ಮಂಗಳೂರು: ಯಕ್ಷ ತುಳು ಪರ್ಬ ಮಂಗಳೂರು ಸಂಯೋಜನೆಯಲ್ಲಿ ಆಗಸ್ಟ್ 23ರಂದು ಮಂಗಳೂರು ಪುರಭವನದಲ್ಲಿ ‘ಯಕ್ಷ ತುಳು ಪರ್ಬ’ ಕಾರ್ಯಕ್ರಮ ಆಯೋಜಿಸಲಾಗಿದೆ.
ಮಧ್ಯಾಹ್ನ 3ರಿಂದ ರಾತ್ರಿ 9ರವರೆಗೆ ನಡೆಯಲಿರುವ ಕಾರ್ಯಕ್ರಮವು ದಿ. ಚೆನ್ನಪ್ಪ ಶೆಟ್ಟಿ ಸಿದ್ದಕಟ್ಟೆ ಅವರ ವೇದಿಕೆಯಲ್ಲಿ, ದಿ. ಕರ್ನೂರು ಕೊರಗಪ್ಪ ರೈ ಅವರ ಸಂಸ್ಮರಣೆಯೊಂದಿಗೆ ನಡೆಯಲಿದೆ.
ಈ ಸಂದರ್ಭದಲ್ಲಿ ಯಕ್ಷರಂಗದ ಹಿರಿಯ ಭಾಗವತರಾದ ಶ್ರೀ ಪುತ್ತಿಗೆ ರಘುರಾಮ ಹೊಳ್ಳ ಅವರಿಗೆ ಗೌರವ ಸನ್ಮಾನ ನೆರವೇರಿಸಲಾಗುವುದು. ಬಳಿಕ ಡಿ. ಮನೋಹರ್ ಕುಮಾರ್ ವಿರಚಿತ ‘ಗೆಜ್ಜೆದ ಪೂಜೆ’ ಎಂಬ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಯಕ್ಷಗಾನ ಹಾಗೂ ತುಳು ಕಲೆಯ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿ, ತನು–ಮನ–ಧನದ ಸಹಕಾರದೊಂದಿಗೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಯಕ್ಷ ಬೊಳ್ಳಿ ಕಡಬ ದಿನೇಶ್ ರೈ ಅವರು ಮನವಿ ಮಾಡಿದ್ದಾರೆ.

