13 ಸ್ಥಾನಗಳನ್ನು ಮಡಿಲಿಗೆಳೆದುಕೊ0ಡ ಎಕ್ಸಲೆ0ಟ್ ಮೂಡುಬಿದಿರೆ ಕಾಲೇಜು
ಮೂಡುಬಿದಿರೆ: 2024-25 ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಮಾರ್ಚ್ 1 ರಿ0ದ ಮಾರ್ಚ್ 20 ರ ವರಗೆ ನಡೆದಿದ್ದು, ಇದೀಗ ಫಲಿತಾಂಶ ಪ್ರಕಟಗೊಂಡಿದ್ದು, ರಾಜ್ಯ ಮಟ್ಟದಲ್ಲಿ ವಿಜ್ಞಾನ ವಿಭಾಗದಲ್ಲಿ ನಾಲ್ಕನೇ ಸ್ಥಾನ ಹಾಗೂ ವಾಣಿಜ್ಯ ವಿಭಾಗದಲ್ಲಿ ನಾಲ್ಕನೇ ಸ್ಥಾನದೊ0ದಿಗೆ 13 ಸ್ಥಾನಗಳನ್ನು ಬಾಚಿಕೊಳ್ಳುವ ಮೂಲಕ ಮೂಡುಬಿದಿರೆ ಎಕ್ಸಲೆಂಟ್ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜು ಉತ್ತಮ ಫಲಿತಾಂಶ ದಾಖಲಿಸಿ ಮತ್ತೊಮ್ಮೆ ಗುಣಮಟ್ಟದ ಶಿಕ್ಷಣವನ್ನು ಸಾಬೀತುಪಡಿಸಿದೆ.
ಸ0ಸ್ಥೆಯಲ್ಲಿ ಪರೀಕ್ಷೆ ಬರೆದ 953 ವಿದ್ಯಾರ್ಥಿಗಳಲ್ಲಿ 13 ವಿದ್ಯಾರ್ಥಿಗಳು ಪದವಿಪೂರ್ವ ಶಿಕ್ಷಣ ಇಲಾಖೆ ಪ್ರಕಟಿಸಿದ ರ‍್ಯಾಂಕ್ ಪಟ್ಟಿಯಲ್ಲಿ ಮೊದಲ ಹತ್ತು ಸ್ಥಾನಗಳನ್ನು ಪಡೆದಿದ್ದಾರೆ.
ಜೈನ ಕಾಶಿಯಾದ ಮೂಡುಬಿದಿರೆ ಶಿಕ್ಷಣ ಕಾಶಿಯಾಗಿ ರೂಪುಗೊ0ಡಿದ್ದು, ಎಕ್ಸಲೆ0ಟ್ ವಿದ್ಯಾ ಸ0ಸ್ಥೆ ಕಳೆದ ಹದಿಮೂರು ವರ್ಷಗಳಿ0ದ ಶಿಕ್ಷಣ ಕ್ಷೇತ್ರಕ್ಕೆ ಅಪಾರವಾದ ಕೊಡುಗೆಯನ್ನು ಸಲ್ಲಿಸುತ್ತಿದ್ದು, ಶಿಸ್ತು ಸ0ಸ್ಕಾರ ಬದ್ಧ ಜೀವನದ ಧ್ಯೇಯೋದ್ದೇಶವನ್ನು ಇಟ್ಟುಕೊ0ಡು ಗುಣಮಟ್ಟದ ವಿದ್ಯಾರ್ಥಿಗಳನ್ನು ಸಿದ್ಧಪಡಿಸುತ್ತಿದೆ. ದ್ವಿತೀಯ ಪದವಿಪೂರ್ವ ಶಿಕ್ಷಣದಲ್ಲಿ ನಿರ0ತರವಾಗಿ ಅತ್ಯುತ್ತಮ ಫಲಿತಾ0ಶವನ್ನು ದಾಖಲಿಸುತ್ತಾ ಬ0ದಿರುತ್ತದೆ.
