ತೆಲಂಗಾಣ ಸಚಿವರು ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ

0
60

ಶ್ರೀಕೃಷ್ಣನ ದರ್ಶನ ಪಡೆದ ಅದ್ಲೂರಿ ಲಕ್ಷ್ಮಣ್ ಕುಮಾರ್

ಉಡುಪಿ: ತೆಲಂಗಾಣ ಸರ್ಕಾರದ ಪರಿಶಿಷ್ಟ ಜಾತಿಗಳ ಅಭಿವೃದ್ಧಿ, ಬುಡಕಟ್ಟು ಕಲ್ಯಾಣ, ವಿಕಲಚೇತನರು, ಹಿರಿಯ ನಾಗರಿಕರು ಹಾಗೂ ಅಲ್ಪಸಂಖ್ಯಾತರ ಸಬಲೀಕರಣ ಸಚಿವ ಅದ್ಲೂರಿ ಲಕ್ಷ್ಮಣ್ ಕುಮಾರ್ ಅವರು ಉಡುಪಿಯ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ಶ್ರೀಕೃಷ್ಣನ ದರ್ಶನ ಪಡೆದರು.

ಶ್ರೀಕೃಷ್ಣ ಮಠಕ್ಕೆ ಆಗಮಿಸಿದ ಸಚಿವರನ್ನು ಮಠದ ವತಿಯಿಂದ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಶ್ರೀಮಠದ ದಿವಾನರಾದ ಉದಯ ಕುಮಾರ್ ಸರಳತ್ತಾಯ, ಪಾರುಪತ್ಯೆಗಾರರಾದ ಶ್ರೀಶ ಭಟ್ ಕಡೇಕಾರು ಹಾಗೂ ವೆಂಕಟರಮಣ ಮುಚ್ಚಿಂತ್ತಾಯ ಉಪಸ್ಥಿತರಿದ್ದರು.

ಸಚಿವರು ಶ್ರೀಕೃಷ್ಣನ ದರ್ಶನ ಪಡೆದು ಮಠದ ಧಾರ್ಮಿಕ ಪರಂಪರೆ ಹಾಗೂ ವಿಶೇಷತೆಗಳ ಕುರಿತು ಮಾಹಿತಿ ಪಡೆದರು.