ಮಿತಿ ಮೀರಿದ ಎಥೆನಾಲ್ ಮಿಶ್ರಣ: ಮೋದಿ ಸರ್ಕಾರದಿಂದ ಪೆಟ್ರೋಲ್ ಚೋರಿ – ಡಾ. ಆನಂದ ಕುಮಾರ್

0
5

ಬೆಂಗಳೂರು : ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್.ಡಿ.ಎ ಸರ್ಕಾರ ತೈಲೋತ್ಪನ್ನಗಳಲ್ಲಿ ಅವ್ಯಾಹತವಾಗಿ ಲೂಟಿಗಿಳಿದಿದ್ದು, ಇದೀಗ ದೇಶಾದ್ಯಂತ ಅಹೋರಾತ್ರಿ ಪೆಟ್ರೋಲ್ ಚೋರಿ ನಡೆಸುತ್ತಿದೆ ಎಂದು ಎಐಸಿಸಿ ಎಸ್.ಸಿ ವಿಭಾಗದ ರಾಷ್ಟ್ರೀಯ ಸಂಯೋಜಕರು ಹಾಗೂ ಮಹಾರಾಷ್ಟ್ರ ಉಸ್ತುವಾರಿ ಡಾ. ಆನಂದ ಕುಮಾರ್ ಆರೋಪಿಸಿದ್ದಾರೆ.
ಪೆಟ್ರೋಲ್ನಲ್ಲಿ ಶೇ.31.2ರಷ್ಟು ಎಥನಾಲ್ ಬೆರೆಸಿ ಜನರನ್ನು ವಂಚಿಸುತ್ತಿರುವುದನ್ನು ರಾಜ್ಯ ಸರ್ಕಾರ ದಾಖಲೆ ಸಮೇತ ಬೆಳಕಿಗೆ ತಂದಿದ್ದು, ದುಡಿದು ತಿನ್ನುವವರು ಪ್ರತಿಯೊಂದು ಹನಿ ಇಂಧನಕ್ಕೂ ಲೆಕ್ಕ ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಪೆಟ್ರೋಲ್ ಚೋರಿ ಮೂಲಕ ದೇಶದ ಪ್ರತಿಯೊಂದು ಕುಟುಂಬದ ಜೇಬಿಗೆ ಕನ್ನ ಹಾಕಿದೆ. ಲಕ್ಷಾಂತರ ಕೋಟಿ ರೂ ಬೆವರಿನ ಹಣವನ್ನು ತೈಲ ಕಂಪೆನಿಗಳ ಲೂಟಿಗೆ ಅವಕಾಶ ಮಾಡಿಕೊಟ್ಟಿದೆ. ಜನ ಸಾಮಾನ್ಯರ ಹಿತ ರಕ್ಷಣೆಯನ್ನು ಬಲಿಕೊಟ್ಟು ರಕ್ತ ಹೀರುವ ಕೆಲಸ ಮಾಡುತ್ತಿದೆ. ಎಂದು ಹೇಳಿದ್ದಾರೆ.

ಪೆಟ್ರೋಲ್ನಲ್ಲಿ ಮಿತಿ ಮೀರಿ ಎಥೆನಾಲ್ ಮಿಶ್ರಣದ ಗಂಭೀರ ಆರೋಪಗಳು ದೇಶಾದ್ಯಂತ ಆತಂಕ ಸೃಷ್ಟಿಸಿವೆ. ಎಥೆನಾಲ್ ಗೆ ಹೊಂದಿಕೆಯಾಗದ ಹಳೆಯ ವಾಹನಗಳ ಮಾಲೀಕರನ್ನು ಸರ್ಕಾರ ಮತ್ತಷ್ಟು ಆತಂಕ್ಕೆ ದೂಡಿದೆ. ಮೈಲೈಜ್ ತಗ್ಗಿ, ನಿರ್ವಹಣಾ ವೆಚ್ಚ ಅಧಿಕವಾಗಿರುವ ಸಮಸ್ಯೆಗಳಿಗೆ ವೈಜ್ಞಾನಿಕ ಹಾಗೂ ಪಾರದರ್ಶಕ ಉತ್ತರ ಬೇಕು ನೀಡದೇ ಸರ್ಕಾರ ತನ್ನ ಜವಾಬ್ದಾರಿತನದಿಂದ ಮುನುಚಿಕೊಳ್ಳಬಾರದು ಎಂದು ಡಾ. ಆನಂದ ಕುಮಾರ್ ಹೇಳಿದ್ದಾರೆ.