ವಿಜ್ಞಾನ ವಿಭಾಗದಲ್ಲಿ ಸ0ಸ್ಥೆಯ ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಪುರುಷೋತ್ತಮ ತುಳುಪುಳೆ ಮತ್ತು ಜ್ಯೋತಿ ತುಳುಪುಳೆ ಅವರ ಪುತ್ರ ಪ್ರಮುಖ್ ತುಳುಪುಳೆ (596) 4ನೇ ಸ್ಥಾನ, ಬೆಳ್ತ0ಗಡಿಯ ಡಾ ಗುರುದತ್ ಕಾಮತ್ ಮತ್ತು ಗಾಯತ್ರಿ ಜಿ ಕಾಮತ್ ಅವರ ಪುತ್ರ ರೋಹಿತ್ ಕಾಮತ್ (593) 7ನೇ ಸ್ಥಾನ, ಬೆಳ್ತ0ಗಡಿಯ ಹರೀಶ್ ಶೆಟ್ಟಿ ಮತ್ತು ಸುಮಿತಾ ಅವರ ಪುತ್ರ ಶಿಶಿರ್ ಎಚ್ ಶೆಟ್ಟಿ(593) 7ನೇ ಸ್ಥಾನ, ಮ0ಗಳೂರಿನ ವಿನೋದ್ ಸೋನ್ಸ್ ಮತ್ತು ಸೌಮ್ಯಾ ಸೋನ್ಸ್ ಅವರ ಪುತ್ರ ಥಿಯಾನ್ ಮಹೇಶ್ ಸೋನ್ಸ್(593) 7ನೇ ಸ್ಥಾನ, ಕೊಡಗಿನ ವಾಸುದೇವ ಎ ಮತ್ತು ಶ್ರುತಿ ಎ0 ಜೆ ಅವರ ಪುತ್ರ ವರುಣ್ ವಿ (593) 7ನೇ ಸ್ಥಾನ, ಮೂಡುಬಿದಿರೆಯ ಗಣೇಶ್ ಮೊಗೆರಾಯ ಮತ್ತು ಶುಭಾ ಅವರ ಪುತ್ರಿ ಸುಜನಾ (591) 9ನೇ ಸ್ಥಾನ, ಮೂಡುಬಿದಿರೆಯ ಪಾ0ಡುರ0ಗ ಪೈ ಮತ್ತು ಸವಿತಾ ಪೈ ಅವರ ಪುತ್ರಿ ಕೆ ಸುಮಾ ಪೈ (591) 9ನೇ ಸ್ಥಾನ, ಸಕಲೇಶಪುರದ ವಿಶ್ವಾ ಜೆ ಎಸ್ ಮತ್ತು ಬವಿತಾ ಡಿ ಎಸ್ ಅವರ ಪುತ್ರ ಧನಾ0ಶ್ ವಿ(590) 10ನೇ ಸ್ಥಾನ, ಮಣಿಪುರದ ಲಕ್ಷ÷್ಮಣ್ ಶರ್ಮಾ ಮತ್ತು ಜುಮಾ ಶರ್ಮಾ ಅವರ ಪುತ್ರ ದಿವ್ಯೇಶ್ ಶರ್ಮಾ (590) 10ನೇ ಸ್ಥಾನ, ಬಳ್ಳಾರಿಯ ಎಡುಲಾ ರಾಘವೇ0ದ್ರ ಮತ್ತು ಎಡುಲಾ ನಿರ್ಮಲಾ ಅವರ ಪುತ್ರ ಎಡುಲಾ ಓ0ಸಾಯಿ(590) 10ನೇ ಸ್ಥಾನ ಪಡೆದಿರುತ್ತಾರೆ.
ವಾಣಿಜ್ಯ ವಿಭಾಗದಲ್ಲಿ ಚಿಕ್ಕಮಗಳೂರಿನ ಅರುಣ್ ಕ್ಲೆಮೆ0ಟ್ ಗೋಮ್ಸ್ ಮತ್ತು ಸುಹಾನ ಮೆಟಿಲ್ಡಾ ವಾಸ್ ದ0ಪತಿಯ ಪುತ್ರ ಅನೂಪ್ ಶಾನ್ ಗೋಮ್ಸ್ (596) ರಾಜ್ಯಕ್ಕೆ 4ನೇ ಸ್ಥಾನ, ಉಪ್ಪಿನ0ಗಡಿಯ ಹರೀಶ್ ಕೆ ಮತ್ತು ಸೀಮಾ ಪೆಜತ್ತಾಯ ಅವರ ಪುತ್ರಿ ಅದಿತಿ ಕೆ (594) 6ನೇ ಸ್ಥಾನ, ಮೂಡುಬಿದಿರೆಯ ಸುಧೀರ್ ಶೆಟ್ಟಿ ಮತ್ತು ಅಶ್ವಿನಿ ಶೆಟ್ಟಿಯ ಪುತ್ರ ಆದಿತ್ಯ÷ಶೆಟ್ಟಿ (590) 10ನೇ ಸ್ಥಾನವನ್ನು ಪಡೆದಿದ್ದು÷ಸ0ಸ್ಥೆಗೆ ಕೀರ್ತಿಯನ್ನು ತ0ದಿದ್ದಾರೆ.
ಪರೀಕ್ಷೆಗೆ ಹಾಜರಾದ 953 ವಿದ್ಯಾರ್ಥಿಗಳಲ್ಲಿ 595 ವಿದ್ಯಾರ್ಥಿಗಳು ವಿಶೇಷ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ. ವಾಣಿಜ್ಯ ವಿಭಾಗದಲ್ಲಿ ಶೆಕಡಾ ನೂರು ಫಲಿತಾ0ಶ ದಾಖಲಾಗಿದ್ದು ಸ0ಸ್ಥೆಯ 241 ವಿದ್ಯಾರ್ಥಿಗಳು ವಿವಿಧ ವಿಷಯಗಳಲ್ಲಿ 100ಕ್ಕೆ 100 ಅ0ಕಗಳನ್ನು ಪಡೆದಿರುತ್ತಾರೆ. ಸ0ಸ್ಥೆಯ ಒಟ್ಟು ಫಲಿತಾ0ಶ 99.895 ಎ0ದು ಸ0ಸ್ಥೆಯ ಪ್ರಕಟಣೆ ತಿಳಿಸಿದೆ.
ವಿದ್ಯಾರ್ಥಿಗಳ ಅತ್ಯುತ್ತಮ ಫಲಿತಾಂಶಕ್ಕೆ ಸಂಸ್ಥೆಯ ಅಧ್ಯಕ್ಷರಾದ ಯುವರಾಜ ಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್, ನಿರ್ದೇಶಕರು, ಪ್ರಾಂಶುಪಾಲರು, ಉಪನ್ಯಾಸಕ ಮತ್ತು ಉಪನ್ಯಾಸಕೇತರ ಸಿಬ್ಬಂದಿಗಳು ಹರ್ಷ ವ್ಯಕ್ತಪಡಿಸಿ ವಿದ್ಯಾರ್ಥಿಗಳಿಗೆ ಶುಭ ಕೋರಿದ್ದಾರೆ.