ಹೆಬ್ರಿ : ಕೆಲ್ ಟೆಕ್ ಎನರ್ಜೀಸ್ ಲಿಮಿಟೆಡ್ ಸಂಸ್ಥೆ ವರಂಗ ಇವರ ವತಿಯಿಂದ ಕೊಡಮಾಡಿರುವ ಪ್ರಾಜೆಕ್ಟರ್ ಅನ್ನು ಕೆಲ್ ಟೆಕ್ ನ ತಿರುಮಲ, ಶ್ರೀಶ ರಾವ್, ಶ್ರೇಯಸ್ ತುಂಡುಗುಡ್ಡೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಹಸ್ತಾಂತರಿಸಿದರು.
ಕಾರ್ಯಕ್ರಮದಲ್ಲಿ ಯಕ್ಷಗಾನ ಗುರುಗಳಾದ ಸುಬ್ರಮಣ್ಯ ಪ್ರಸಾದ್, ಮುಖ್ಯ ಶಿಕ್ಷಕಿ ಚಿತ್ರ, ಶಿಕ್ಷಕಿಯರಾದ ಪ್ರಮಿತ ಹಾಗೂ ಬಾಬಿ ಉಪಸ್ಥಿತರಿದ್ದರು.

