ಧರ್ಮಸ್ಥಳ ವಲಯ ಭಜನಾ ಪರಿಷತ್ ಸಭೆ

0
6


ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಬೆಳ್ತಂಗಡಿ ತಾಲೂಕು ಇದರ ಧರ್ಮಸ್ಥಳ ವಲಯ ಪರಿಷತ್ ಸಭೆಯು ಮಹೋತ್ಸವ ಸಭಾ ಭವನದಲ್ಲಿ ನಡೆಯಿತು.
ಭಜನಾ ಪರಿಷತ್ ರಾಜ್ಯಾಧ್ಯಕ್ಷರಾದ ಪಿ ಚಂದ್ರಶೇಖರ್ ಸಾಲ್ಯಾನ್ ರವರು ದೀಪ ಬೆಳಗಿಸಿ ಉದ್ಘಾಟಿಸಿ ಭಜನಾ ಮಂಡಳಿಗಳ ಬಲವರ್ಧನೆ ಹಾಗೂ ಮುಂದಿನ ಯೋಜನೆಗಳ ಬಗ್ಗೆ,ಭಜನಾ ಕಮ್ಮಟದ ಶಿಬಿರಾರ್ಥಿಗಳ ಆಯ್ಕೆಯ ಬಗ್ಗೆ ಮಾಹಿತಿ ನೀಡಿದರು.ವಲಯ ಮೇಲ್ವಿಚಾರಕರಾದ ರವೀಂದ್ರ ರವರು ಪ್ರಾಸ್ತಾವಿಕವಾಗಿ ಮಾತನಾಡಿದರು.ಸಭೆಯಲ್ಲಿ ಭಜನಾ ಮಂಡಳಿಗಳ ಪದಾಧಿಕಾರಿಗಳ ಹಾಗೂ ಸದಸ್ಯರುಗಳ ಅನಿಸಿಕೆ ಅಭಿಪ್ರಾಯಗಳನ್ನು ಸಂಗ್ರಹಿಸಿ ರಾಜ್ಯಾಧ್ಯಕ್ಷರ ಮತ್ತು ಸಮನ್ವಯಧಿಕಾರಿಯವರ ಸಲಹೆಯಂತೆ ಕೆಲವೊಂದು ನಿರ್ಮಯಗಳನ್ನು ಅಂಗೀಕರಿಸಲಾಯಿತು.


ಭಜನಾ ಪರಿಷತ್ ಜಿಲ್ಲಾ ಸಮನ್ವಯಾಧಿಕಾರಿ ಸಂತೋಷ್ ಪಿ ಅಳಿಯೂರು ಎಲ್ಲಾ ಭಜನಾ ಮಂಡಳಿಗಳಿಗೆ ಧರ್ಮಸ್ಥಳದ ಮಾಹಿತಿ ಇರುವ ಅಮೃತ ಹೆಜ್ಜೆಗಳು ಎಂಬ ಕೈಪಿಡಿಗಳನ್ನು ನೀಡಿ ಮಾಹಿತಿ ನೀಡಿದರು. ವೇದಿಕೆಯಲ್ಲಿ ತಾಲೂಕು ಅದ್ಯಕ್ಷರಾದ ರವಿರಾಜ್ ಚಾರ್ಮಾಡಿ, ಗೌರವ ಸಲಹೆಗಾರರಾದ ನಾಗೇಶ್ ಬಿ ನೆರಿಯ, ತಾಲೂಕು ಕಾರ್ಯದರ್ಶಿ ಚಂದ್ರಶೇಖರ,ವಲಯಾಧ್ಯಕ್ಷ ಹರೀಶ್ ಕುಮಾರ್ ಕಾಯರ್ತಡ್ಕ,ಕಾರ್ಯದರ್ಶಿ ದಾಮೋದರ್ ವೇದಿಖಯಕೆಯಲ್ಲಿ ಉಪಸ್ಥಿತರಿದ್ದರು.


ಧರ್ಮಸ್ಥಳ ವಲಯದ ಸೇವಾಪ್ರತಿನಿಧಿಗಳು ಪ್ರಾರ್ಥನೆ ಹಾಡಿದರು, ಶ್ರೀಮತಿ ಪ್ರಮೀಳ ಸ್ವಾಗತಿಸಿದರು, ಜನಾರ್ಧನ ಧನ್ಯವಾದವಿತ್ತರು,ಶ್ರೀಮತಿ ಸುಜಾತ ಕಾರ್ಯಕ್ರಮ ನಿರೂಪಿಸಿದರು.