ಬೆಳಕು ಸೇವಾ ಟ್ರಸ್ಟ್ ನಿಂದ ಸನ್ಮಾನ ಕಾರ್ಯಕ್ರಮ

0
17

ಬಂಟ್ವಾಳ : ಇಲ್ಲಿನ ಬೆಳಕು ಸೇವಾ ಟ್ರಸ್ಟ್ ಪೆರಾಜೆ ಬುಡೋಳಿ ಇದರ ಮೂರನೇ ವರ್ಷದ ವಾರ್ಷಿಕೋತ್ಸವವು ಸ್ವಾತಂತ್ರ್ಯೋತ್ಸವ ದಿನದಂದು ಮಡಲ ಅಯ್ಯಪ್ಪ ವೃತ ಮಂದಿರದಲ್ಲಿ ಜರುಗಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅಪ್ರಾಯ ಪೈಗಳು ಮಾತನಾಡಿ, ಬೆಳಕು ಸೇವಾ ಟ್ರಸ್ಟ್ ನ ಕಾರ್ಯವೈಖರಿ ಹಾಗೂ ಯುವ ಮನಸ್ಸುಗಳ ಸಮಾಜ ಸೇವೆಯತ್ತ ಇರುವ ತುಡಿತಗಳನ್ನು ಶ್ಲಾಘಿಸಿದರು.

ಈ ಸಂದರ್ಭದಲ್ಲಿ ಪೆರ್ಲಾಪು ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯ ಬಾಬು ಪೂಜಾರಿ ಕೊಪ್ಪಳ ಮಾತನಾಡಿ, ಬೆಳಕು ಟ್ರಸ್ಟ್ ಇನ್ನಷ್ಟು ಬೆಳಗಿ ನಮ್ಮ ಸುತ್ತ ಮುತ್ತಲಿನ ನೊಂದವರ ಪಾಲಿಗೆ ಬೆಳಕಾಗಲಿ ಎಂದು ಶುಭ ನುಡಿದರು. ಪೆರಾಜೆ ಗ್ರಾಮ ಪಂಚಾಯತಿನ ಅಧ್ಯಕ್ಷ ಕುಶಾಲ ಎಂ ಪೆರಾಜೆ, ಪೆರಾಜೆ ಪಂಚಾಯತ್ ಸದಸ್ಯ ಹರೀಶ್ ರೈ ಪಾನೋರು, ಶೇರಾ ಉದಯ ಯುವಕ ಮಂಡಲದ ಅಧ್ಯಕ್ಷ ರವಿ ಶೇರಾ, ಮಾಜಿ ಸೈನಿಕ ಕೃಷ್ಣ ಗೌಡರವರು ಕಾರ್ಯಕ್ರಮಕ್ಕೆ ಆಗಮಿಸಿ ಶುಭ ಹಾರೈಸಿದರು.

ಸ್ಥಳೀಯ ಅಂಬ್ಯುಲೆನ್ಸ್ ಚಾಲಕರಾದ ಶಂಶೀರ್ ಬುಡೋಳಿ ಮತ್ತು ಗೌರಿಶಂಕರ್ ಪೆರ್ಲಾಪು ಇವರನ್ನು ಈ ಸಂದರ್ಭದಲ್ಲಿ ಬೆಳಕು ಸೇವಾ ಟ್ರಸ್ಟ್ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು ಮತ್ತು ಪುತ್ತೂರಿನ ಪ್ರಜ್ಞಾ ಆಶ್ರಮಕ್ಕೆ ನಗದು ಕೊಡುಗೆ ಹಾಗೂ ಯಶೋದರ ಕೊಡಾಜೆ ರವರಿಗೆ ಅರೋಗ್ಯ ನಿಧಿ ನೀಡಲಾಯಿತು. ಸೇವಾ ಸಮಿತಿಯ ಸದಸ್ಯರು, ಸ್ಥಳೀಯರು ಉಪಸ್ಥಿತರಿದ್ದರು. ಬೆಳಕು ಸೇವಾ ಟ್ರಸ್ಟ್ ಅಧ್ಯಕ್ಷ ಲೋಹಿತ್ ಮಡಲ ಸ್ವಾಗತಿಸಿ, ಕಾರ್ಯದರ್ಶಿ ಪ್ರದೀಪ್ ಮಡಲ ವಂದಿಸಿದರು. ಸದಸ್ಯರಾದ ಸಚಿನ್ ಮಂಜೊಟ್ಟಿ ನಿರೂಪಿಸಿದರು.