ಅಕ್ಷಯ ಕಾಲೇಜಿನಲ್ಲಿ ‘ಪಿಜ್ಜೇರಿಯಾ’ ಪಿಜ್ಜಾ ಪ್ರಾಯೋಗಿಕ  ಕಾರ್ಯಾಗಾರ ಸಂಪನ್ನ

0
6

ಪುತ್ತೂರಿನ ಅಕ್ಷಯ ಕಾಲೇಜಿನ ‘ಕಾಯು ಅಸೋಸಿಯೇಷನ್’ ವತಿಯಿಂದ  “ಪಿಜ್ಜೇರಿಯಾ” – ಪಿಜ್ಜಾ ತಯಾರಿಕೆಯ ಪ್ರಾಯೋಗಿಕ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.

ಬಿ. ಹೆಚ್. ಎಸ್ ವಿಭಾಗದ ಮುಖ್ಯಸ್ಥರು ಹಾಗೂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅವಿನಾಶ್ ಕೆ. ಆರ್. ಅವರ ನೇತೃತ್ವದಲ್ಲಿ ಈ ಕಾರ್ಯಾಗಾರ ನಡೆಯಿತು. ಗಯಾ ಕೆಫೆ ಮತ್ತು ಆಲುಪ  ಸಂಸ್ಥೆಯ ಸ್ಥಾಪಕರಾದ ಪ್ರಜ್ವಲ್ ಆಲ್ಬರ್ಟ್ ಡಿಸೋಜಾ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ವಿದ್ಯಾರ್ಥಿಗಳಿಗೆ ಪಿಜ್ಜಾ ತಯಾರಿಕೆಗೆ ಬಳಸುವ ಪದಾರ್ಥಗಳು, ತಯಾರಿಕೆಯ ವಿವಿಧ ಹಂತಗಳು ಮತ್ತು ಪಾಕಕಲೆಯ ತಂತ್ರಗಳ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡುತ್ತಾ  ಪಿಜ್ಜಾ ತಯಾರಿಕೆಯನ್ನು ಪ್ರಾಯೋಗಿಕವಾಗಿ ಹೇಳಿಕೊಟ್ಟರು. ಇದರಿಂದ ವಿದ್ಯಾರ್ಥಿಗಳು ಪ್ರಾಯೋಗಿಕ ಅನುಭವವನ್ನು ಪಡೆದುಕೊಂಡರು.

ಇದೇ ವೇಳೆ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯ ಅಧ್ಯಕ್ಷರಾದ  ಜಯಂತ್ ನಡುಬೈಲ್ ರವರು ಆತಿಥ್ಯ ಮತ್ತು ಆಹಾರ ಕ್ಷೇತ್ರದಲ್ಲಿರುವ ವ್ಯಾಪಕ ವೃತ್ತಿ ಅವಕಾಶಗಳ ಕುರಿತು ಬೆಳಕು ಚೆಲ್ಲಿದರು. ಮತ್ತು ಸಂಸ್ಥೆಯು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸುತ್ತಿದ್ದು, ಕೇವಲ ಪಠ್ಯದ ಜ್ಞಾನಕ್ಕೆ ಸೀಮಿತವಾಗದೆ ಪ್ರಾಯೋಗಿಕ ಕೌಶಲ್ಯ, ಉದ್ಯಮ ಕ್ಷೇತ್ರದ ಅನುಭವ, ಸೃಜನಶೀಲತೆ, ಆತ್ಮವಿಶ್ವಾಸ ಹಾಗೂ ವೃತ್ತಿಪರ ಬೆಳವಣಿಗೆಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದು ಹೇಳುತ್ತಾ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.

ಈ ಕಾರ್ಯಾಗಾರವು ವಿದ್ಯಾರ್ಥಿಗಳಿಗೆ ಹೊಸ ಕಲಿಕಾ ಅನುಭವದೊಂದಿಗೆ ಯಶಸ್ವಿಯಾಗಿ ನೆರವೇರಿತು.