ಎಥೆನಾಲ್ ನೀತಿಯನ್ನು ಜಾರಿಗೆ ತರುವಾಗ ಗ್ರಾಹಕರ ಅಭಿಪ್ರಾಯಕ್ಕೆ ಮನ್ನಣೆ ನೀಡಿಲ್ಲ. ಪ್ರತಿ ಪೆಟ್ರೋಲ್ ಬಂಕ್ನ ಮಾದರಿಗಳನ್ನು ಸಂಗ್ರಹಿಸಿ, ಪರೀಕ್ಷಾ ವರದಿಗಳನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು. ನಿಯಮ ಉಲ್ಲಂಘಿಸಿರುವ ತೈಲ ಸಂಸ್ಥೆಗಳ ವಿರುದ್ಧ ಕಠಿಣ ಕ್ರಿಮಿನಲ್ ಕ್ರಮ ಕೈಗೊಳ್ಳಬೇಕು. ಇದು ರಾಜಕೀಯ ಪ್ರತಿಷ್ಠೆಯ ಪ್ರಶ್ನೆಯಲ್ಲ. ಇದರಡಿ ಕೋಟ್ಯಂತರ ವಾಹನ ಸವಾರರ ಹಿತಾಸಕ್ತಿ ಅಡಗಿದೆ. ಡೀಸೆಲ್ನಲ್ಲೂ ಇದೇ ಪ್ರಮಾಣದಲ್ಲಿ ಎಥೆನಾಲ್ ಮಿಶ್ರಣ ಮಾಡಲಾಗುತ್ತಿದೆ ಎಂಬುದಕ್ಕೆ ದೃಢವಾದ ಆಧಾರವಿಲ್ಲ. ಸಂಸತ್ತಿಗೆ ನೀಡಿದ ಉತ್ತರದಲ್ಲಿ ಡೀಸೆಲ್ನಲ್ಲಿ ಎಥೆನಾಲ್ ಮಿಶ್ರಣ ಇನ್ನೂ ಪ್ರಾಯೋಗಿಕ ಹಂತದಲ್ಲಿದೆ ಎಂದಿತ್ತು. ಡೀಸೆಲ್ನ ಭವಿಷ್ಯದ ನೀತಿ ಏನು? ಎಥೆನಾಲ್ ಉತ್ಪಾದನೆಯಿಂದ ಕಬ್ಬು ಮತ್ತು ಮೆಕ್ಕೆಜೋಳ ಬೆಳೆಗಾರರಿಗೆ ಆದಾಯ ದೊರೆತು ತೈಲ ಆಮದು ಅವಲಂಬನೆ ಕಡಿಮೆಯಾಗುತ್ತದೆ ಎಂಬುದು ಸರ್ಕಾರದ ವಾದ. ರೈತರು ಮತ್ತು ವಾಹನ ಸವಾರರ ಹಿತಾಸಕ್ತಿ ಪರಸ್ಪರ ವಿರುದ್ಧವಾಗಬೇಕಿಲ್ಲ. ಒಂದು ವರ್ಗದ ಹಿತಾಸಕ್ತಿಯ ಹೆಸರಿನಲ್ಲಿ ಮತ್ತೊಂದು ವರ್ಗದ ಮೇಲೆ ಅನ್ಯಾಯದ ಹೊರೆ ಬೀಳಬಾರದು ಎಂದು ಡಾ. ಆನಂದ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

