ಪಡು-ಮೂಡಕೋಣಾಜೆ ಗ್ರಾಮದಲ್ಲಿ ಕಿಸಾನ್ ಜಾಗೃತಿ ಹಾಗೂ ಗ್ರಾಮ ಸಭಾವೇಶ

0
158

ತುಳುನಾಡು: ಜಿಲ್ಲೆಯ ಮೂಡುಬಿದಿರೆ ತಾಲೂಕಿನ ಪಡು-ಮೂಡಕೋಣಾಜೆ ಭಾರತೀಯ ಕಿಸಾನ್ ಸಂಘ (ರಿ.) ಇವರು ಮೂಡುಬಿದಿರೆ ತಾಲೂಕು ಘಟಕದ ಆಶ್ರಯದಲ್ಲಿ ಪಡು-ಮೂಡುಕೋಣಾಜೆ ಗ್ರಾಮ ಸಮಿತಿಯ ವತಿಯಿಂದ ಕಿಸಾನ್ ಜಾಗೃತಿ – ಗ್ರಾಮ ಸಭಾವೇಶ ಹಾಗೂ ಮಾಹಿತಿ ಕಾರ್ಯಾಗಾರವು ಗ್ರಾಮದ ಸಮಾಜ ಮಂದಿರ ಸಂಕೀರ್ಣದ ಆವರಣದಲ್ಲಿ ಜರುಗಿತು.

ಕಾರ್ಯಕ್ರಮದಲ್ಲಿ ಕೃಷಿ ಸಂಬಂಧಿತ ಹೊಸ ತಾಂತ್ರಿಕತೆಗಳು, ಸರಕಾರದ ವಿವಿಧ ಯೋಜನೆಗಳು ಹಾಗೂ ರೈತರ ಸಮಸ್ಯೆಗಳ ಪರಿಹಾರ ಕುರಿತು ಚರ್ಚೆ ನಡೆಯಿತು. ರೈತರ ಜೀವನಮಟ್ಟ ಸುಧಾರಿಸಲು ಸಂಘಟಿತವಾಗಿ ಕೆಲಸ ಮಾಡುವ ಅಗತ್ಯತೆಯನ್ನು ಸಂಪನ್ಮೂಲ ವ್ಯಕ್ತಿಗಳು ತಿಳಿಸಿದರು.

ಮಾಸಿಕ ಕಾರ್ಯಾಗಾರದಲ್ಲಿ ಗ್ರಾಮಸ್ಥರು ತಮಗೆ ಎದುರಾಗಿರುವ ಕೃಷಿ ಸಮಸ್ಯೆಗಳನ್ನು ಹಂಚಿಕೊಂಡು ತಜ್ಞರಿಂದ ಸಲಹೆ ಪಡೆದರು. ಗ್ರಾಮದಲ್ಲಿ ಒಗ್ಗಟ್ಟು, ಸಹಕಾರ ಹಾಗೂ ಜಾಗೃತಿಯ ಮೂಲಕ ಕೃಷಿ ಅಭಿವೃದ್ಧಿ ಸಾಧ್ಯವೆಂಬ ಸಂದೇಶ ಕಾರ್ಯಕ್ರಮದಲ್ಲಿ ಮೂಡಿಬಂದಿತು. ಮುಖ್ಯವಾಗಿ ಜಿಲ್ಲೆಯಲ್ಲಿ ಕೃಷಿಕರಿಗೆ ಸಮಸ್ಯೆಯಾಗಿರುವ ಅಕ್ರಮ ಸಕ್ರಮ ಬಗ್ಗೆಯೂ ವಿಸ್ತಾರವಾಗಿ ಚರ್ಚಿಸಲಾಯಿತು ವರದಿಯಾಗಿದೆ.

ಕಾರ್ಯಕ್ರಮದಲ್ಲಿ ಜಿಲ್ಲಾ ಮತ್ತು ತಾಲೂಕು ಮಟ್ಟದ ಮುಖ್ಯಸ್ಥರು, ಗ್ರಾಮ ಸಮಿತಿ ಸದಸ್ಯರು, ರೈತರು ಹಾಗೂ ಹಿತೈಷಿಗಳು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿದರು.

ವರದಿ: ಮಂದಾರ ರಾಜೇಶ್ ಭಟ್, ತುಳುನಾಡು ವಾರ್ತೆ

LEAVE A REPLY

Please enter your comment!
Please enter your name here