ಉಡುಪಿ : ಉಡುಪಿ ತಾಲೂಕಿನ-ಮಲ್ಪೆ ವಲಯದ ಖಂಡಿಗೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪರಿಸರ ಜಾಗೃತಿ ಮಾಹಿತಿ ಶಿಬಿರ ಹಾಗೂ ಗಿಡ ನಾಟಿ ಕಾರ್ಯಕ್ರಮ ಹಮ್ಮಿಕೊಂಡಿದ್ದು ಈ ಕಾರ್ಯಕ್ರಮದ ಅಧ್ಯಕ್ಷತೆ ಶಾಲಾ ಸಂಚಾಲಕರಾದ ರವೀಂದ್ರ ನಾಥ ರಾವ್ ಮುಖ್ಯ ಅತಿಥಿಗಳಾದ ವಲಯ ಅರಣ್ಯ ಅಧಿಕಾರಿಗಳಾದ ಅನುಷಾ ಭಟ್ ತಾಲೂಕಿನ ಯೋಜನಾಧಿಕಾರಿಗಳಾದ ಸುರೇಂದ್ರ ನಾಯ್ಕ , ಕಾರ್ಯಕ್ರಮವನ್ನು ಗಿಡಗಳಿಗೆ ನೀರುಣಿಸುವ ಮೂಲಕ ಕಾರ್ಯ ಕ್ರಮವನ್ನು ಉದ್ಘಾಟಿಸಲಾಯಿತು.
ಕಾರ್ಯ ಕ್ರಮ ಉದ್ಘಾಟಿಸಿ ತಾಲೂಕು ಯೋಜನಾಧಿಕಾರಿಗಳು ಮಾತನಾಡಿ ಪರಿಸರ ರಕ್ಷಣೆ ನಮ್ಮ ಹೊಣೆ ಎಂದು ತಿಳಿಸಿ ಗಿಡಗಳನ್ನೂ ನೆಡುವುದರ ಜೊತೆಗೆ ಪಾಲನೆ ಪೋಷಣೆ ಮಾಡುವುದು ನಮ್ಮೇಲರ ಕರ್ತವ್ಯ ವಾಗಿದೆ ಎಂದು ತಿಳಿಸಿದರು. ವಲಯ ಅರಣ್ಯ ಅಧಿಕಾರಿಗಳು ಮಾತನಾಡಿ ಪರಿಸರ ರಕ್ಷಣೆ ಹಾಗೂ ಸ್ವಚ್ಛತೆ ಪ್ಲಾಸ್ಟಿಕ್ ನಿಷೇಧ ಮಾಡುವ ಕುರಿತು ಮಾಹಿತಿ ನೀಡಿದರು.
ಶಾಲೆಯ ಸಂಚಾಲಕರಾದ ರವೀಂದ್ರ ನಾಥ ಮಾತನಾಡಿ ಯೋಜನೆ ವತಿಯಿಂದ ಕಾರ್ಯ ಕ್ರಮ ಮಾಡಿದಕ್ಕೆ ಧನ್ಯವಾದಗಳು ತಿಳಿಸಿದರು. ಕೃಷಿಮೇಲ್ವಿಚಾರಕ ರಾಮು ಮಾತನಾಡಿ, ಪ್ರತಿ ವರ್ಷ ಹುಟ್ಟು ಹಬ್ಬಕ್ಕೆ ಕೇಕ್ ಕಟ್ಟ ಮಾಡಿ ಆಚರಣೆ ಮಾಡುವ ಬದಲು ಗಿಡಗಳನ್ನು ನೆಟ್ಟು ಹುಟ್ಟು ಹಬ್ಬ ಆಚರಣೆ ಮಾಡಿ ಪರಿಸರ ಬೆಳಸಿ ಎಂದರು.
ಮಾಹಿತಿ ನೀಡಿದರು ಶಾಲಾ ಮಕ್ಕಳಿಗೆ ಚಿತ್ರಕಲೆ ಪ್ರಬಂಧ ಸ್ಪರ್ಧೆ ಆಯೋಜನೆ ಮಾಡಿ ಬಹುಮಾನ ವಿತರಣೆ ಮಾಡಲಾಯಿತು ಕಾರ್ಯಕ್ರಮದಲ್ಲಿ ಶಾಲೆಯ ಎಲ್ಲಾ ಸಹ ಶಿಕ್ಷಕರು ವಲಯದ ಮೇಲ್ವಿಚಾರಕರಾದ ಸುಜಾತ, ಕೆಮ್ಮಣ್ಣು ಒಕ್ಕೂಟದ ಅಧ್ಯಕ್ಷರಾದ ಮಾಲತಿ ರಮೇಶ್,ಸೇವಾಪ್ರತಿನಿಧಿ , ಶಾಲಿನಿ, ಶೌರ್ಯ ಘಟದ ಎಲ್ಲಾ ಸದಸ್ಯರು,ಶಾಲೆಯ ಮಕ್ಕಳು ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿರೂಪಣೆ ಸುಜಾತಾ ಸ್ವಾಗತ ಶಿಕ್ಷಕಿ ಮಧುಮತಿ, ಸುಜಾತಾ ವಂದಿಸಿದರು.

