ಸಂದೀಪ್ ಸುಂದರ್ ನೀರಲ್ಕೆರವರಿಂದ ಬಡಗಕಾರಂದೂರು ಶಾಲೆಗೆ ಕಂಪ್ಯೂಟರ್ ಟೇಬಲ್ ಗಳ ಕೊಡುಗೆ

0
41

ಬಡಗಕಾರಂದೂರು ಶಾಲಾ ಹಿರಿಯ ವಿದ್ಯಾರ್ಥಿಯೂ,ಮಾಜಿ ಎಸ್ ಡಿ ಎಂ ಸಿ ಸದಸ್ಯರೂ,ಟೀಂ ಅಭಯಹಸ್ತ ಚ್ಯಾರಿಟೇಬಲ್ ಸ್ಪೋರ್ಟ್ಸ್&ಕಲ್ಚರಲ್ ಕ್ಲಬ್ ಬೆಳ್ತಂಗಡಿ ಇದರ ಪ್ರಧಾನ ಸಂಚಾಲಕರಾದ ಸಂದೀಪ್ ಸುಂದರ್ ನೀರಲ್ಕೆ ಇವರು ಶಾಲೆಗೆ ಎರಡು ಕಂಪ್ಯೂಟರ್ ಟೇಬಲ್ ಗಳನ್ನು ಕೊಡುಗೆಯಾಗಿ ನೀಡಿದರು.

ಅವರ ಪತ್ನಿ ಚೇತನ ಸಂದೀಪ್ ಹಾಗೂ ಪುತ್ರಿ ಕು. ಶ್ರೀಮಾನ್ಯ ಅವರು ಟೇಬಲ್ ಗಳನ್ನು ಮುಖ್ಯ ಶಿಕ್ಷಕರು ಹಾಗೂ ಎಸ್ ಡಿ ಎಂ ಸಿ ಅಧ್ಯಕ್ಷರಿಗೆ ಹಸ್ತಾಂತರಿಸಿದರು.ಈ ಸಂದರ್ಭ ಶಾಲಾಭಿವೖದ್ಧಿ ಸಮಿತಿಯ ಅಧ್ಯಕ್ಷರಾದ ಶಶಿಕಾಂತ ನಾಯಕ್, ಸದಸ್ಯ ಆನಂದ ಪೂಜಾರಿ,ಹಿರಿಯ ವಿದ್ಯಾರ್ಥಿ ಉಮೇಶ್ ಸುವರ್ಣ ಹಾಗೂ ಚಂದ್ರಶೇಖರ್ ಮುಖ್ಯ ಶಿಕ್ಷಕಿ ಸುಜಾತ,ಶಿಕ್ಷಕಿ ಮಂಗಳಾ ಕೆ,ದೈಹಿಕ ಶಿಕ್ಷಣ ಶಿಕ್ಷಕ ಸುನಿಲ್ ಬಾಪಟ್ ಉಪಸ್ಥಿತರಿದ್ದರು.

ಅಧ್ಯಾಪಕ ವೃಂದ,ಮಕ್ಕಳು ಮತ್ತು ಪೋಷಕರ ಪರವಾಗಿ ಧನ್ಯವಾದಗಳನ್ನು ಅರ್ಪಿಸಲಾಯಿತು.