ಬಿಲ್ಲವ ಸಮಾಜ ಸೇವಾ ಸಂಘ(ರಿ.)ಕಲ್ಲಡ್ಕ ವಲಯ ಇದರ ಅಮ್ಟೂರು ಗ್ರಾಮ ಸಮಿತಿಯ ಪದಾಧಿಕಾರಿಗಳ ಆಯ್ಕೆ : ಅಧ್ಯಕ್ಷರಾಗಿ ಸತೀಶ್ ಪೂಜಾರಿ ಕೇಶವನಗರ

0
80

ಬಂಟ್ವಾಳ: ಬಿಲ್ಲವ ಸಮಾಜ ಸೇವಾ ಸಂಘ(ರಿ.)ಕಲ್ಲಡ್ಕ ವಲಯ ಇದರ ಅಮ್ಟೂರು ಗ್ರಾಮ ಸಮಿತಿಯ ಪದಾಧಿಕಾರಿಗಳ ಆಯ್ಕೆ ಸಭೆಯು ಕಲ್ಲಡ್ಕ ಬಿಲ್ಲವ ಸಮಾಜ ಸೇವಾ ಸಂಘ ದ ಅಧ್ಯಕ್ಷರಾದ ಕೃಷ್ಣಪ್ಪ ಪೂಜಾರಿ ಕೇಪುಳಕೋಡಿ ರವರ ಅಧ್ಯಕ್ಷತೆಯಲ್ಲಿ ನಾಗೇಶ್ ಕರಿಂಗಾನ ರವರ ಮನೆ ಆವರಣದಲ್ಲಿ ಜರಗಿತು.

ಗೌರವಧ್ಯಕ್ಷರು :ಮಹಾಬಲ ಸಾಲಿಯಾನ್ ಮುಳಿಕೊಡಂಗೆ, ಅಧ್ಯಕ್ಷರಾಗಿ :ಸತೀಶ್ ಪೂಜಾರಿ ಕೇಶವನಗರ ಉಪಾಧ್ಯಕ್ಷರುಗಳಾಗಿ :ಮೋಹನದಾಸ್ ಅಂತರಗುತ್ತು, ವಸಂತಕುಮಾರ್ ಕರಿಂಗಾನ,
ಕಾರ್ಯದರ್ಶಿಯಾಗಿ :ಯತೀಶ್ ಕುಮಾರ್ ಮುಳಿಕೊಡಂಗೆ, ಜತೆಕಾರ್ಯದರ್ಶಿಗಳಾಗಿ ಜನಾರ್ಧನ ಕರಿಂಗಾನ ಮತ್ತು ಹರೀಶ್ ಕೇಶವನಗರ ಕೆದ್ಲ, ಸಂಘಟನಾ ಕಾರ್ಯದರ್ಶಿಗಳಾಗಿ ಗೋಪಾಲಕೃಷ್ಣ ಪೂವಳ
ಶರತ್ ಕರಿಂಗಾನ, ಕಿರಣ್ ಕರಿಂಗಾನ, ಕೊರಗಪ್ಪ ಮಣ್ಣಗುರಿ, ಕೋಶಾಧಿಕಾರಿಯಾಗಿ :ಕುಶಲ ಕರಿಂಗಾನ. ಗೌರವ ಸಲಹೆಗಾರರಾಗಿ :ಗೋಪಾಲ ಪೂಜಾರಿ ಪೊಯ್ಯೇಕಂಡ ರವರನ್ನು ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಬಿಲ್ಲವ ಸಮಾಜ ಸೇವಾ ಸಂಘ(ರಿ.) ಕಲ್ಲಡ್ಕ ವಲಯ , ನಿಯೋಜಿತ ಅಧ್ಯಕ್ಷ ಚಂದ್ರಶೇಖರ್ ಸಾಲಿಯಾನ್, ಪ್ರಧಾನ ಕಾರ್ಯದರ್ಶಿ ರಮೇಶ್ ಪೂಜಾರಿ ಹೊಸಕಟ್ಟ, ನಿಯೋಜಿತ ಕೋಶಾಧಿಕಾರಿ ಕಿಶೋರ್ ಕಟ್ಟೆಮಾರ್, ಸಂಘಟನಾ ಕಾರ್ಯದರ್ಶಿ ಶ್ರೀಧರ ಪೂಜಾರಿ ಅಮ್ಟೂರು, ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here