ಮುಲ್ಕಿ : ಅಸೋಸಿಯೇಷನ್ ಆಫ್ ಸಿವಿಲ್ ಎಂಜಿನಿಯರ್ಸ್ ಮುಲ್ಕಿ (ACEM) ವತಿಯಿಂದ ಎಂಜಿನಿಯರ್ಸ್ ಡೇ ಆಚರಣಾ ಕಾರ್ಯಕ್ರಮ ಸೆಪ್ಟೆಂಬರ್ 30ರಂದು ಸಂಜೆ 6.30ಕ್ಕೆ ಕೊಲ್ನಾಡ್‌ನ ಮುಲ್ಕಿ ಸುಂದರ್ ರಾಮ್ ಶೆಟ್ಟಿ ಕನ್ವೆನ್ಶನ್ ಸೆಂಟರ್‌ನಲ್ಲಿ ನಡೆಯಲಿದೆ.
ಕಾರ್ಯಕ್ರಮಕ್ಕೆ ಶ್ರೀದೇವಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಎಂ.ಬಿ.ಎ. ನಿರ್ದೇಶಕಿ ಡಾ. ಶ್ವೇತಾ ಪೈ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ACCE(I) ರಾಷ್ಟ್ರೀಯ ಅಧ್ಯಕ್ಷ ER. ರಾಜೇಂದ್ರ ಕಲ್ಬಾವಿ ಅವರು ಮುಖ್ಯ ಭಾಷಣಕಾರರಾಗಿ ಉಪಸ್ಥಿತರಿರುವರು.
ಕರ್ನಾಟಕ ಕೌನ್ಸಿಲ್ ಫಾರ್ ಪ್ರೊಫೆಷನಲ್ ಸಿವಿಲ್ ಎಂಜಿನಿಯರ್ಸ್ ಸದಸ್ಯ ಎರ್. ಜಗದೀಶ್ ಪ್ರಸಾದ್ ಅವರನ್ನು ಸನ್ಮಾನಿಸಲಾಗುವುದು. ಅಲ್ಟ್ರಾಟೆಕ್ ಸಿಮೆಂಟ್ ಲಿಮಿಟೆಡ್‌ನ ಮಂಗಳೂರು ಡಿಪೋ ಟೆರಿಟರಿ ಸೇಲ್ಸ್ ಹೆಡ್ ಮೋಹನ್ ಎಸ್. ಗೌರವ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ACEM ಪದಾಧಿಕಾರಿಗಳು ಹಾಗೂ ಸದಸ್ಯರು ಕಾರ್ಯಕ್ರಮಕ್ಕೆ ಸರ್ವರನ್ನೂ ಆತ್ಮೀಯವಾಗಿ ಆಹ್ವಾನಿಸಿದ್ದಾರೆ.

