ ಕುರಿತು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ JCI ಪರ್ಕಳದ ಅಧ್ಯಕ್ಷರಾದ Jc HGF ಭರತ್ ಕೆ ಕುಲಾಲ್, ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಅರುಣಾಚಲ ಹೆಗ್ಡೆ, ಶಾಲಾ ಸಂಚಾಲಕ ದಿನೇಶ್ ಹೆಗ್ಡೆ, ಮುಖ್ಯೋಪಾಧ್ಯಾಯ ಆನಂದ ನಾಯ್ಕ್ ಹಾಗೂ JCI ಪರ್ಕಳದ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here