ಮಂಗಳೂರು: ಮಿಲಾಗ್ರೆಸ್ ಕಾಲೇಜುಹಂಪನಕಟ್ಟೆಯಲ್ಲಿ ‘ಫೆಲೀಸ್ ನಾವಿದಾದ್ – ಕ್ರಿಸ್‌ಮಸ್ ಆಚರಣೆಯು ಕಾಲೇಜಿನಸಭಾಂಗಣದಲ್ಲಿ ನೆರವೇರಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಗ್ಲಾಡ್ಸಮ್ ಹೋಮ್, ಮಂಗಳೂರುಇಲ್ಲಿನ ನಿರ್ದೇಶಕರಾದ ರೆ. ಫಾ. ಆಂಟನಿ ಕ್ಲಾನಿ ಡಿಸೋಜಾ ಮಾತನಾಡಿ ‘ಸರ್ವ ಧರ್ಮಗಳು ಸಮನ್ವಯವಾಗಿ ಕ್ರಿಸ್ಮಸ್ ಹಬ್ಬವನ್ನು ಆಚರಿಸುತ್ತೇವೆ. ಎಲ್ಲರನ್ನು ಒಳಗೊಂಡುಆಚರಿಸಲ್ಪಡುವ ಈ ಹಬ್ಬ ಸಾಮರಸ್ಯದ ಸಂಕೇತವಾಗಿದೆಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರು ಹಾಗೂ ಕ್ಯಾಂಪಸ್ ಡೈರೆಕ್ಟರ್ ಆಗಿರುವ ರೆ. ಡಾ. ಅಲ್ವಿನ್ ಸೆರಾವೊ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿಉಪ ಪ್ರಾಂಶುಪಾಲೆ ಗ್ಲಾನ್ಶಿಯ ಫರ್ನಾಂಡಿಸ್, ಐಕ್ಯೂಎಸಿ ಸಂಯೋಜಕಿಚೇತನಾ ಕುಮಾರಿ ಹಾಗೂ ಉಪನ್ಯಾಸಕವೃಂದದವರು ಉಪಸ್ಥಿತರಿದ್ದರು.
ಕಾಲೇಜಿನ ವಿದ್ಯಾರ್ಥಿಗಳಿಂದ ನೃತ್ಯ ಹಾಗೂ ಸಂಗೀತ ಕಾರ್ಯಕ್ರಮ ನಡೆಯಿತು. ಕ್ರಿಸ್ಮಸ್ ನ ಸಂಕೇತವಾದ ಸಾಂತಾ ಕ್ಲಾಸ್ಕಾರ್ಯಕ್ರಮದಲ್ಲಿ ಗಮನಸೆಳೆಯಿತು.
ಉಪನ್ಯಾಸಕರಾದ ಜೋಯಲ್ ಮಸ್ಕರೇನಸ್ ಸ್ವಾಗತಿಸಿದರು. ವಿಶೇಷ ಕಾರ್ಯಕ್ರಮ ಸಂಯೋಜಕಿ ಮಿಸ್ ಪ್ರೀಮಲ್ ರಿಯಾ ಕ್ರಾಸ್ಟಾ ವಂದಿಸಿದರು. ಮೆಲಿಟಾಕ್ರಾಸ್ತಾ ನಿರೂಪಿಸಿದರು.

