ಮೂಡುಬಿದಿರೆ : ದರೆಗುಡ್ಡೆ ಗ್ರಾಮದ ಗುರುಬೆಟ್ಟು ನಿವಾಸದ ಆದಿತ್ಯ ಎನ್ನುವವರು ಕಳೆದ ವಾರ ಕಾರ್ಕಳದಲ್ಲಿ ಅಪಘಾತದಲ್ಲಿ ಸಿಲುಕಿ ಹಾಸಿಗೆಯಲ್ಲಿಯೇ ಶುಶ್ರೂಷೆ ಪಡೆದುಕೊಳ್ಳುವ ಅನಾರೋಗ್ಯ ಸ್ಥಿತಿಯಲ್ಲಿದ್ದಾರೆ.
ತೀರಾ ಬಡಕುಟುಂಬದವರಾಗಿರುವ ಅವರಿಗೆ ಕರಾವಳಿ ಕೇಸರಿ ಸೇವಾ ಟ್ರಸ್ಟ್ ಕೊಡುಗೈದಾನಿಯೊಬ್ಬರಿಂದ ಸಹಾಯಧನ ಕೊಡಿಸುವ ಕೆಲಸ ಮಾಡಿದ್ದರು.
ರುದ್ರಾಂಶ ನಿರ್ಮಾಣ ಸಂಸ್ಥೆಯ ಅಜಯ್ ದೀಕ್ಷಿತ್ ಶೆಟ್ಟಿಯವರು ಸಹಾಯಧನವನ್ನು ನೀಡಲು ಮುಂದಾಗಿದ್ದು ಅದನ್ನು ಆದಿತ್ಯ ಅವರ ಮನೆಯಲ್ಲಿಯೇ ವಿತರಣೆ ಮಾಡಿ ಕುಟುಂಬಕ್ಕೆ ಸಾಂತ್ವನ ಹೇಳಿ, ಆರೋಗ್ಯವನ್ನು ಹರಸಿದರು.
ಯುವಕನ ತಾಯಿ ಸುಜಾತ ಅವರು ಆ ಸಹಾಯಧನವನ್ನು ಸ್ವೀಕರಿಸಿದರು. ಅಜಯ್ ದೀಕ್ಷಿತ್ ಶೆಟ್ಟಿ ಮೂಡಬಿದ್ರೆಯ ಹಲವಾರು ಅನಾರೋಗ್ಯದಲ್ಲಿರುವ ಕುಟುಂಬದವರಿಗೆ ಸಹಾಯಧನವನ್ನು ನೀಡುತ್ತಿದ್ದು ಅವರ ಸೇವಾ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಸಂದರ್ಭದಲ್ಲಿ ಅಶೋಕ್ ಶೆಟ್ಟಿ ಮತ್ತು ಕರಾವಳಿ ಕೇಸರಿ ಟ್ರಸ್ಟಿನ ಸಮಿತ್ ರಾಜ್ ದರೆಗುಡ್ಡೆ ಉಪಸ್ಥಿತರಿದ್ದರು.

