ಮಂಗಳೂರು : ಕೊಂಕಣಿ ವಾಚನ ಸಂಘ – ವಿಶೇಷಾಂಕ

0
36

ಮಂಗಳೂರು : ಇಲ್ಲಿಯ ಸುಜೀರ್ ಸಿ. ವಿ. ನಾಯಕ್ ಹಾಲಿನಲ್ಲಿ ಕಳೆದ ಒಂದು ವರ್ಷದಿಂದಕೊAಕಣಿ ವಾಚನ ಸಂಘ ಕಾರ್ಯಾಚರಿಸುತಿದ್ದು ಪ್ರತಿ ಬುಧವಾರ ಆಸಕ್ತ ಕೊಂಕಣಿ ಭಾಷಾ ಪ್ರೇಮಿಗಳು ಕೊಂಕಣಿ ಸಾಹಿತ್ಯದ ವಾಚನ ಮಾಡುತಿದ್ದಾರೆ. ಈ ಬುಧÀವಾರದಂದು ಈ ವಾಚನ ಸತ್ರದ ವಿಶೇಷಾಂಕ ನೆರವೇರಿತು.

ಜಿ.ಎಸ್.ಬಿ ಸೇವಾ ಸಂಘದಆಶ್ರಯದಲ್ಲಿನಡೆದ ಈ ಕಾರ್ಯಕ್ರಮದಲ್ಲಿ ಸಂಘದ ಸದಸ್ಯರಿಗೆಕೊಂಕಣಿಕಥೆ ಬರೆಯುವುದು, ತಾನುಕಂಡ ಪ್ರೇಕ್ಷಣೀಯ ಸ್ಥಳದ ಬಗ್ಗೆ ವಿವರಿಸುವುದು ಹೀಗೆ ಹಲವು ಸ್ಪರ್ಧೆಗಳು ನಡೆದು ಬಹುಮಾನಗಳನ್ನು ಹಂಚಲಾಯಿತು. ಸಂಘದಅಧ್ಯಕ್ಷಡಾ| ಕಸ್ತೂರಿ ಮೋಹನ ಪೈ ಅವರುತನ್ನ 75ನೇ ಹುಟ್ಟುಹಬ್ಬದ ಸಲುವಾಗಿ ಆಕರ್ಷಕ ಬಹುಮಾನಗಳನ್ನು ಪ್ರಾಯೋಜಿಸಿದ್ದರು.ಕುಂಬ್ಳೆ ನರಸಿಂಹ ಪ್ರಭು ಸ್ವಾಗತಿಸಿದರು, ಎಂ. ಆರ್. ಕಾಮತಕಾರ್ಯಕ್ರಮ ನಿರ್ವಹಿಸಿದರು.

ಶಾಂಭವಿ ಪ್ರಭುವಂದಿಸಿದರು.ಕೊಂಕಣಿ ಲಿಖಿತಕಥಾ ಸ್ಪರ್ಧೆಯಲ್ಲಿ ವಿದ್ಯಾ ಪೈ(ಪ್ರಥಮ), ಸುಚಿತ್ರಾ ಶೆಣೈ (ದ್ವಿತೀಯ) ಹಾಗೂ ವೆಂಕಟೇಶ ಬಾಳಿಗಾ (ತೃತೀಯ), ಸ್ಥಳದಲ್ಲಿಯೇ ಕಥೆ ಹೇಳುವ ಸ್ಪರ್ಧೆಯಲ್ಲಿರಾಧಿಕಾ ಪೈ, ಪ್ರೇಕ್ಷಣೀಯ ಸ್ಥಳಗಳನ್ನು ವಿವರಿಸುವುದರಲ್ಲಿಡಾ. ರಮೇಶ ಪೈ ಬಹುಮಾನ ಗಳಿಸಿದರು. ಉಷಾ ಮೋಹನ ಪೈ ಬಹುಮಾನಗಳನ್ನು ವಿತರಿಸಿದರು. ಬಿ. ಆರ್. ಶೆಣೈ, ಕೆ. ಸಿ. ಪ್ರಭು, ಎಂ. ಎಸ್. ಪ್ರಭು, ಗೋವಿಂದರಾಯ ಪ್ರಭು, ಗೀತಾ ಸಿ. ಕಿಣಿ, ಮಿನಾಕ್ಷಿ ಪೈ, ಪ್ರಭಾ ಭಟ್, ಸುವರ್ಣಿ ಪಡಿಯಾರ್, ಮೋಹನದಾಸ ಪೈ, ಶ್ರೀಲತಾ ಕಾಮತ, ಅಶೋಕ ನಾಯಕಹಾಗೂ ಇತರರು ಉಪಸ್ಥಿತರಿದ್ದರು.

ಕೊಂಕಣಿ ಸಾಹಿತ್ಯ ವಾಚನ ಮಾಡಲಿಚ್ಛಿಸುವವರು ಸಂಪರ್ಕಿಸಬಹುದು. ದೂರವಾಣಿ 8095270777

LEAVE A REPLY

Please enter your comment!
Please enter your name here