ಸರಕಾರಿ ಸಂಯುಕ್ತ ಪ್ರೌಢಶಾಲೆ ಎರ್ಲಪಾಡಿಯಲ್ಲಿ ದಾನಿಗಳಿಂದ ನೋಟ್ ಪುಸ್ತಕ ವಿತರಣೆ, ಶಾಲಾ ಮಂತ್ರಿಮಂಡಲ ಉದ್ಘಾಟನೆ

0
113

ದಿನಾಂಕ 11.06.2025ರಂದು ಸರಕಾರಿ ಸಂಯುಕ್ತ ಪ್ರೌಢಶಾಲೆ ಎರ್ಲಪಾಡಿಯಲ್ಲಿ ದಾನಿಗಳಿಂದ ನೋಟ್ ಪುಸ್ತಕ ವಿತರಣೆ, ಶಾಲಾ ಮಂತ್ರಿಮಂಡಲ ಉದ್ಘಾಟನೆ ಮತ್ತು 2024 –25 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ಕಾರ್ಯಕ್ರಮವು ನಡೆಯಿತು. ಈ ಸಂದರ್ಭದಲ್ಲಿ ದಾನಿಗಳಾದ ಬೈಲೂರಿನ ಸೌಂದರ್ಯ ಸ್ಟೋರ್ ಮಾಲೀಕರು ಆಗಿರುವ ಶ್ರೀ ರಮೇಶ್ ಶೆಟ್ಟಿಯವರು ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ಗಳನ್ನು ವಿತರಣೆ ಮಾಡಿ ಶುಭ ಹಾರೈಸಿದರು. ನಿವೃತ್ತ ಲೆಕ್ಕ ಪರಿಶೋಧಕರಾಗಿರುವ ಕಾರ್ಕಳದ ಮಹಾದಾನಿ ಗಳಾದ ಶ್ರೀ ಕೆ ಕಮಲಾಕ್ಷ ಕಾಮತ್ ರವರು 24-25ನೇ ಸಾಲಿನ ಎಸ್. ಎಸ್. ಎಲ್. ಸಿ ಪರೀಕ್ಷೆ ಯಲ್ಲಿ ಪ್ರಥಮ, ದ್ವಿತೀಯ,ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ವಿತರಿಸಿ ಶುಭ ಹಾರೈಸಿದರು.

ಎಸ್.ಎಸ್.ಎಲ್.ಸಿ.ಪರೀಕ್ಷೆ ಯಲ್ಲಿ ವಿಷಯವಾರು ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಶಾಲಾ ಶಿಕ್ಷಕರು ಹಾಗೂ ಶಾಲಾ ನಿವೃತ್ತ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸುನಂದಾ ಎಲ್. ಎಸ್. ಇವರು ನಗದು ಬಹುಮಾನ ನೀಡಿ ಶುಭ ಹಾರೈಸಿದರು. ನಿವೃತ್ತ ಮುಖ್ಯ ಶಿಕ್ಷಕರು ಹಾಗೂ ಶಾಲಾಭಿವೃದ್ಧಿ ಸಮಿತಿಯ ಸದಸ್ಯರಾದ ಶ್ರೀ ಅನಂತ ಪಟ್ಟಾಭಿ ರಾವ್ ರವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಶಾಲಾ ಸಂಸತ್ತು ದೀಪ ಬೆಳಗಿಸಿ ಉದ್ಘಾಟನೆಗೊಡಿತು. ಶಾಲಾ ಸಮಾಜ ಶಿಕ್ಷಕಿ ಶ್ರೀಮತಿ ಇಂದಿರಾ ಇವರು ಮಕ್ಕಳಿಗೆ ಪ್ರಮಾಣ ವಚನ ಬೋಧಿಸಿದರು. ಈ ಕಾರ್ಯಕ್ರಮ ದ ಅಧ್ಯಕ್ಷ ತೆಯನ್ನು ಪ್ರೌಢ ಶಾಲೆಯ ಎಸ್. ಡಿ.ಎಂ.ಸಿ. ಅಧ್ಯಕ್ಷ ರಾದ ಶ್ರೀ ನರಂಗ ಕುಲಾಲ್ ಇವರು ವಹಿಸಿ ಕೊಂಡು ಮಕ್ಕಳಿಗೆ ಶುಭ ಹಾರೈಸಿದರು.ಕಾರ್ಯಕ್ರಮ ದಲ್ಲಿ ಪ್ರಾಥಮಿಕ ಶಾಲಾ ವಿಭಾಗದ ಎಸ್ ಡಿ ಎಂ ಸಿ ಉಪಾಧ್ಯಕ್ಷೆ ಶ್ರೀಮತಿ ಯಶೋಧ ಶೆಟ್ಟಿ ಉಪಸ್ಥಿತರಿದ್ದರು. ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ಶ್ರೀಮತಿ ಹೇಮಲತಾ ರವರು ಸರ್ವರನ್ನು ಸ್ವಾಗತಿಸಿದರು. ಬಹುಮಾನಿತರ ಪಟ್ಟಿಯನ್ನು ಶಾಲಾ ವಿಜ್ಞಾನ ಶಿಕ್ಷಕಿ ಶ್ರೀಮತಿ ಚೇತನಾ ಇವರು ವಾಚಿಸಿದರು. ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಶ್ರೀ ವಿಶ್ವನಾಥ ರವರು ಕಾರ್ಯಕ್ರಮವನ್ನು ನಿರೂಪಿಸಿದರು . ಪ್ರಾಥಮಿಕ ಶಾಲಾ ವಿಭಾಗದ ಪ್ರಭಾರ ಮುಖ್ಯ ಶಿಕ್ಷಕ ಶ್ರೀ ಸುರೇಶ್ ಶೆಟ್ಟಿ ಅವರು ಧನ್ಯವಾದ ಸಮರ್ಪಿಸಿದರು. ಈ ಸಂದರ್ಭದಲ್ಲಿ ಉಭಯ ಶಾಲೆಯ ಪೋಷಕರು, ವಿದ್ಯಾರ್ಥಿಗಳು, ಶಿಕ್ಷಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here