ಶಿಕ್ಷಣ ಇಲಾಖೆ ನೃತ್ಯ ತಂಡ ಮತ್ತೊಮ್ಮೆ ರಾಜ್ಯ ಮಟ್ಟಕ್ಕೆ ಆಯ್ಕೆ

0
74

ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಆಶ್ರಯದಲ್ಲಿ ನಡೆದ ಜಿಲ್ಲಾಮಟ್ಟದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಶಿಕ್ಷಣ ಇಲಾಖೆಯ ನೃತ್ಯ ತಂಡವು ದಕ್ಷಿಣ ಕನ್ನಡ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದೆ.

ತಂಡದಲ್ಲಿ ಮಂಗಳೂರು ತಾಲೂಕಿನ ಕುವೆಂಪು ಶತಮಾನೋತ್ಸವ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರದೀಪ್, ಮೂಡುಬಿದಿರೆಯಿಂದ ಅನಿತಾ ಕೆ.ಪಿ.ಎಸ್. ಪ್ರೌಢಶಾಲೆ ಮಿಜಾರು, ನಾಗರತ್ನ ಶಿರೂರು ಕೆ.ಪಿ.ಎಸ್. ಮಿಜಾರು ಪ್ರಾಥಮಿಕ ವಿಭಾಗ , ಪ್ರಶಾಂತ್ ಎನ್. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಳಿಯೂರು, ಬಂಟ್ವಾಳ ತಾಲೂಕಿನ ರಾಜೇಶ್ ಕೆ. ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕೊಳಲ ಬಾಕಿಮಾರು, ರಾಮ ನಾಯ್ಕ ಶಿಕ್ಷಕರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೇಪು , ಮಂಗಳೂರು ತಾಲೂಕಿನ ರಮ್ಯ ಕೆ ಸ.ಹಿ ಪ್ರಾ.ಶಾಲೆ ಸದಾಶಿವ ನಗರ, ಪುತ್ತೂರು ತಾಲೂಕಿನ ರಮೇಶ್ ಶಿರ್ಲಾಲು ಸ ಹಿ ಪ್ರಾ ಶಾಲೆ ನೆಟ್ಟನಿಗೆ ಮುಡ್ನೂರು ಇವರು ನೃತ್ಯ ತಂಡದಲ್ಲಿ ಅದ್ಭುತವಾಗಿ ಪ್ರದರ್ಶನವನ್ನು ನೀಡಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

LEAVE A REPLY

Please enter your comment!
Please enter your name here