“ಮಾನವೀಯ ಮೌಲ್ಯಗಳ ಆದರ್ಶ ಶಾಸಕ ಡಾ. ಎನ್ ಟಿ ಶ್ರೀನಿವಾಸ್: ಮುಂಡ್ರಗಿ ನಾಗರಾಜ ಪ್ರಶಂಸೆ”

0
21

ಎನ್ ಟಿ ಶ್ರೀನಿವಾಸ್ ಮಾನವೀಯ ಮೌಲ್ಯಗಳುಳ್ಳ ಶಾಸಕರಾಗಿದ್ದಾರೆ – ಮುಂಡ್ರಗಿ ನಾಗರಾಜ*-ವಿಜಯನಗರ ಜಿಲ್ಲೆ ಕೂಡ್ಲಿಗಿ : ಶಾಸಕ ಡಾ॥ ಎನ್ ಟಿ ಶ್ರೀನಿವಾಸ್ ರವರು , ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡಿರುವ ಆದರ್ಶ ವ್ಯಕ್ತಿತ್ವದ ಶಾಸಕರಾಗಿದ್ದಾರೆ ಎಂದು. ಡಾ ॥ ಬಾಬು ಜಗಜೀವನ್ ರಾಮ್ ಚರ್ಮ ಕೈಗಾರಿಕಾಭಿವೃದ್ಧಿ ನಿಗಮದ ಅಧ್ಯಕ್ಷರು , ಹಾಗೂ ದಲಿತ ಸಂಘರ್ಷ ಸಮಿತಿ ರಾಜ್ಯ ಮುಖಂಡರಾದ ಮುಂಡ್ರಗಿ ನಾಗರಾಜರವರು ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ತಾಲೂಕಿನ ಸಕಲಾಪುರದಹಟ್ಟಿ ಗ್ರಾಮದಲ್ಲಿ , ಕರ್ನಾಟಕ ದಲಿತ ಸಂಘರ್ಷ ಸಮಿತಿ ಗ್ರಾಮ ಶಾಖೆಯ ನಾಮಫಲಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಶಾಸಕರು ಸಹೃದಯವಂತರಾಗಿದ್ದಾರೆ , ಕರ್ಮನಿಷ್ಟರು , ಕರ್ಥವ್ಯ ನಿಷ್ಟರಾಗಿದ್ದಾರೆ , ಹಾಗೂ ರಾಜ್ಯಕಂಡ ಅಪರೂಪದ ಆದರ್ಶ ಶಾಸಕರಾಗಿದ್ದಾರೆ ಎಂದರು.
ಸಂಘಟನಕಾರರು ತುಳಿತಕ್ಕೊಳಗಾದ ಶೋಷಣೆಗೊಳಗಾದ , ಎಲ್ಲಾ ಸಮುದಾಯಗಳ ಧ್ವನಿಯಾಗಿ ಕರ್ಥವ್ಯ ನಿರ್ವಹಿಸಬೇಕಿದೆ. ಕೇವಲ ಒಂದು ಜಾತಿ ಧರ್ಮ ಪಂಥಕ್ಕೆ ಸಂಘಟನೆ ಸೀಮಿತವಲ್ಲ , ಸಂವಿಧಾನದ ಆಶಯಗಳನ್ನು ಈಡೇರಿಸುವ ನಿಟ್ಟಿನಲ್ಲಿ , ಪಕ್ಷಾತೀತವಾಗಿ , ಯಾವುದೇ ತಾರತಮ್ಯಗಳಿಲ್ಲದೇ ಸಂಘಟಿತರಾಗಿ ಹೋರಾಟಗಳನ್ನು ಮಾಡಬೇಕಿದೆ ಎಂದರು.
ಶಾಸಕ ಡಾ ॥ ಎನ್ ಟಿ ಶ್ರೀನಿವಾಸ್ ಸಂಘಟನೆ ನಾಮಫಲಕ ಉದ್ಘಾಟಿಸಿ ಮಾತನಾಡಿದರು.
