ಭಾರತ್ ಬ್ಯಾಂಕ್ ಪುತ್ತೂರು ಶಾಖೆಯಲ್ಲಿ ಭಾಸ್ಕರ್ ಬಾಬು ಬಂಗೇರ (ಸರಪಾಡಿ) ಅವರಿಗೆ ಬೀಳ್ಕೊಡುಗೆ ಸಮಾರಂಭ

0
14

ಪುತ್ತೂರು : ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕು ಭಾರತ್ ಬ್ಯಾಂಕ್ ಶಾಖೆಯಲ್ಲಿ ಬೀಳ್ಕೊಡುಗೆ ಸಮಾರಂಭ ವಿಜೃಂಭಣೆಯಿಂದ ನೆರವೇರಿತು. ಭಾಸ್ಕರ್ ಬಂಗೇರ ಕಳೆದ 01,05,1996 ರಿಂದ ಮುಂಬೈ ಮಹಾನಗರದ ಬಿಲ್ಲವರ ಅಸೋಸಿಯೇಷನ್ ಆಯೋಜಿಸಿದ ಭಾರತ್ ಬ್ಯಾಂಕ್ ಉದ್ಯೋಗಿಯಾಗಿ ಸುಮಾರು ಮೂರು ದಶಕ ಅವಧಿಯಲ್ಲಿ ಮುಂಬೈಯ ಮಹಾರಾಷ್ಟ್ರ, ಗುಜರಾತ್ ಹಾಗು ಕರ್ನಾಟಕದ ಬೆಂಗಳೂರು ಹೀಗೆ ಬೇರೆ ಬೇರೆ ರಾಜ್ಯಗಳ ಶಾಖೆಗಳಲ್ಲಿ ಸೇವೆ ಮಾಡಿದ ಅನುಭವ, ನಂತರ ದಕ್ಸಿಣ ಕನ್ನಡ ಜಿಲ್ಲೆಯ ಮೂಡಬಿದ್ರಿ, ಹಂಪನಕಟ್ಟೆ, ಕಂಕನಾಡಿ ಕೂಡಿದಂತೆ 18 ಶಾಖೆಗಳಲ್ಲಿ , ಆ ಸಂದರ್ಭದಲ್ಲಿ ಹಲವು ಅಡೆ ತಡೆ ಗಳು ಬಂದರು ತನ್ನ ನಿಷ್ಠೆ ಹಾಗು ಪ್ರಾಮಾಣಿಕ ಸೇವೆಯೊಂದಿಗೆ ಅರೋಗ್ಯಕರ ಸೇವೆ ಸಲ್ಲಿಸಿದ ಶ್ರೇಯಸ್ಸು ಭಾಸ್ಕರ್ ರವರದು.

ಯಾವ ಶಾಖೆಯಲ್ಲಿ ಕಾರ್ಯ ಮಾಡಿದರು ಅಲ್ಲಿನ ಗ್ರಾಹಕರಿಗೆ ಸರಿಯಾಗಿ ಸ್ಪಂದಿಸುವಲ್ಲಿ ಯಶಸ್ಸು ಕಂಡು ಗ್ರಾಹಕ ಹಾಗು ಹಿರಿಯ ಸಿಬ್ಬಂದಿ ವರ್ಗ ದವರ ಪ್ರೀತಿಗೆ ಪಾತ್ರರಾಗಿ ಸೇವೆ ಮಾಡುವ ಮನೋಭಾವನೆ ಸರಪಾಡಿಯವರದ್ದು ಇಂದು 30-06-2026 ನೇ ಮಂಗಳವಾರ ಪುತ್ತೂರು ಭಾರತ್ ಬ್ಯಾಂಕ್ ಶಾಖೆಯಲ್ಲಿ ಸೇವೆಯ ನಿವೃತ್ತಿ ಕಾರ್ಯಕ್ರಮ ಪುತ್ತೂರು ಶಾಖೆಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಶಾಖೆ ಗಳ ವಿಭಾಗದ ಪ್ರಮುಖರಾದ ಉದಯ ಸಾಲಿಯಾನ್, ಶೇಖರ್ ಯು. ಪೂಜಾರಿ,ಪುತ್ತೂರು ಬ್ಯಾಂಕಿನ ಶಾಖಾ ಪ್ರಮುಖರಾದ ಸುಶಾಂತ್ ಡಿ. ಪೂಜಾರಿ, ಉಪ ಶಾಖಾ ಪ್ರಭಂದಕಿ ಯಾದ ಕುಮಾರಿ, ಸ್ವಾತಿ ಜಿ. ಸಾಲಿಯಾನ್, ಸಿಬ್ಬಂದಿಗಳಾದ ಸ್ಮಿತಾ ಸಂಜಿತ್ ಪೂಜಾರಿ, ಆರತಿ ಯಸ್ ಪೂಜಾರಿ, ಶ್ರುತಿ ಅಮರ್, ರಾಕೇಶ್ ಕೆ. ಸಾಲಿಯಾನ್, ಸಂದೀಪ್ ವಿ. ಅಮೀನ್ ದೇವೇಂದ್ರ ಶೆಟ್ಟಿ, ಚಿತ್ರವತಿ ಕುಲಾಲ್, ಉಪಸ್ಥಿತರಿದ್ದರು ಕಾರ್ಯಕ್ರಮ ಯಶಸ್ಸು ಆಗುವಲ್ಲಿ ಸಹಕರಿಸಿದರು.

ಮೂವತ್ತು ವರ್ಷ ಸೇವಾ ನಿಮರ್ಥಿ ಆಗುವ ಭಾಸ್ಕರ್ ಬಂಗೇರ ದಂಪತಿಗಳಿಗೆ ಗೌರವದ ಸನ್ಮಾನ ಮಾಡಲಾಯಿತು. ಸಂದರ್ಭಚಿತ ವಾಗಿ ಶಾಖಾ ಪ್ರಭಂದಕರು,ಉಪ ಪ್ರಭಂದಕರು,ಉದಯ ಸಾಲಿಯಾನ್, ಶೇಖರ್ ಯು. ಪೂಜಾರಿ, ಅರ್ಚಕರು ಹರೀಶ್ ಶಾಂತಿ, ವಿಠ್ಠಲ್ ರೈ ಪುತ್ತೂರು HDFC ಅಧಿಕಾರಿ ಇವರುಗಳು ಮಾತನಾಡಿದರು.

ಭಾಸ್ಕರ್ ಸರಪಾಡಿ ತನ್ನ ವೃತ್ತಿ ಜೀವನ ಅನುಭವವನ್ನು ಏಳುಬೀಳುಗಳನ್ನು ಮನೋಜ್ಞವಾಗಿ ತಿಳಿಸಿದರು. ಅವರ ನಿವೃತ್ತ ಜೀವನಕ್ಕೆ ಶುಭ ಹಾರೈಸಿದರು.
ಸ್ವಾತಿ ಸಾಲಿಯಾನ್ ನಿರೂಪಣೆ ಮಾಡಿದರು, ಸ್ಮಿತಾ ಸುಜಿತ್ ವಂದನಾರ್ಪಣೆ ಮಾಡಿದರು.

LEAVE A REPLY

Please enter your comment!
Please enter your name here