Thursday, April 24, 2025
HomeUncategorizedಕಾಸರಗೋಡು ಕನ್ನಡ ಗ್ರಾಮದಲ್ಲಿ ಡಾ. ಎಂ.ಜಿ.ಆರ್ ಅರಸ್ ಮೈಸೂರು ಸಿ.ಎಂ. ತಿಮ್ಮಯ್ಯ ಬೆಂಗಳೂರು ಎಲ್. ಎಸ್....

ಕಾಸರಗೋಡು ಕನ್ನಡ ಗ್ರಾಮದಲ್ಲಿ ಡಾ. ಎಂ.ಜಿ.ಆರ್ ಅರಸ್ ಮೈಸೂರು ಸಿ.ಎಂ. ತಿಮ್ಮಯ್ಯ ಬೆಂಗಳೂರು ಎಲ್. ಎಸ್. ಶಾಸ್ತ್ರಿ.ಬೆಳಗಾವಿ ಅವರಿಗೆ ಜೀವಮಾನ ಸಾಧನಾ ಪ್ರಶಸ್ತಿ – 2025 ಪ್ರದಾನ


ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ(ರಿ ),ಕನ್ನಡ ಗ್ರಾಮ ಕಾಸರಗೋಡು ಇದರ 35ನೇ ಸಂಸ್ಥಾಪನಾ ವರ್ಷಾಚರಣೆ ಹಾಗೂ ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ರಜತ ಮಹೋತ್ಸವ ಮತ್ತು ಕಾಸರಗೋಡು ಜಿಲ್ಲಾ 7 ನೇ ಚುಟುಕು ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭ – ಜೀವಮಾನ ಸಾಧನಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮೈಸೂರು ಚುಟುಕು ಸಾಹಿತ್ಯ ಪರಿಷತ್ ಕೇಂದ್ರ ಸಮಿತಿಯ ಸಂಸ್ಥಾಪಕ- ಪ್ರದಾನ ಸಂಚಾಲಕ ಡಾ. ಎಂ. ಜಿ. ಆರ್. ಅರಸ್ ಮೈಸೂರು, ವಿ. ಕೆ. ಎಂ. ಕಲಾವಿದರು (ರಿ ),ಬೆಂಗಳೂರು ಇದರ ಸಂಸ್ಥಾಪಕ – ಪ್ರಧಾನ ಕಾರ್ಯದರ್ಶಿ ಹಿರಿಯ ರಂಗಭೂಮಿ ಕಲಾವಿದ, ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಸದಸ್ಯ ಸಿ.ಎಂ. ತಿಮ್ಮಯ್ಯ ಬೆಂಗಳೂರು ಹಾಗೂ ಬೆಳಗಾವಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಹಿರಿಯ ಪತ್ರಕರ್ತ, ಬರಹಗಾರ,ಮಾಧ್ಯಮ – ಸಾಹಿತ್ಯ ಸಾಂಸ್ಕೃತಿಕ ರಾಯಬಾರಿ ಎಲ್. ಎಸ್.ಶಾಸ್ತ್ರಿ ಬೆಳಗಾವಿ ಅವರಿಗೆ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ ),ಕನ್ನಡ ಗ್ರಾಮ ಕಾಸರಗೋಡು ಇದರ “ಪ್ರತಿಷ್ಠಿತ ಜೀವಮಾನ ಸಾಧನಾ ಪ್ರಶಸ್ತಿ – 2025 “ನ್ನು ನೀಡಿ ಗೌರವಿಸಲಾಯಿತು.
