ಅಮೃತ ಭಾರತಿ ವಿದ್ಯಾ ಕೇಂದ್ರದಲ್ಲಿ ಜಿಲ್ಲಾ ಮಟ್ಟದ ಜ್ಞಾನ–ವಿಜ್ಞಾನ ಮೇಳ

0
8

ಹೆಬ್ರಿ : ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಇದರ ಸಹಯೋಗದಲ್ಲಿ ,ಅಮೃತ ಭಾರತಿ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ 18ನೇ ವರ್ಷದ ಜಿಲ್ಲಾಮಟ್ಟದ “ವಿಜ್ಞಾನ ಮೇಳ”ಗಣಿತ, ವೇದಗಣಿತ ,ಯೋಗ ಸಂಸ್ಕೃತಿ ಜ್ಞಾನ ಮಹೋತ್ಸವ 2026 ಉದ್ಘಾಟನಾ ಕಾರ್ಯಕ್ರಮವು “ಕೇಶವ ಭವನ” ಅಮೃತ ಭಾರತಿ ವಿದ್ಯಾ ಕೇಂದ್ರದಲ್ಲಿ ನಡೆಯಿತು.

ಉದ್ಘಾಟಕರಾದ ಕೃಷ್ಣಮೂರ್ತಿ ಕೆ.ಪಿ, ಪ್ರಭಾರ ಮುಖ್ಯೋಪಾಧ್ಯಾಯರು ಸರಕಾರಿ ಪ್ರೌಢಶಾಲೆ ನಾವುಂದ ಇವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ,”ಸೋಲೇ ಗೆಲುವಿನ ಸೋಪಾನ, ಸೋತಾಗ ಚಿಂತಿಸದೆ, ಗೆದ್ದಾಗ ಬೀಗದೇ ಎರಡನ್ನು ಸಮ ಸ್ಥಿತಿಯಲ್ಲಿ ಸ್ವೀಕರಿಸಿ, ಎಂದು ಕರೆ ನೀಡಿದರು. ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಇದರ ಅಧ್ಯಕ್ಷರಾದ ಪಾಂಡುರಂಗ ಪೈರವರು” ಜ್ಞಾನ-ವಿಜ್ಞಾನ ಮೇಳವಿಸಿದಾಗ ಬದುಕು ಸುಂದರವಾಗುತ್ತದೆ”ಎಂದರು .ವಿದ್ಯಾಭಾರತಿ ಕರ್ನಾಟಕ ಪ್ರಾಂತ ಇದರ ಉಪಾಧ್ಯಕ್ಷರು ಹಾಗೂ ಅಮೃತ ಭಾರತಿ ಟ್ರಸ್ಟ್ ಕಾರ್ಯದರ್ಶಿಗಳಾದ ಗುರುದಾಸ್ ಶೆಣೈರವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ “ಸತತ ಪ್ರಯತ್ನವಿದ್ದರೆ ಗೆಲುವು ನಿಶ್ಚಿತ” ಎಂದರು.

ಅಮೃತ ಭಾರತಿ ವಿದ್ಯಾಲಯದ ಅಧ್ಯಕ್ಷರಾದ ಶೈಲೇಶ್ ಕಿಣಿರವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ವೇದಿಕೆಯಲ್ಲಿ ವಿದ್ಯಾ ಭಾರತಿ ಕರ್ನಾಟಕ ಉಡುಪಿ ಜಿಲ್ಲೆಯ ಶಾರೀರಿಕ ಪ್ರಮುಖ ವಿಜಯ್ ಕುಮಾರ್ ಶೆಟ್ಟಿ, ವಿದ್ಯಾಭಾರತಿ ಉಡುಪಿ ಜಿಲ್ಲೆಯ ಕಾರ್ಯದರ್ಶಿಗಳಾದ ಮಹೇಶ್ ಹೈಕಾಡಿ , ಸಂಸ್ಕೃತಿ ಜ್ಞಾನ ಪ್ರಮುಖ್ ಜ್ಯೋತಿ ಎಳ್ಳಾರೆ, ಜಿಲ್ಲಾ ವಿಜ್ಞಾನ ಪ್ರಮುಖ ಪ್ರಶ್ಮಿತ ಬ್ರಹ್ಮಾವರ , ಜಿಲ್ಲಾ ಗಣಿತ ಪ್ರಮುಖ್ ಜ್ಯೋತಿ ಸಿದ್ದಾಪುರ ಇವರೆಲ್ಲರೂ ಉಪಸ್ಥಿತರಿದ್ದು ಸ್ಪರ್ಧೆಗಳ ತೀರ್ಪುಗಾರರಿಗೆ ಪುಷ್ಪವನ್ನು ನೀಡಿ ಗೌರವಿಸಿದರು .

ಅಮೃತ ಭಾರತಿ ಟ್ರಸ್ಟನ ಸದಸ್ಯರು, ಟ್ರಸ್ಟಿಗಳು ಉಪಸ್ಥಿತರಿದ್ದರು.2025-26ನೇ ಸಾಲಿನ 10ನೇ ತರಗತಿಯಲ್ಲಿ ಅತ್ಯಧಿಕ ಅಂಕ ಗಳಿಸಿದ, ವಿದ್ಯಾ ಭಾರತಿ ಶೈಕ್ಷಣಿಕ ಸಂಯೋಜಿತ ಸಂಸ್ಥೆಗಳಲ್ಲಿ ಓದಿ ಅಗ್ರಶ್ರೇಣಿ ಪಡೆದ ವಿದ್ಯಾರ್ಥಿಗಳಾದ ಲಾವಣ್ಯ ಹೆಚ್ .ವಿ ಮತ್ತು ಅವನೀಶ್. ಆರ್. ರಾವ್ ಇವರನ್ನು “ಅಂಗಳ “ಕಾರ್ಯಕ್ರಮದ ಮೂಲಕ ಸನ್ಮಾನಿಸಲಾಯಿತು.

30ಕ್ಕೂ ಅಧಿಕ ಮಂದಿ ತೀರ್ಪುಗಾರರು ಉಪಸ್ಥಿತರಿದ್ದು ,ವಿವಿಧ ಸ್ಪರ್ಧೆಗಳಿಂದ ವಿದ್ಯಾರ್ಥಿಗಳನ್ನು ರಾಜ್ಯ ಮಟ್ಟಕ್ಕೆ ಆಯ್ಕೆ ಮಾಡಿದರು. ಹತ್ತಕ್ಕೂ ಅಧಿಕ ವಿದ್ಯಾಸಂಸ್ಥೆಗಳು ಭಾಗವಹಿಸಿದ್ದು ,350ಕ್ಕೂ ಅಧಿಕ ವಿದ್ಯಾರ್ಥಿಗಳು ಸ್ಪರ್ಧೆಗಳ ಪ್ರಯೋಜನ ಪಡೆದರು.