ಉಡುಪಿ ನಿಟ್ಟೂರಿನ ಸೈಲಸ್ ಪದವಿ ಪೂರ್ವ ಕಾಲೇಜು ತನ್ನ ಅಸ್ತಿತ್ವದ ಪ್ರಥಮ ವರ್ಷದಲ್ಲೇ ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ದಾಖಲಿಸಿದೆ.
ನಜ್ವಾ ಸನ 576 ಅಂಕಗಳನ್ನು ಗಳಿಸಿ ವಿಜ್ಞಾನ ವಿಭಾಗದಲ್ಲಿ ಪ್ರಥಮ ಸ್ಥಾನಿ ಯಾಗಿದ್ದಾರೆ.
ಈತನ್ ಮಾರ್ವಿನ್ 562 ಹಾಗೂ ಪ್ರಿಯಾ ಎಸ್ 552 ಅಂಕಗಳನ್ನು ಗಳಿಸಿ ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಸ್ಥಾನ ಗಳಿಸಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಸಹಾನ ಬಾನು 530ಅಂಕಗಳನ್ನು ಗಳಿಸಿ ಪ್ರಥಮ ಸ್ಥಾನಿಯಾಗಿದ್ದಾರೆ.
ಸಾಧಕ ವಿದ್ಯಾರ್ಥಿಗಳನ್ನು ಹಾಗೂ ಉಪನ್ಯಾಸಕ ವರ್ಗದವರನ್ನುಸಂಸ್ಥೆಯ ಆಡಳಿತ ಮಂಡಳಿ ಅಭಿನಂದಿಸಿದೆ.