ಮೂಡಬಿದಿರೆ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಪಾಡ್ಯಾರು ಇಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಪತಂಜಲಿ ಯೋಗ ಸಂಸ್ಥೆಯ ಮೂಡುಬಿದರೆ ಘಟಕದ ಸವಿತಾ ಮತ್ತು ತಂಡ ವಿದ್ಯಾರ್ಥಿಗಳಿಗೆ ಯೋಗ ಪ್ರಾತ್ಯಕ್ಷಿಕೆಯನ್ನು ನಡೆಸಿ ವಿದ್ಯಾರ್ಥಿಗಳಿಂದ ಯೋಗಭ್ಯಾಸ ನಡೆಸಿದರು ಇದೇ ಸಂದರ್ಭದಲ್ಲಿ ಸಂಭ್ರಮ ಶನಿವಾರದ ಕಾರ್ಯಕ್ರಮ ಅಂಗವಾಗಿ ವಿಶೇಷ ಚೇತನ ವ್ಯಕ್ತಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ನಿವೃತ್ತ ಅಂಚೆಪಾಲಕ ಬಾಲಕೃಷ್ಣ ನಾಯಕ್ ಭಾಗವಹಿಸಿ ವಿದ್ಯಾರ್ಥಿಗಳಿಗೆ ತಮ್ಮ ಜೀವನದಲ್ಲಿ ಅನುಭವಿಸಿದ ಸುಖ-ದುಃಖಗಳನ್ನು ಹಂಚಿಕೊಂಡರು ವಿದ್ಯಾರ್ಥಿಗಳು ಎದೆಗುಂದದೆ ಯಾವುದೇ ರೀತಿಯ ದೈಹಿಕ ತೊಂದರೆಗೊಳಗಾದಾಗ ಆತ್ಮಸ್ಥೈರ್ಯದಿಂದ ಬದುಕಬೇಕು ಎಂದು ತಿಳಿಸಿದರು ಕಾರ್ಯಕ್ರಮ ವನ್ನು ಮುಖ್ಯ ಶಿಕ್ಷಕ ಪ್ರಸನ್ನ shenoy ಸಹ ಶಿಕ್ಷಕ ರಾಬರ್ಟ್ ಡಿಸೋಜಾ ಮತ್ತು ಪ್ರತಿಭಾ ನಿರ್ವಹಿಸಿದರು.
Home ಮೂಡುಬಿದಿರೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಪಾಡ್ಯಾರು, ಅಂತರಾಷ್ಟ್ರೀಯ ಯೋಗ ದಿನಾಚರಣೆ ಮತ್ತು ಸಂಭ್ರಮ ಶನಿವಾರ.