ಕಾಪು : ಕಾಪು ತಾಲೂಕಿನ ಪಡುಬಿದ್ರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ನಿವಾಸಿಯಾಗಿರುವ ದಿವ್ಯಾ ಕುಲಾಲ್ (30) ಅವರು ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸೆಗೆ ಅಗತ್ಯವಿರುವ ಹೆಚ್ಚಿನ ವೆಚ್ಚವನ್ನು ಭರಿಸಲು ಸಾಧ್ಯವಾಗದೆ ಸಾರ್ವಜನಿಕರ ನೆರವಿನ ನಿರೀಕ್ಷೆಯಲ್ಲಿದ್ದಾರೆ.
ದಿವ್ಯಾ ಅವರು ದಿವಂಗತ ಕೃಷ್ಣ ಮೂಲ್ಯ ಅವರ ಪುತ್ರಿಯಾಗಿದ್ದು, ಆರ್ಥಿಕವಾಗಿ ಹಿಂದುಳಿದ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಪ್ರಸ್ತುತ ಕ್ಯಾನ್ಸರ್ ವಿರುದ್ಧ ಹೋರಾಟ ನಡೆಸುತ್ತಿರುವ ಅವರು, ಒಂದು ವರ್ಷದ ಪುಟ್ಟ ಮಗುವಿನ ತಾಯಿಯಾಗಿದ್ದಾರೆ. ಕುಟುಂಬದ ಆರ್ಥಿಕ ಪರಿಸ್ಥಿತಿ ಸಂಕಷ್ಟದಲ್ಲಿರುವ ಕಾರಣ ಚಿಕಿತ್ಸೆ ಮುಂದುವರಿಸಲು ದಾನಿಗಳ ಸಹಾಯ ಅತ್ಯಗತ್ಯವಾಗಿದೆ.
ದಿವ್ಯಾ ಅವರ ಆರೋಗ್ಯ ಸುಧಾರಣೆಗೆ ಅಗತ್ಯವಿರುವ ಚಿಕಿತ್ಸಾ ವೆಚ್ಚವನ್ನು ಭರಿಸಲು ಸಮಾಜದ ಸಹೃದಯರು, ಸಂಘ-ಸಂಸ್ಥೆಗಳು ಹಾಗೂ ದಾನಿಗಳು ತಮ್ಮಿಂದಾದ ಸಹಾಯವನ್ನು ನೀಡುವಂತೆ ಕುಟುಂಬಸ್ಥರು ಮನವಿ ಮಾಡಿದ್ದಾರೆ.
“ಒಂದು ವರ್ಷದ ಮಗುವಿನ ಭವಿಷ್ಯಕ್ಕಾಗಿ, ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ತಾಯಿಯ ಜೀವ ಉಳಿಸಲು ನಿಮ್ಮ ಸಣ್ಣ ನೆರವೂ ದೊಡ್ಡ ಆಶಾಕಿರಣವಾಗಬಹುದು” ಎಂದು ಕುಟುಂಬದವರು ಮನವಿ ಮಾಡಿದ್ದಾರೆ.
ನೆರವು ಕಳುಹಿಸಲು:
ಹೆಸರು: ದಿವ್ಯಾ
ಖಾತೆ ಸಂಖ್ಯೆ: 01382200086460
IFSC Code: CNRB0010138
Google Pay / PhonePe:
📞 9632492659
📞 8497865818

