ಮೂಡುಬಿದಿರೆ: ರೋಟರಿ ಕ್ಲಬ್ ಟೆಂಪಲ್ ಟೌನ್ 2024-25ನೇ ಸಾಲಿನಲ್ಲಿ ಕೈಗೊಂಡಿರುವ ಸಮಾಜಮುಖಿ ಸೇವಾ ಕಾರ್ಯಗಳನ್ನು ಗುರುತಿಸಿ ರೋಟರಿ ಜಿಲ್ಲೆ 3181 ಇದರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರೋಟರಿ ಸಂಸ್ಥೆ ನೀಡುವ ಅತ್ಯುನ್ನತ ಪ್ರಶಸ್ತಿಯಾದ “ಡೈಮಂಡ್ ಪ್ಲಸ್” ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಮೂವರು ಹೆಣ್ಣು ಮಕ್ಕಳೊಂದಿಗೆ ವಾಸಿಸುತ್ತಿರುವ ಪರಿಶಿಷ್ಟ ಸಮಾಜದ ವೃದ್ಧೆಯೊಬ್ಬರ ಬೀಳುವ ಸ್ಥಿತಿಯಲ್ಲಿದ್ದ ಮನೆಯನ್ನು ಪುನರ್ ನಿರ್ಮಿಸಿಕೊಟ್ಟ ಮಾನವೀಯ ಸೇವೆಗಾಗಿ “ಗಮನಾರ್ಹ ಸೇವಾ ಪ್ರಶಸ್ತಿಯನ್ನು” ರೋಟರಿ ಕ್ಲಬ್ ಟೆಂಪಲ್‌ಟೌನ್ ಮೂಡುಬಿದಿರೆ ಕೊಂಡಿತು. ತನ್ನದಾಗಿಸಿ ಜೂ. 21ರಂದು ಸಂಜೆ ಪಿಲಿಕುಳದ ಭಾರತ್ ಸೌಟ್ಸ್ ಮತ್ತು ಗೈಡ್ಸ್ ತರಬೇತಿ ಸಭಾ ಭವನದಲ್ಲಿ ನಡೆದ 2024-25ನೇ ಸಾಲಿನ ರೋಟರಿ ಜಿಲ್ಲೆ 3181ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರೋಟರಿ ಜಿಲ್ಲಾ ಗವರ್ನರ್ ವಿಕ್ರಮ್ ದತ್ತ. ಮಾಜಿ ಗವರ್ನರ್ ಕೇಶವ್ ಮತ್ತು ಜಿಲ್ಲಾ ಪ್ರಶಸ್ತಿ ಸಮಿತಿಯ ಸಭಾಪತಿ ಡಾ. ಅರವಿಂದ ಭಟ್, ಅಸಿಸ್ಟೆಂಟ್ ಗವರ್ನರ್ ಡಾ. ಮುರಳಿಕೃಷ್ಣ ಆರ್.ವಿ. ಮತ್ತಿತರ ಗಣ್ಯರ ಉಪಸ್ಥಿತಿಯಲ್ಲಿ ಕ್ಲಬ್ ಅಧ್ಯಕ್ಷ ಪೂರ್ಣಚಂದ್ರ ಜೈನ್, ಅವರ ಪತ್ನಿ ಅಪೇಕ್ಷಾ ಪೂರ್ಣಚಂದ್ರ ಮತ್ತು ಕ್ಲಬ್ ಕಾರ್ಯದರ್ಶಿ ಹರೀಶ್ ಎಂ.ಕೆ. ಅವರು ಈ ಎರಡೂ ಪ್ರಶಸ್ತಿಗಳನ್ನು ಸ್ವೀಕರಿಸಿದರು.

ಕ್ಲಬ್ ಅಧ್ಯಕ್ಷ ಪೂರ್ಣಚಂದ್ರ ಜೈನ್ ಅವರ ನೇತ್ರತ್ವದಲ್ಲಿ ಕ್ಲಬ್‌ನ ಎಲ್ಲಾ ಸದಸ್ಯರ ಸಹಕಾರದಿಂದ ವೈವಿಧ್ಯವರಿತು ಸೇವಾ ಕಾರ್ಯಗಳನ್ನು ಕೈಗೊಂಡಿದ್ದು ಅರ್ಹವಾಗಿಯೇ ಡೈಮಂಡ್ ಪ್ರಶಸ್ತಿಗೆ ಭಾಜನವಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಟೆಂಪಲ್ ಟೌನ್ ರೋಟರಿ ಅಧ್ಯಕ್ಷ ಪೂರ್ಣಚಂದ್ರ ಜೈನ್ ಅವರು ನಮ್ಮ ರೋಟರಿ ಕ್ಲಬ್ ಆಫ್ ಮೂಡಬಿದಿರೆ ಟೆಂಪಲ್ ಟೌನ್ ಗೆ ಅತ್ಯುನ್ನತ ಗೌರವವಾದ ಡೈಮಂಡ್ ಪ್ಲಸ್ ಪ್ರಶಸ್ತಿ ಲಭಿಸಿದ ಖುಷಿಯ ಸಂಗತಿಯನ್ನು ನಿಮಗೆ ಹಂಚಿಕೊಳ್ಳಲು ನಮ್ಮೆಲ್ಲರಿಗೂ ತುಂಬಾ ಹೆಮ್ಮೆ ಹೆಮ್ಮೆ ಉಂಟಾಗಿದೆ. ಈ ಪ್ರಶಸ್ತಿ ನಮ್ಮ ಕ್ಲಬ್‌ನ ಸಮರ್ಪಿತ ಸೇವಾ ಚಟುವಟಿಕೆಗಳು, ಸದಸ್ಯರ ಶ್ರಮ, ಹಾಗೂ ಹೊರಗಿನ ದಾನಿಗಳ ಬೆಂಬಲಕ್ಕೆ ಪ್ರತಿಫಲವಾಗಿದೆ. ನೀವು ನೀಡಿದ ಬೆಂಬಲ ಮತ್ತು ಸಹಕಾರವು ನಮ್ಮ ಹಾದಿಗೆ ಬೆಳಕಾದಂತಾಗಿದೆ. ಇದೊಂದು ಹೊಸ ಪ್ರೇರಣೆಯಾಗಿ, ನಾವು ಇನ್ನಷ್ಟು ಸಮಾಜಮುಖಿ ಕಾರ್ಯಕ್ರಮಗಳನ್ನು ರೂಪಿಸಿ ಕಾರ್ಯಗತಗೊಳಿಸಲು ಬದ್ಧರಾಗಿದ್ದೇವೆ. ಈ ಯಶಸ್ಸು ನಮ್ಮೆಲ್ಲರದ್ದಾಗಿದ್ದು, ಪ್ರತಿಯೊಬ್ಬರಶ್ರಮವನ್ನು ಹೆಮ್ಮೆಯಿಂದ ಪರಿಗಣಿಸುತ್ತೇವೆ” ಎಂದಿದ್ದಾರೆ.
