ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ʻಯುರೇಕಾ- 2026ʼ

0
12

ಶಿಬಿರದ ಎರಡನೇ ದಿನ – ʻDigital Defenders of Cyberspaceʼ ಹಾಗೂʻನಗಬೇಕು ಆಗಾಗಬದುಕಿನೊಳಗೆ- Crafting a Life Purposeʼʼ ಕಾರ್ಯಾಗಾರ

ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಲ್ಪಟ್ಟಿರುವ ʻಯುರೇಕಾ– 2026ʼ ರ ವ್ಯಕ್ತಿತ್ವ ವಿಕಸನ ಶಿಬಿರದ ಎರಡನೇ ದಿನವು ಮೂರು ಅವಧಿಗಳಲ್ಲಿ ನಡೆಯಿತು. ಪೂರ್ವಾಹ್ನದ ಮೊದಲ ಅವಧಿಯ ಸಂಪನ್ಮೂಲ ವ್ಯಕ್ತಿಗಳಾಗಿ ವಿವೇಕಾನಂದ ತಾಂತ್ರಿಕ ಮಹಾವಿದ್ಯಾಲಯ, ಪುತ್ತೂರು ಇಲ್ಲಿಯ AIML ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಅಜಯ್ ಶಾಸ್ತ್ರಿ ಇವರು ಆಗಮಿಸಿ, ವಿದ್ಯಾರ್ಥಿಗಳಿಗೆ ಸೈಬರ್ ಅಪರಾಧಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ʻDigital Defenders of Cyberspaceʼ ಎಂಬ ಶೀರ್ಷಿಕೆಯಡಿಯಲ್ಲಿ ಕಾರ್ಯಾಗಾರನಡೆಸಿಕೊಟ್ಟರು.

ವಿಷಯದ ಕುರಿತಾಗಿ ವಿದ್ಯಾರ್ಥಿಗಳ ಜೊತೆ ಸಂವಹನ ನಡೆಸಿದ ಅವರು, ಡಿಜಿಟಲ್ ಪ್ರಪಂಚದಲ್ಲಿ ನಾವು ಹೇಗೆ ಮೋಸ ಹೋಗುತ್ತಿದ್ದೇವೆ? ನಮ್ಮ ವೈಯಕ್ತಿಕ ಮಾಹಿತಿಗಳು ಹೇಗೆ ಸೋರಿಕೆಯಾಗುತ್ತಿವೆ? ಕೃತಕ ಬುದ್ಧಿಮತ್ತೆ ಇಲ್ಲಿ ಹೇಗೆ ಕಾರ್ಯವೆಸಗುತ್ತವೆ? ಈ ಮೊದಲಾದ ವಿಷಯಗಳ ಕುರಿತು ಉಪಯುಕ್ತ ಮಾಹಿತಿ ನೀಡುವುದರ ಜೊತೆಗೆ ಸಾಮಾಜಿಕ ಜಾಲತಾಣದ ಬಳಕೆಯ ಸಂದರ್ಭಗಳಲ್ಲಿ ವಹಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಅರಿವು ಮೂಡಿಸಿದರು. ಬಳಿಕ, ಎರಡನೇ ಅವಧಿಯಲ್ಲಿ ಭೌತಶಾಸ್ತ್ರ ಹಾಗೂ ರಸಾಯನ ಶಾಸ್ತ್ರ ವಿಷಯಗಳ ಪ್ರಾಯೋಗಿಕ ಪ್ರಾತ್ಯಕ್ಷಿಕೆಯನ್ನು ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ಉಪನ್ಯಾಸಕ ವೃಂದದವರು ನಡೆಸಿಕೊಟ್ಟರು.

ಅಪರಾಹ್ನ ನಂತರದ ಅವಧಿಯನ್ನು ಸಂಗೀತ ನಿರ್ದೇಶಕರು ಹಾಗೂ ಕರ್ನಾಟಕ ರಾಜ್ಯೋತ್ಸವ ಜಿಲ್ಲಾ ಪ್ರಶಸ್ತಿ ಪುರಸ್ಕೃತ, ಪ್ರಸ್ತುತ ಸೈಂಟ್ ಜಾರ್ಜ್ ಪದವಿಪೂರ್ವ ಕಾಲೇಜು, ನೆಲ್ಯಾಡಿ ಇಲ್ಲಿಯ ಇತಿಹಾಸ ಉಪನ್ಯಾಸಕರಾದ ವಿಶ್ವನಾಥ ಶೆಟ್ಟಿ ಹಾಗೂ ಪುತ್ರಿಯರಾದ ಸಾಯಿಧೃತಿ ಶೆಟ್ಟಿ, ಸಾಯಿಧಾತ್ರಿ ಶೆಟ್ಟಿ ಇವರ ಸಹಕಾರದೊಂದಿಗೆ ʻನಗಬೇಕು ಆಗಾಗಬದುಕಿನೊಳಗೆ- Crafting a Life Purposeʼ ಎಂಬ ಶೀರ್ಷಿಕೆಯಡಿ ಯಲ್ಲಿ ಶಿಬಿರಾರ್ಥಿಗಳಿಗೆ ಜೀವನ ಕೌಶಲ್ಯ ಹಾಗೂ ಸೃಜನಾತ್ಮಕ ಚಿಂತನೆಗಳ ಅಗತ್ಯತೆಯನ್ನುವಿವರಿಸಿದರು.

ತಮ್ಮಹಾಡುಗಾರಿಕೆ ಹಾಗೂ ವಿವಿಧ ವಿನೋದಮಯ ಚಟುವಟಿಕೆಗಳ ಮೂಲಕ ಬದುಕಿನಲ್ಲಿ ಸಕಾರಾತ್ಮಕ ದೃಷ್ಟಿಕೋನವನ್ನು ಮೂಡಿಸಿದರು. ಕಾಲೇಜಿನ ಉಪನ್ಯಾಸಕ ಹಾಗೂ ಉಪನ್ಯಾಸಕೇತರ ವೃಂದದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here