Saturday, June 14, 2025
HomeUncategorizedಬೆಂಗೂರಿನಿಂದ ಭಾರತಕ್ಕೆ: ‍ ರ‍್ಯಾಪಿಡೊದಿಂದ ಪ್ರತಿನಿತ್ಯ 4 ಮಿಲಿಯನ್ ರೈಡ್ ಗಳ ಸಾಧನೆ

ಬೆಂಗೂರಿನಿಂದ ಭಾರತಕ್ಕೆ: ‍ ರ‍್ಯಾಪಿಡೊದಿಂದ ಪ್ರತಿನಿತ್ಯ 4 ಮಿಲಿಯನ್ ರೈಡ್ ಗಳ ಸಾಧನೆ

ರಾಷ್ಟ್ರೀಯ: ಭಾರತದ ಅತ್ಯಂತ ದೊಡ್ಡ ರೈಡ್- ಶೇರಿಂಗ್ ಆಪ್ ರ‍್ಯಾಪಿಡೊ ಮೇ 24, 2025ರಂದು ಒಂದೇ ದಿನದಲ್ಲಿ 4 ಮಿಲಿಯನ್ ರೈಡ್ ಗಳ ಗಮನಾರ್ಹ ಸಾಧನೆ ಮುಟ್ಟಿದೆ. ಈ ಸಾಧನೆಯು ದೇಶಾದ್ಯಂತ ಮೊಬಿಲಿಟಿ ಮತ್ತು ಜೀವನೋಪಾಯ ಸೃಷ್ಟಿಗೆ ರ‍್ಯಾಪಿಡೊ ನೀಡುತ್ತಿರುವ ಕೊಡುಗೆಗಳನ್ನು ಎತ್ತಿ ತೋರಿಸುತ್ತಿದ್ದು ಆರ್ಡರ್ ಗಳ ದೃಷ್ಟಿಯಿಂದ ಭಾರತದ ಅತ್ಯಂತ ದೊಡ್ಡ ಗ್ರಾಹಕ ಆಪ್ ಎನಿಸಿದೆ ಮತ್ತು ದೇಶದ ಅತ್ಯಂತ ದೊಡ್ಡ ಉದ್ಯೋಗಸೃಷ್ಟಿಕರ್ತನಾಗಿದೆ.
ದೇಶಾದ್ಯಂತ 250 ನಗರಗಳಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ರ‍್ಯಾಪಿಡೊ ಸತತವಾಗಿ ಭಾರತದ ಮೊಬಿಲಿಟಿ ಸವಾಲುಗಳನ್ನು ಎದುರಿಸಲು ಶ್ರಮಿಸುತ್ತಿದ್ದು ಅದಕ್ಕಾಗಿ ವಿಸ್ತರಿಸಬಲ್ಲ ಮತ್ತು ಆವಿಷ್ಕಾರಕ ಪರಿಹಾರಗಳನ್ನು ಒದಗಿಸುತ್ತಿದೆ. ತನ್ನ ಸಬ್ ಸ್ಕ್ರಿಪ್ಷನ್-ಆಸ್-ಎ-ಸರ್ವೀಸ್ (ಸಾಸ್) ಮಾದರಿಯಲ್ಲಿ ನೀಡುತ್ತಿದ್ದು ಈ ಪ್ಲಾಟ್ ಫಾರಂ 9 ಮಿಲಿಯನ್ ಜೀವನೋಪಾಯದ ಅವಕಾಶಗಳನ್ನು ಸೃಷ್ಟಿಸಿದ್ದು ತನ್ನ ಕ್ಯಾಪ್ಟನ್ ಗಳ ಶೇ.30-40ರಷ್ಟು ಆದಾಯ ಹೆಚ್ಚಿಸಲು ನೆರವಾಗಿದೆ. ಈ ಪ್ರಯತ್ನಗಳು ಸಾರಿಗೆ ಸುಧಾರಣೆಗೆ ಮತ್ತು ಸಾಮಾಜಿಕ ಆರ್ಥಿಕ ಅಭಿವೃದ್ಧಿಗೆ ರ‍್ಯಾಪಿಡೊದ ಬದ್ಧತೆಯನ್ನು ಬಿಂಬಿಸುತ್ತವೆ.
ರ‍್ಯಾಪಿಡೊ ಸಹ-ಸಂಸ್ಥಾಪಕ ಪವನ್ ಗುಂಟುಪಲ್ಲಿ, “ಇದು ರ‍್ಯಾಪಿಡೊದಲ್ಲಿ ನಮಗೆಲ್ಲರಿಗೂ ಅಪಾರ ಹೆಮ್ಮೆ ಮತ್ತು ಆನಂದ ತರುವ ಕ್ಷಣವಾಗಿದೆ. ನಮ್ಮ ಪ್ರಯಾಣವು ಅಸಾಧಾರಣವಾಗಿದೆ ಮತ್ತು ಇದು ನಮ್ಮ ತಂಡದ ಅವಿರತ ಬದ್ಧತೆ ಮತ್ತು ಕಠಿಣ ಪರಿಶ್ರಮವು ನಮ್ಮನ್ನು ಇಲ್ಲಿಗೆ ತಂದಿದೆ. ಬೆಂಗಳೂರಿನ ನಮ್ಮ ಬೇರುಗಳಿಂದ ನಾವು ಕರ್ನಾಟಕದ ಸ್ಥಳೀಯವಾಗಿ ಬೆಳೆದ ಬ್ರಾಂಡ್ ಆಗಿ ಬೆಳೆದಿರುವುದನ್ನು ಕಾಣುವುದು ಅಪಾರ ಸಂತೋಷ ನೀಡುತ್ತದೆ. ನಮ್ಮ ಮೂಲದ ಬಗ್ಗೆ ನಾವು ಹೆಮ್ಮೆ ಪಡುತ್ತಿರುವಂತೆ ನಾವು ದೇಶಾದ್ಯಂತ ಸಮುದಾಯಗಳಿಗೆ ಸೇವೆ ಒದಗಿಸಲು ಬದ್ಧರಾಗಿದ್ದೇವೆ ಮತ್ತು ಒಟ್ಟಿಗೆ ಹಲವು ಮೈಲಿಗಲ್ಲುಗಳನ್ನು ಸಾಧಿಸುವ ನಿರೀಕ್ಷೆಯಲ್ಲಿದ್ದೇವೆ” ಎಂದರು.
ರ‍್ಯಾಪಿಡೊ ತನ್ನ ಈ ಸಾಧನೆಯನ್ನು ಸಂಭ್ರಮಿಸುತ್ತಿರುವಂತೆ ಇದು ಸಾರಿಗೆಯಲ್ಲಿ ಲಭ್ಯತೆ, ಕೈಗೆಟುವಿಕೆ ಮತ್ತು ವಿಶ್ವಾಸಾರ್ಹತೆ ಹೆಚ್ಚಿಸಲು ಬದ್ಧವಾಗಿದೆ. ರ‍್ಯಾಪಿಡೊ ಭಾರತದಲ್ಲಿ ಮೊಬಿಲಿಟಿಯ ಭವಿಷ್ಯವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದು ಗ್ರಾಹಕರು ಹಾಗೂ ಕ್ಯಾಪ್ಟನ್ ಗಳ ಸಬಲೀಕರಣಕ್ಕೆ ಶ್ರಮಿಸುತ್ತಿದೆ.

RELATED ARTICLES
- Advertisment -
Google search engine

Most Popular