ಉಡುಪಿ : ದೈವಜ್ಞ ಬ್ರಾಹ್ಮಣ ಸಂಘ (ರಿ.) ಒಳಕಾಡು ಉಡುಪಿ ಇದರ ದೈವಜ್ಞ ಬ್ರಾಹ್ಮಣ ಮಹಿಳಾ ಮಂಡಳಿ ವತಿಯಿಂದ ಆಗಸ್ಟ್ 8 ರಂದು 19 ವರ್ಷದ ಶ್ರೀ ವರಮಹಾಲಕ್ಷ್ಮೀ ವೃತ ಪೊಜೆ ಉಡುಪಿ ಒಳಕಾಡಿನ ದೈವಜ್ಞ ಮಂದಿರ ದಲ್ಲಿ ನೆಡೆಯಿತು.
ವೇದ ಮೂರ್ತಿ ವಾಸುದೇವ ಉಪಾಧ್ಯಾಯ ಧಾರ್ಮಿಕ ಪೂಜೆಗಳನ್ನು ನೆಡೆಸಿಕೊಟ್ಟರು , ಸಾಮೂಹಿಕ ಪ್ರಾರ್ಥನೆ , ಕಳಶ ಪ್ರತಿಷ್ಠೆ , ಸಮೂಹಿಕ ಕುಂಕುಮ ಅರ್ಚನೆ , ಲಲಿತಾ ಸಹಸ್ರನಾಮ ಪಠಣ , ಭಜನಾ ಕಾರ್ಯಕ್ರಮ ,ಮಹಾಪೂಜೆ ಬಳಿಕ ಅನ್ನಸಂತರ್ಪಣೆ ನೆಡೆಯಿತು , ಪೂಜಾ ಕಾರ್ಯದಲ್ಲಿ ರಾಜೇಶ್ ಶೇಟ್ , ಸುಮನಾ ಶೇಟ್ ಸಹಕರಿಸಿದರು , ಸಮಾರಂಭದಲ್ಲಿ ಸಂಘದ ಅಧ್ಯಕ್ಷರಾದ ಎಸ್ ಸುಬ್ರಮಣ್ಯ ಶೇಟ್ , ದೈವಜ್ಞ ಬ್ರಾಹ್ಮಣ ಮಹಿಳಾ ಮಂಡಳಿ ಅಧ್ಯಕ್ಷೆ ಕಲ್ಪನಾ ಶೇಟ್ , ಕಾರ್ಯದರ್ಶಿ ಜಯಶ್ರೀ ಶೇಟ್ , ಮೆನೇಜರ್ ವೆಂಕಟೇಶ್ ಶೇಟ್ ಹಾಗೂ ದೈವಜ್ಞ ಬ್ರಾಹ್ಮಣ ಮಹಿಳಾ ಮಂಡಳಿ ಪಧಾದಿಕಾರಿಗಳು , ನೂರಾರು ಸಮಾಜ ಬಾಂದವರು ಉಪಸ್ಥರಿದ್ದರು

