ದುಬೈ: ಮಧ್ಯಪ್ರಾಚ್ಯದ ಹೆಮ್ಮೆಯ ಸಂಸ್ಥೆಯಾದ ಯುಎಇಯ ಯಕ್ಷಗಾನ ಅಭ್ಯಾಸ ಕೇಂದ್ರದ ದಶಮಾನೋತ್ಸವ ಸಂಭ್ರಮ ಮತ್ತು ದುಬಾಯಿ ಯಕ್ಷೋತ್ಸವ 2025ರ ಅಂಗವಾಗಿ ನಡೆಯಲಿರುವ ಅದ್ದೂರಿಯ ಯಕ್ಷಗಾನ ಸಂಬಂಧಿ ಕಾರ್ಯಕ್ರಮ, ಗಲ್ಫ್ ರಾಷ್ಟ್ರದಲ್ಲಿಯೇ ಪ್ರಥಮ ಬಾರಿಗೆ ನಡೆಯಲಿರುವ “ ಯಕ್ಷಗಾಯನ ಸೌರಭ ಮತ್ತು ಶಿವಾನಿ ಸಿಂಹವಾಹಿನಿ ಇದರ ಆಮಂತ್ರಣ ಪತ್ರ ಮತ್ತು ಪ್ರವೇಶಪತ್ರದ ಬಿಡುಗಡೆ ಸಮಾರಂಭ ಭಾನುವಾರ ಹೋಟೇಲ್ ಫಾರ್ಚೂನ್ ಪ್ಲಾಝದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆಯಿತು.
ಅದ್ದೂರಿಯ ಆಯೋಜನೆಯ ಈ ಕಾರ್ಯಕ್ರಮ ಜೂನ್ 29ರಂದು ದುಬಾಯಿ ಕರಮದ ಶೇಖ್ ರಶೀದ್ ಅಡಿಟೋರಿಯಂನಲ್ಲಿ (ಇಂಡಿಯನ್ ಸ್ಕೂಲ್ ಕರಮ- near ವೂದ್ ಮೆತಾ ಮೆಟ್ರೋ ಸ್ಟೇಶನ್ ) ನಡೆಯಲಿರುವ ಬಹು ನಿರೀಕ್ಷಿತ ಸಮಾರಂಭದ ಆಮಂತ್ರಣ ಪತ್ರ ಬಿಡುಗಡೆ ಮತ್ತು ಪ್ರವೇಶ ಪತ್ರ ಬಿಡುಗಡೆ ಕಾರ್ಯಕ್ರಮ ಪ್ರಾರ್ಥನೆ-ದೀಪಪ್ರಜ್ವಲನೆಯೊಂದಿಗೆ ಪ್ರಾರಂಭವಾಯಿತು.
ಕಾರ್ಯಕ್ರಮದಲ್ಲಿ ಅತಿಥಿಗಳನ್ನು ಸ್ವಾಗತಿಸಿದ ಯಕ್ಷಗಾನ ಅಭ್ಯಾಸ ಕೇಂದ್ರದ ಸಂಚಾಲಕರಾದ ದಿನೇಶ ಶೆಟ್ಟಿಯವರು ತಮ್ಮ ಪ್ರಾಸ್ತಾವಿಕ ಮಾತುಗಳಲ್ಲಿ ಯಕ್ಷ್ಗಗಾನ ಅಭ್ಯಾಸ ಕೇಂದ್ರ ನಡೆದು ಬಂದ ದಾರಿ, ಉದ್ದೇಶ, ಸಾಫಲ್ಯ ಕುರಿತು ಮಾತನಾಡಿ, ಪ್ರಸ್ತುತ ವರ್ಷದ ಅದ್ದೂರಿಯ ದಶಮಾನೋತ್ಸವ ಕಾರ್ಯಕ್ರಮ ಮತ್ತು ಯಕ್ಷಗಾನ ಶಿವಾನಿ ಸಿಂಹವಾಹಿನಿ ಯಶಸ್ಸಿಗೆ ಸರ್ವರ ಸಹಕಾರವನ್ನು ಬಯಸಿದರು. ಯಕ್ಷಧ್ರುವ ಪಟ್ಲ ಘಟಕ ಯುಎಇ ಇದರ ಸಹಭಾಗಿತ್ವದೊಂದಿಗೆ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಪಟ್ಲ ಟ್ರಸ್ಟ್ ಸ್ಥಾಪಕರಾದ ಸತೀಶ ಶೆಟ್ಟಿಯವರು ಸ್ವತಃ ತಮ್ಮ ಗಾನ ಸಾರಥ್ಯದ ಮೂಲಕ ಕಲೆಯೇರಿಸಲಿದ್ದಾರೆ ಎಂದು ತಿಳಿಸಿದರು.