ಜೀಪ್‌–ಬೈಕ್ ಮಧ್ಯೆ ಭೀಕರ ಅಪಘಾತ: ಓರ್ವ ಯುವಕ ಸ್ಥಳದಲ್ಲೇ ಮೃತ್ಯು, ಮತ್ತೊಬ್ಬನ ಸ್ಥಿತಿ ಗಂಭೀರ

0
136

ಬೇಲೂರು: ಬೈಕ್‌ಗೆ ಜೀಪ್ ಡಿಕ್ಕಿಯಾಗಿ ಓರ್ವ ಮೃತಪಟ್ಟಿದ್ದು, ಮತ್ತೋರ್ವ ಗಂಭೀರ ಗಾಯಗೊಂಡ ಘಟನೆ ಸೋಮವಾರ ಮುಂಜಾನೆ ಹೊಸಪೇಟೆ ಬಳಿ ಸಂಭವಿಸಿದೆ. ಮೃತ ಯುವಕನನ್ನು ಅರೇಹಳ್ಳಿ ಹೋಬಳಿಯ ಹಿರೇಹಸಡೆ ಗ್ರಾಮದ ಚಂದನ್ (27) ಎಂದು ಗುರುತಿಸಲಾಗಿದೆ.ಭರತ್ ಎಂಬಾತನಿಗೆ ಗಂಭೀರ ಗಾಯಗಳಾಗಿದ್ದು, ಆತನನ್ನು ಕೂಡಲೇ ಹಾಸನದ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಸಾಗಿಸಲಾಗಿದೆ ಎಂದು ತಿಳಿದು ಬಂದಿದೆ.ಚಂದನ್ ಹಾಗೂ ಭರತ್‌ ಬೇಲೂರಿನಲ್ಲಿ ತಮ್ಮ ಕೆಲಸ ಮುಗಿಸಿಕೊಂಡು ಬೈಕ್‌ನಲ್ಲಿ ತಮ್ಮ ಊರಾದ ಹಿರೇಹಸಡೆ ಗ್ರಾಮದ ಕಡೆಗೆ ಮರಳುತ್ತಿದ್ದಾಗ ಹೊಸಪೇಟೆ ಬಳಿ ಎದುರಿನಿಂದ ಬಂದ ಜೀಪ್ ನಿಯಂತ್ರಣ ತಪ್ಪಿ ಅವರ ಬೈಕ್‌ಗೆ ಡಿಕ್ಕಿಯಾಗಿದೆ ಎಂದು ತಿಳಿದು ಬಂದಿದೆ.ಡಿಕ್ಕಿಯ ರಭಸಕ್ಕೆ ಚಂದನ್ ಸ್ಥಳದಲ್ಲೇ ಮೃತಪಟ್ಟಿದ್ದು, ಭರತ್ ರಸ್ತೆಯ ಬದಿಗೆ ಬಿದ್ದು ಗಂಭೀರ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

banner

LEAVE A REPLY

Please enter your comment!
Please enter your name here