ಎಥೆನಾಲ್ ಖರೀದಿ, ಉತ್ಪಾದನೆ, ಬೆಲೆ ನಿಗದಿ ಮತ್ತು ತೈಲ ಕಂಪನಿಗಳ ಲಾಭದ ಬಗ್ಗೆ ಸಂಪೂರ್ಣ ಲೆಕ್ಕಪತ್ರದ ವಿವರಗಳನ್ನು ಸರ್ಕಾರ ಬಹಿರಂಗಪಡಿಸಬೇಕು. ಪೆಟ್ರೋಲ್ನಲ್ಲಿ ಎಥೆನಾಲ್ ಮಿಶ್ರಣದ ಪ್ರಮಾಣವನ್ನು ಖಚಿತಪಡಿಸಿಕೊಳ್ಳುವ ಜವಾಬ್ದಾರಿ ಯಾರದ್ದು? ಈ ಬಗ್ಗೆ ಸ್ವತಂತ್ರ ತನಿಖೆಗೆ ಕೇಂದ್ರ ಸರ್ಕಾರ ಸಿದ್ಧವಿದೆಯೇ? ಎಥೆನಾಲ್ ಮಿಶ್ರಿತ ಪೆಟ್ರೋಲ್ನಿಂದ ವಾಹನಗಳಿಗೆ ಹಾನಿ ಅಥವಾ ಹೆಚ್ಚುವರಿ ನಿರ್ವಹಣಾ ವೆಚ್ಚ ಉಂಟಾದರೆ ಗ್ರಾಹಕರಿಗೆ ಪರಿಹಾರ ನೀಡುವ ವ್ಯವಸ್ಥೆ ಏನು? ಗ್ರಾಹಕರು ಖರೀದಿಸುವ ಪೆಟ್ರೋಲ್ನಲ್ಲಿ ಎಥೆನಾಲ್ ಪ್ರಮಾಣವನ್ನು ಬಿಲ್ನಲ್ಲಿ ಸ್ಪಷ್ಟವಾಗಿ ನಮೂದಿಸಿ ತೈಲ ಮಾರಾಟದ ಲಾಭ ನಷ್ಟದ ಬಗ್ಗೆ ಶ್ವೇತಪತ್ರ ಹೊರಡಿಸಬೇಕು ಎಂದು ಡಾ. ಆನಂದ ಕುಮಾರ್ ಆಗ್ರಹಿಸಿದ್ದಾರೆ.

ಪೆಟ್ರೋಲ್ ಬೆಲೆ ನಿಗದಿ, ಗುಣಮಟ್ಟದ ಬಗ್ಗೆ ಪಾರದರ್ಶಕತೆ ಇರಬೇಕು. ಪಾವತಿಸಿದ ಹಣಕ್ಕೆ ಗುಣಮಟ್ಟದ ಇಂಧನವನ್ನು ಮಾತ್ರ ಜನ ಕೇಳುತ್ತಿದ್ದಾರೆ. ಎಥೆನಾಲ್ ನೀತಿಯಿಂದ ವಾಹನ ಸವಾರರಿಗೆ ತೊಂದರೆಯಾಗುತ್ತಿರುವುದನ್ನು ಒಪ್ಪಿಕೊಂಡು ಪರಿಹಾರ ಒದಗಿಸಬೇಕು. ಜನರ ಜೇಬಿನಿಂದ ಸಂಗ್ರಹವಾಗುವ ಪ್ರತಿಯೊಂದು ರೂಪಾಯಿಗೂ ಸರ್ಕಾರ ಲೆಕ್ಕ ಕೊಡಬೇಕು. ಪೆಟ್ರೋಲ್ ಬಂಕ್ನಲ್ಲಿ ಗ್ರಾಹಕ ಮೋಸಹೋಗಬಾರದು. ಇಂಧನದ ಹೆಸರಿನಲ್ಲಿ ಯಾವುದೇ ಅಕ್ರಮ ನಡೆದಿದ್ದರೆ ಅದಕ್ಕೆ ಹೊಣೆಗಾರರುಉತ್ತರಿಸಲೇಬೇಕು. ಇದು ಪ್ರತಿಯೊಬ್ಬ ವಾಹನ ಸವಾರನ ಹಕ್ಕು, ಜನರ ಹಣ ಮತ್ತು ವಾಹನಗಳ ಸುರಕ್ಷತೆಯನ್ನು ಖಚಿತಪಡಿಸಬೇಕು ಎಂದು ಹೇಳಿದ್ದಾರೆ.