FIDE ರೇಟೆಡ್ ಅಂತಾರಾಷ್ಟ್ರೀಯ ಚೆಸ್ ಟೂರ್ನಮೆಂಟ್ ಗೆ ಚಾಲನೆ

0
173

ಮಂಗಳೂರು: ಶಾರದ ವಿದ್ಯಾಲಯದ ಭುವರಾಹ ಅಟ್ರಿಯಂ ಹೊರಾಂಗಣದಲ್ಲಿ ಆರು ದಿನಗಳ FIDE ರೇಟೆಡ್ ಅಂತಾರಾಷ್ಟ್ರೀಯ ಚೆಸ್ ಟೂರ್ನಮೆಂಟ್ ಗೆ ಚಾಲನೆ ದೊರಕಿತು.

ಉದ್ಘಾಟನಾ ಸಮಾರಂಭದಲ್ಲಿ ದಕ್ಷಿಣ ಕನ್ನಡದ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಅನಿಲ್ ಭೂಮರೆಡ್ಡಿ, ಶಾರದ ವಿದ್ಯಾಲಯ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಡಾ. ಎಂ.ಬಿ. ಪುರಾಣಿಕ್, ಕರ್ನಾಟಕ ಚೆಸ್ ಅಸೋಸಿಯೇಷನ್ ಅಧ್ಯಕ್ಷರಾದ ಟಿ.ಎನ್. ಮಧುಕರ, ದಕ್ಷಿಣ ಕನ್ನಡ ಚೆಸ್ ಅಸೋಸಿಯೇಷನ್ ಚುನಾವಣೆಯಾದ ಅಧ್ಯಕ್ಷೆ ಡಾ. ಅಮರ್‌ ಅಮರನಾಥ ಶೆಟ್ಟಿ ಹಾಗೂ ಪ್ರಸ್ತುತ ಅಧ್ಯಕ್ಷರಾದ ರಮೇಶ್ ಕೋಟೆ ಮುಖ್ಯ ಅತಿಥಿಗಳಾಗಿ ಹಾಜರಿದ್ದರು.

ಕಾರ್ಯಕ್ರಮದಲ್ಲಿ Rao’s Chess Corner ಸಂಸ್ಥಾಪಕರಾದ ಅಂತರರಾಷ್ಟ್ರೀಯ ಮಾಸ್ಟರ್ ಶರಣ್ ರಾವ್, ವುಮನ್ ಅಂತರರಾಷ್ಟ್ರೀಯ ಮಾಸ್ಟರ್ ಇಶಾ ಶರ್ಮಾ, ಸಂಘಟಕರಾದ ಡಾ. ಶುಭಾನಂದ ರಾವ್, ಬೆಳಕು ಸಂಸ್ಥೆಯ  ಜ್ಯೋತಿ ಎಸ್. ರಾವ್,   ಹಾಗೂ ಡಾ. ಕೀರ್ತನ್ ರಾವ್ ಉಪಸ್ಥಿತರಿದ್ದರು. ಕಾರ್ಯಕ್ರಮ ನಿರೂಪಣೆಯನ್ನು ಅಶೆಲ್ ಡಿ’ಸಿಲ್ವಾ ನಿರ್ವಹಿಸಿದರು.

LEAVE A REPLY

Please enter your comment!
Please enter your name here