EDUಕಾರುಣ್ಯ ದಿ. ಗುರುವಪ್ಪ ಬಾಳೆಪುಣಿ ದತ್ತಿನಿಧಿ ಹತ್ತಾಂತರ ಕಾರ್ಯಕ್ರಮ

0
10

ಮಂಗಳೂರು : EDUಕಾರುಣ್ಯ ಟ್ರಸ್ಟ್ ನ ದತ್ತಿನಿಧಿ ಹಸ್ತಾಂತರ ಕಾರ್ಯಕ್ರಮ ಪ್ರೆಸ್ ಕ್ಲಬ್ ನಲ್ಲಿ ಜೂನ್ 26ರಂದು ನಡೆಯಿತು. ನೇರ, ನಿಷ್ಠರ, ಮಾನವತಾವಾದಿ, ಗುರುವಪ್ಪ ಬಾಳೆಪುಣಿ ಸದಾ ಸ್ಮರಣೀಯರು. ಎಲ್ಲವನ್ನು ಅಳೆದು ತೂಗಿ ನಿರ್ಧರಿಸುವ ಕ್ರಮ ಎಲ್ಲರಿಗೂ ಆದರ್ಶಪ್ರಾಯ ಎಂದು ದತ್ತಿನಿಧಿಯನ್ನು ಹಸ್ತಾಂತರಿಸಿ ನರಿಂಗಾನ ಕಂಬಾಳೋತ್ಸವ ಸಮಿತಿ ಅಧ್ಯಕ್ಷ ಪ್ರಶಾಂತ್ ಕಾಜವ, ಉದ್ಯಮಿ ರಾಧಾಕೃಷ್ಣ ಉಮಿಯಾ, ಪ್ರೆಸ್ ಕ್ಲಬ್ ಅಧ್ಯಕ್ಷ ಪಿಬಿ ಹರೀಶ ರೈ, ದ ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿಎನ್, ದ ಕ ಜಿಲ್ಲಾ ವಾರ್ತಾಧಿಕಾರಿ ಖಾದರ್ ಶಾ, ನುಡಿದರು.

ವೇದಿಕೆಯಲ್ಲಿ ಕಾವೂರು ವ್ಯ.ಸೇ.ಸ. ಸಂಘದ ಅಧ್ಯಕ್ಷ ಲೋಕೇಶ್ ಭಂಡಾರಿ, ಉದ್ಯಮಿ ನಿರಂಜನ ಗಾಂಧಿನಗರ, ಹಾಜರಿದ್ದರು. EDUಕಾರುಣ್ಯ ಅಧ್ಯಕ್ಷ ಮೋಹನ್ ದಾಸ್, ಮರಕಡ ವಾಸ್ತವಿಕ ಮಾತನಾಡಿದರು. ಬಬಿತಾ ಸ್ವಾಗತಿಸಿದರು. ಅನ್ಸಾರ್ ಇನೋಳಿ ಕಾರ್ಯಕ್ರಮ ಸಂಯೋಜಿಸಿದ್ದರು.

LEAVE A REPLY

Please enter your comment!
Please enter your name here