ಮೊಳಕಾಲ್ಮೂರು ತಾಲೂಕಿನ ಸಿದ್ದಯ್ಯನಕೋಟೆ ಚಿತ್ತರಗಿ ವಿಜಯಶಾಂತೇಶ್ವರ ಶಾಖಾ ಮಠದ ಪೀಠಾಧ್ಯಕ್ಷರಾದ ಶ್ರೀಬಸವಲಿಂಗ ಸ್ವಾಮೀಜಿಯವರು ಸಾನಿಧ್ಯ ವಹಿಸಿ ಮಾತನಾಡಿದರು. DSS ವಿಜಯನಗರ ಜಿಲ್ಲಾ ಸಂಚಾಲಕ ಎಸ್.ದುರುಗೇಶ , ತಾಲೂಕು ಸಂಚಾಲಕ ಬಿ.ಟಿ.ಗುದ್ದಿ ಡಿ ಎಸ್ ದುರುಗೇಶ , ಕಂದಗಲ್ಲು ಕೆ.ಪರಶುರಾಮ , ತಾಲೂಕು ಸಂಚಾಲಕ ಬಡೇಲಡಕು ದುರಗೇಶ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಿಕ್ಷಕ ಕೆಂಚಮಲ್ಲನಹಳ್ಳಿ ಮಹಂತೇಶ ಪ್ರಾಸ್ತಾವಿಕ ಮಾತನಾಡಿದರು , ವಿಜಯನಗರ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಂಜುನಾಥ , ಡಿವೈಎಸ್ಪಿ ಮಲ್ಲೇಶ ದೊಡ್ಮನೆ , ಸಿಪಿಐ ಡಿ. ದುರುಗಪ್ಪ , ಪಿಎಸ್ಐ ಸಿದ್ದರಾನ ಬಿದರಾಣಿ ಹಾಗೂ ಗೀತಾಂಜಲಿ . ಮುಖಂಡರಾದ ಎಳನೀರು ಗಂಗಣ್ಣ , ಬಳ್ಳಾರಿ ಜಿಲ್ಲಾ DSS ಜಿಲ್ಲಾಬಸಂಚಾಲಕ ಗೋವರ್ಧನ , ನಟರಾಜಗೌಡ , ಡಿ.ಒ.ಮೊರಾರ್ಜಿ , ಹುಲಿಕೇರಿ ದುರುಗೇಶ , ಚಿತ್ರದುರ್ಗ ಗಂಗಾಧರ , ಸಕಲಾಪುರ ಗ್ರಾಮ ಘಟಕ ಅಧ್ಯಕ್ಷ ಯಲ್ಲಪ್ಪ, ಚೌಡಪ್ಪ , ಕಾನಾಮಡಗು ಪಕ್ಕೀರಪ್ಪ , ದುರುಗಪ್ಪ ಸೇರಿದಂತೆ DSS ಗ್ರಾಮ ಘಟಕದ ಅನೇಕ ಪದಾಧಿಕಾರಿಗಳು ಸದಸ್ಯರು. ಗ್ರಾಮದ ಹಿರಿಯರು , ಮಹಳೆಯರು , ಮಕ್ಕಳು , ವಿದ್ಯಾರ್ಥಿಗಳು , ರೈತರು ಕಾರ್ಮಿಕರು ಯುವಕ ಯುವತಿಯರು , ವಿವಿದ ಜನಪ್ರತಿನಿಧಿಗಳು , ಗಣ್ಯರು , ಹೋರಾಟಗಾರರು , ತಾಲೂಕಿನ ವಿವಿದ ಗ್ರಾಮ ಘಟಕಗಳ ಪದಾಧಿಕಾರಿಗಳು ಉಪಸ್ಥಿತಿರಿದ್ದರು.

LEAVE A REPLY

Please enter your comment!
Please enter your name here