ಕಾಸರಗೋಡು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಜೀವಮಾನ ಸಾಧನಾ ಪ್ರಶಸ್ತಿಯು – ಪ್ರಶಸ್ತಿ ಫಲಕ, ಪ್ರಶಸ್ತಿ ಪತ್ರ, ಸ್ಮರಣಿಕೆ, ರೇಷ್ಮೆ ಶಾಲು, ಹಾರ ಮತ್ತು ಮಧೂರು ಶ್ರೀ ಮದನಂತೇಶ್ವರ ಸಿದ್ಧಿ ವಿನಾಯಕ ದೇವರ ಭಾವಚಿತ್ರವನ್ನು ನೀಡಿ ಗುರು ಹಿರಿಯರ ಸಮ್ಮುಖದಲ್ಲಿ ಸಂಪ್ರದಾಯದಂತೆ ಅಭಿನಂದಿಸಲಾಯಿತು.
ಕಾಸರಗೋಡು ಕನ್ನಡ ಗ್ರಾಮದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆಯನ್ನು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ(ರಿ ), ಕಾಸರಗೋಡು, ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್, ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೇರಳ ರಾಜ್ಯ ಘಟಕದ ಅಧ್ಯಕ್ಷ ಶಿವರಾಮ ಕಾಸರಗೋಡು ವಹಿಸಿದ್ದರು. ಮುಖ್ಯ ಅತಿಥಿಯಾಗಿ ಕಾಸರಗೋಡು ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ, ಕಾಸರಗೋಡು ಜಿಲ್ಲಾ 7 ನೇ ಚುಟುಕು ಸಾಹಿತ್ಯ ಸಮ್ಮೇಳನಾಧ್ಯಕ್ಷ ಹರೀಶ ಸುಲಾಯ ಒಡ್ಡಂಬೆಟ್ಟು, ಡಾ.ಕೆ.ಸಿ.ಬಲ್ಲಾಳ್ ಬೆಂಗಳೂರು, ದಯಾಸಾಗರ ಚೌಟ ಮುಂಬಯಿ,ಅಶೋಕ ಜಿ. ಮಳಗಳಿ ಬೆಳಗಾವಿ, ಆನಂದ ಪುರಾಣಿಕ ಬೆಳಗಾವಿ, ಚಂದ್ರಶೇಖರ ನವಲಗುಂದ ಬೆಳಗಾವಿ, ಅಪ್ಪಾಸಾಹೇಬ ಅಲಿಬಾದಿ ಅಥಣಿ, ರವಿ ಎಸ್. ಸಿ.ಕೋಟಾರಗಸ್ತಿ ಬೆಳಗಾವಿ, ವಿಷ್ಣು ಗುಪ್ತ ಪುಣಚ,ವಿಟ್ಲ ಸಿ. ಎಚ್. ಸುರೇಶ ಚಂದ್ರಗಿರಿ, ಶ್ರೀಕೃಷ್ಣಯ್ಯ ಅನಂತಪುರ, ಡಾ ಸುರೇಶ ನೆಗಳಗುಳಿ, ಡಾ ರತ್ನ ಹಾಲಪ್ಪ ಗೌಡ, ಕೆ.ಜಗದೀಶ ಕೂಡ್ಲು, ಆನಂದ ರೈ ಅಡ್ಕಸ್ಥಳ, ರತ್ನಾಕರ ಎಸ್. ಓಡಂಗಲ್ಲು, ರಾಧಾಕೃಷ್ಣ. ಕೆ. ಉಳಿಯತಡ್ಕ, ಕಾಸರಗೋಡು ನಗರ ಸಭಾ ಕೌನ್ಸಿಲರ್ ಬಿ. ಶಾರದಾ, ಕೆ. ವರಪ್ರಸಾದ ಕೋಟೆಕಣಿ ಮಾಜಿ ಕೌನ್ಸಿಲರ್ ಶಂಕರ ಕೆ, ಕೆ ಗುರುಪ್ರಸಾದ್ ಕೋಟೆಕಣಿ, ಶ್ರೀಕಾಂತ ಕಾಸರಗೋಡು, ಕುಶಲ ಕುಮಾರ ಕೆ ಕನ್ನಡ ಗ್ರಾಮ,ವೇದಿಕೆಯಲ್ಲಿ ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular